ಊಹಿಸಲಸಾಧ್ಯವಾದ ವಿಶ್ವದ ಅತೀ ಚಿಕ್ಕ ವಾಷಿಂಗ್ ಮೆಷಿನ್ | ಇದನ್ನು ಕಿಸೆಯಲ್ಲಿಟ್ಟುಕೊಂಡು ಹೋಗಬಹುದು ಕಣ್ರಿ

ಹೆಣ್ಮಕ್ಕಳಿಗೆ ಬಟ್ಟೆ ಒಗೆಯುವುದು ಎಂದರೆ ಅಷ್ಟಕಷ್ಟೇ. ಆದರೂ ಇಷ್ಟನೋ ಕಷ್ಟನೋ ಹೆಣ್ಮಕ್ಕಳು ಬಟ್ಟೆ ಒಗೆಯುತ್ತಾರೆ. ಹಾಗೆನೇ ಹೆಚ್ಚಾಗಿ ಹೆಂಗಳೆಯರು ಈ ವಾಷಿಂಗ್ ಮೆಷಿನ್ ಮೊರೆಹೋಗುವುದು ಸಾಮಾನ್ಯ. ಮನೆಯಲ್ಲಿ ವಾಷಿಂಗ್ ಮೆಷಿನ್ ತಂದು ಅದಕ್ಕೆ ಬಟ್ಟೆ ಹಾಕಿ ಕ್ಲೀನ್ ಮಾಡುವುದು ಅದೆಲ್ಲಾ ಈಗ ಸಾಮಾನ್ಯ.
ಈಗಂತೂ ವಾಷಿಂಗ್ ಮೆಷಿನ್ ಬಟ್ಟೆ ತೊಳೆಯುವುದು ಮಾತ್ರವಲ್ಲ ಅದನ್ನು ಒಣಗಿಸುವ ಕೆಲಸವನ್ನು ಮಾಡುತ್ತದೆ. ಹಾಗಾಗಿ ವಾಷಿಂಗ್ ಮೆಷಿನ್ ಮಹಿಳೆಯರ ಬಟ್ಟೆ ಒಗೆಯುವ ಸಮಯವನ್ನು ಉಳಿಸುತ್ತದೆ ಮತ್ತು ಅವರಿಗೆ ಸಹಾಯ ಮಾಡುವುದರಲ್ಲಿ ಎರಡು ಮಾತಿಲ್ಲ.

ಆದರೆ ತಂತ್ರಜ್ಞಾನ ಇನ್ನೂ ಮುಂದುವರಿದಿದೆ. ಈಗ ವಾಷಿಂಗ್ ಮೆಷಿನ್ ( washing machine) ನಿಮ್ಮ ಪಾಕೆಟ್ ( pocket) ನಲ್ಲೇ ಇಡಬಹುದು ಅಂದರೇ ನಂಬುತ್ತೀರಾ? ಹೌದು ನಂಬಲೇ ಬೇಕು. ಬನ್ನಿ ಏನು ವಿಷಯ ಅಂತ ಹೇಳ್ತೀವಿ.

ನಿಮಗೆ ಗೊತ್ತಾ? ವಿಶ್ವದ ಅತಿ ಚಿಕ್ಕದಾದ ಮತ್ತು
ಕೈಯಲ್ಲಿ ಹಿಡಿದು ಕೊಂಡೊಯ್ಯಬಹುದಾದ ವಾಷಿಂಗ್ ಮೆಷಿನ್ ಮಾರುಕಟ್ಟೆಯಲ್ಲಿದೆ. ಮತ್ತೊಂದು ಸಂಗತಿ ಎಂದರೆ ಈ ವಾಷಿಂಗ್ ಮೆಷಿನ್ ಅನ್ನು ಶರ್ಟ್ ಕಿಸೆಯಲ್ಲಿ ಮತ್ತು ಪ್ಯಾಂಟ್ ಕಿಸೆಯಲ್ಲೂ ಹಾಕಿಕೊಂಡು ಎಲ್ಲಿ ಬೇಕೋ ಅಲ್ಲಿಗೆ ಹೋಗಬಹುದು. ನಿಜಕ್ಕೂ ನೀವು ಇದನ್ನು ನಂಬಲ್ಲ. ಆದರೆ ಇದು ಸತ್ಯ. ಕೈಯಲ್ಲಿ ಹಿಡಿದುಕೊಂಡು ಹೋಗುವ ವಾಷಿಂಗ್ ಮೆಷಿನ್ ಇದೆ ಎಂದರೆ ನಂಬಲು ಅಸಾಧ್ಯ. ಆದರೆ ಈ ಫೋಟೋ ನೋಡಿದ ನಂತರ ನಿಮಗೆ ನಂಬಿಕೆ ಬರಬಹುದು. ಹೌದು. ಇದು ವಿಶ್ವದ ಅತಿ ಚಿಕ್ಕದಾದ ಮತ್ತು ಪ್ರಯಾಣದ ವೇಳೆ ತೆಗೆದುಕೊಂಡು ಹೋಗಬಹುದಾದ ವಾಷಿಂಗ್ ಮೆಷಿನ್ ಇದಾಗಿದೆ.

ಇದು ಪ್ಲಾಸ್ಟಿಕ್ ಝಿಪ್ಪರ್ ಬ್ಯಾಗ್ ಆಗಿದ್ದು, ಜಪಾನಿನ ಕಂಪನಿ ಕಾವೋ ಇದನ್ನು ಸಿದ್ಧಪಡಿಸಿದೆ. ಅಟ್ಯಾಕ್ ಝೀರೋ ಲಾಂಡ್ರಿ ಬ್ಯಾಗ್ ಎಂದು ಇದನ್ನು ಕರೆಯಲಾಗುತ್ತದೆ. ಇದು 5 ಲೀಟರ್ ಝಿಪ್ಪರ್ ಬ್ಯಾಗ್ ಅನ್ನು ಎಲ್ಲಿ ಬೇಕಾದರೂ ಪ್ರಯಾಣಿಸುವಾಗ ಕೊಂಡೊಯ್ಯಬಹುದಾಗಿದೆ. ನಿಮ್ಮ ಕೊಳಕು ಬಟ್ಟೆಯನ್ನು ಈ ಝಿಪ್ಪರ್ ಬ್ಯಾಕ್ನಲ್ಲಿರಿಸಿ, ಜೊತೆಗೆ ಡಿಟರ್ಜೆಂಟ್ ಬೆರೆಸಿ. ಬಳಿಕ ನೀರು ತುಂಬಿಸಿ. ನಂತರ ಝಿಪ್ಪರ್ ಬ್ಯಾಗ್ ಮುಚ್ಚಿ. ಇಷ್ಟಾದ ಬಳಿಕ ಅಲುಗಾಡಿಸಿ, ನಂತರ ಝಿಪ್ ತೆಗೆದು ಕೊಳಕು ನೀರು ಹೊರಗೆ ಹಾಕಿ, ಹೊಸ ನೀರು ಸೇರಿಸಿ ಮತ್ತೆ ಮೊದಲಿನಂತೆಯೇ ಮಾಡಿ.

ಈ ಸಾಧನ ಮಹಿಳೆಯರಿಗೆ ಉಪಯೋಗವಾಗಲಿದೆ. ಮಹಿಳೆಗಾಗಿ ಈ ಝಿಪ್ಪರ್ ಬ್ಯಾಗ್ ಅನ್ನು ಸಿದ್ಧಪಡಿಸಲಾಗಿದೆ. ಪ್ರಯಾಣದ ವೇಳೆ ಅಥವಾ ಸಮಯದ ಅಭಾವವಿದ್ದಾಗ ವಾಷಿಂಗ್ ಮಷಿನ್ನ್ ಹಾಕುವ ಬದಲು ಈ ಝಿಪ್ಪರ್ ಬ್ಯಾಗ್ ಜೊತೆಗೆ ಇದ್ದರೆ ಸಮಸ್ಯೆ ಮಾಯ. ಏನಂತೀರಿ?

Leave A Reply

Your email address will not be published.