“ಯಶೋದಾ” ಟೀಸರ್ ರಿಲೀಸ್ ಡೇಟ್ ಫಿಕ್ಸ್ ಆಯ್ತು ; ಯಾವಾಗ ಬರಲಿದ್ದಾಳೆ ಪ್ರೇಕ್ಷಕರ ಮುಂದೆ ಯಶೋದಾ?
ಸೌತ್ ಇಂಡಿಯನ್ ಆಕ್ಟ್ರೆಸ್ಸ್ ನಲ್ಲಿ ಹಲವಾರು ಬೆಡಗಿಯರು ಇದ್ದಾರೆ. ಅದರಲ್ಲಿ ವೈಟ್ ಬ್ಯೂಟಿ, ಸಮಂತ ಕೂಡ ಒಬ್ಬಳು. ರಂಗಸ್ಥಲಂ, ಖುಷಿ, ತೇರಿ ಹೀಗೆ ಹತ್ತು ಹಲವು ಸಿನಿಮಾಗಳನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 2021 ರಲ್ಲಿ ಬಿಡುಗಡೆಯಾದ ಪುಷ್ಪಾ ಸಿನಿಮಾದಲ್ಲಿ ಸಮಂತ ಐಟಂ ಸಾಂಗೆ ಡ್ಯಾನ್ಸ್ ಮಾಡಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಳು.
ಅದಾದ ನಂತರ ಆಕೆಯ ಯಾವ ಸಿನಿಮಾ ತೆರೆಗೆ ಬರಲಿಲ್ಲ. ಆದರೆ ಇದೀಗ ಹರೀಶ್ ನಿರ್ದೇಶನದ, ಶಿವಲೆಂತ ಕೃಷ್ಣಪ್ರಸಾದ್ ನಿರ್ಮಾಣದ, ಮಣಿ ಶರ್ಮ ನಿರ್ದೇಶಿಸಿದ್ದು ಹಾಗೂ ಸಮಂತ ಅಭಿನಯದ ಶ್ರೀದೇವಿ ಮೂವೀಸ್ ಬ್ಯಾನರ್ ಅಡಿಯಲ್ಲಿ”ಯಶೋದಾ” ತೆರಿಗೆ ಬರಲು ಸಜ್ಜಾಗಿದೆ.
ಅದಕ್ಕೂ ಮೊದಲು ‘ಯಶೋದಾ’ ಟೀಸರ್ ರಿಲೀಸ್ ಆಗುವ ಬಗ್ಗೆ ಸಮಂತ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಗಸ್ಟ್ 12ರಂದು ತಲೆ ಮೇಲೆ ಬರಬೇಕಾಗಿದ್ದ ಈ ಸಿನಿಮಾವು ಕೆಲವು ಕಾರಣಾಂತರಗಳಿಂದ ಅಸಾಧ್ಯವಾಯಿತು. ಇದೀಗ ಸೆಪ್ಟೆಂಬರ್ 9 ರಂದು “ಯಶೋದಾ” ದ ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳ್ಳಲಿದೆ.
ಸಮಂತಾ ಸೇರಿದಂತೆ ಉನ್ನಿ ಮುಕುಂದನ್, ರಾವ್ ರಮೇಶ್, ವರಲಕ್ಷ್ಮಿ ಶರತ್ ಕುಮಾರ್, ಪ್ರಿಯಾಂಕ ಶರ್ಮಾ, ಕಲ್ಪಿಕ ಗಣೇಶ್, ಮುರುಳಿ ಶರ್ಮ, ಸಂಪತ್ ರಾಜ್ ಹಾಗೂ ಇನ್ನಿತರ ನೀರು ನಟರು ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೀಸರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರುವ ದಿನಾಂಕವನ್ನು ಕೂಡ ತಂಡ ಹೇಳಲಿದ್ದಾರೆ.