Bigg Boss ಮನೆಯಲ್ಲಿ ಹುಡುಗರಿಗೆ ಹೊರಗಿನಿಂದ “ಒಂದು ವಸ್ತು” ಸಿಗುತ್ತಿದೆ | ಸೋನು ಗೌಡ ರಿವೀಲ್ ಮಾಡಿದ್ಳು ಆ ಗುಟ್ಟು

‘ಬಿಗ್ ಬಾಸ್ ಒಟಿಟಿ’ (Bigg Boss OTT) ನಿಜಕ್ಕೂ ದಿನ ಹೋದಂತೆ ಒಂದು ರೀತಿಯ ಉತ್ಸಾಹ ಮೂಡುವಂತೆ ಮಾಡುತ್ತಿದೆ. ಈಗಾಗಲೇ ಈ ಶೋ ಸ್ಟಾರ್ಟ್ ಆಗಿ 25 ದಿನ ಕಳೆದಿದೆ. ಒಟ್ಟು 42 ದಿನಗಳ ಒಟಿಟಿ ಶೋ ಇದಾಗಿದ್ದು, ಆ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಲಿದೆ. ಎಲ್ಲಾ ಬಿಗ್ ಬಾಸ್ ಅಭಿಮಾನಿಗಳು ಟಿವಿ ಶೋಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

 

ಎಲ್ಲರಿಗೂ ತಿಳಿದಿರುವ ಹಾಗೇ, ಬಿಗ್ ಬಾಸ್ ಮನೆಗೆ ಹೊರಗಿನಿಂದ ಏನೇ ಬಂದರೂ ಅದನ್ನು ಪರಿಶೀಲಿಸಿ ಅಷ್ಟು ಮಾತ್ರವಲ್ಲ, ಅದನ್ನು ಕೊಡಬಹುದೇ ಅಥವಾ ಬೇಡವೇ ಎಂದು ಬಿಗ್ ಬಾಸ್ ಡಿಸೈಡ್ ಮಾಡುತ್ತಾರೆ. ಹಾಗೆನೇ, ಬಿಗ್ ಬಾಸ್‌ನಲ್ಲಿ ತಿನ್ನುವ ಯಾವುದೇ ವಸ್ತುಗಳನ್ನು ಹೊರಗಿನಿಂದ ತರುವಂತಿಲ್ಲ. ಎಲ್ಲವನ್ನೂ ಚೆಕ್ ಮಾಡಿದ ನಂತರವೇ ಸ್ಪರ್ಧಿಗಳಿಗೆ ಒಳಗೆ ಕಳುಹಿಸಲಾಗುತ್ತದೆ. ಬಿಗ್ ಬಾಸ್ ಮನೆಯಲ್ಲಿ ಸಿಗುವುದನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕು.

ಈ ಮಧ್ಯೆ ಸ್ಪರ್ಧಿಗಳಿಗೆ ಹೊರಗಿಂದ ಒಂದು ವಸ್ತು ಪೂರೈಕೆ ಆಗುತ್ತಿರುವ ಬಗ್ಗೆ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಆರೋಪ ಮಾಡಿದ್ದಾರೆ. ಇದು ಸರಿ ಅಲ್ಲ ಎಂಬುದನ್ನೂ ಹೇಳಿದ್ದಾರೆ. ಅಷ್ಟಕ್ಕೂ ಏನು ಅದು? ಇಲ್ಲಿದೆ ನೋಡಿ ಉತ್ತರ.

ಆದರೆ, ಬಿಗ್ ಬಾಸ್‌ನಲ್ಲಿ ಪುರುಷ ಸ್ಪರ್ಧಿಗಳಿಗೆ ಹೊರಗಿನಿಂದ ಪ್ರೋಟಿನ್ ಪೌಡರ್ ತರೋಕೆ ಅವಕಾಶ ಇದೆ ಎಂಬುದನ್ನು ಸೋನು ಗೌಡ ಹೇಳಿದ್ದಾರೆ.

ಟ್ರೋಲ್ ಗಳಿಂದಲೇ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ನಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲರ ಜತೆ ಜೋಕ್ ಮಾಡುತ್ತಾ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈಗ ಅವರು ನೀಡಿದ ಒಂದು ಹೇಳಿಕೆ ನಿಜಕ್ಕೂ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

‘ಅಮ್ಮ ನನಗೆ ಮನೆಯಿಂದ ಹಾರ್ಲಿಕ್ಸ್ ಪೌಡರ್ ಕಳುಹಿಸಿ’ ಎಂದಿದ್ದಾರೆ ಸೋನು. ಇದಕ್ಕೆ ಅವಕಾಶ ಇಲ್ಲ ಎಂಬ ಮಾತನ್ನು ಮನೆ ಮಂದಿ ಹೇಳಿದರು. ‘ಮನೆಯಿಂದ ಯಾವ ವಸ್ತುಗಳನ್ನು ಪಡೆದುಕೊಳ್ಳುವಂತಿಲ್ಲ. ಎಲ್ಲರಿಗೂ ಇದು ಅಪ್ಲೈ ಆಗುತ್ತದೆ’ ಎಂದಿದ್ದಾರೆ ಮನೆ ಮಂದಿ. ಇದಕ್ಕೆ ಸೋನು ಶ್ರೀನಿವಾಸ್ ಗೌಡ ಕೂಡಲೇ, ‘ಹುಡುಗರಿಗೆ ಪ್ರೋಟಿನ್ ಪೌಡರ್ ಕಳಿಸ್ತಾರೆ. ಆದರೆ, ನಮಗೆ ಯಾಕೆ ಹಾರ್ಲಿಕ್ಸ್ ತರೋಕೆ ಏಕೆ ಅವಕಾಶ ಇಲ್ಲ. ಇದು ಮೋಸ’ ಎಂದು ಬೇಸರ ಹೊರಹಾಕಿದರು ಅವರು. ಸೋನು ಹೇಳಿದ ಮಾತು ಕೇಳಿ ಮನೆ ಮಂದಿ ಸುಮ್ಮನಾದರು.

Leave A Reply

Your email address will not be published.