Home latest ತೊಟ್ಟಿಲಿನಲ್ಲಿ ಆಟವಾಡುತ್ತಿದ್ದ ಮಗು ಹಗ್ಗಕ್ಕೆ ಸಿಲುಕಿ ಸಾವು ! ಪೋಷಕರ ಉಪಸ್ಥಿತಿಯಲ್ಲೇ ನಡೆಯಿತು ಈ ದಾರುಣ...

ತೊಟ್ಟಿಲಿನಲ್ಲಿ ಆಟವಾಡುತ್ತಿದ್ದ ಮಗು ಹಗ್ಗಕ್ಕೆ ಸಿಲುಕಿ ಸಾವು ! ಪೋಷಕರ ಉಪಸ್ಥಿತಿಯಲ್ಲೇ ನಡೆಯಿತು ಈ ದಾರುಣ ಘಟನೆ

Hindu neighbor gifts plot of land

Hindu neighbour gifts land to Muslim journalist

ತೊಟ್ಟಿಲಿನಲ್ಲಿ ಆಟವಾಡುತ್ತಿದ್ದ ಮಗುವೊಂದು, ತೊಟ್ಟಿಲಿಗೆ ಕಟ್ಟಿದ ಹಗ್ಗದಿಂದಲೇ ಸಾವು ಕಂಡ ಪ್ರಕರಣವೊಂದು ನಡೆದಿದೆ. ಪ್ರತಿದಿನವೂ ಮಲಗುವ ತೊಟ್ಟಿಲೇ ಆ ಮಗುವಿಗೆ ನೇಣು ಹಗ್ಗವಾಗಿ ಪರಿಣಮಿಸಿದೆ.

ತೊಟ್ಟಿಲಿಗೆ ಕಟ್ಟಿರುವ ಹಗ್ಗದ ಮಧ್ಯೆ ಎಂಟು ತಿಂಗಳ ಮಗುವಿನ ಕುತ್ತಿಗೆ ಸಿಲುಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ, ಗಂಭೀರರಾವ್ ಪೇಟೆ ತಾಲೂಕಿನಲ್ಲಿ ಮಂಗಳವಾರ ನಡೆದಿದೆ.

ಸಂಬಂಧಿಕರು ಮತ್ತು ಕುಟುಂಬಸ್ಥರ ಪ್ರಕಾರ, ಮುಸ್ತಫಾನಗರ ಗ್ರಾಮದ ಬಂಡಿ ದಿಲೀಪ್ ಮತ್ತು ಕಲ್ಯಾಣಿ ಅವರಿಗೆ ಒಬ್ಬ ಮಗ (3 ವರ್ಷ) ಮತ್ತು ಮಗಳು (8 ತಿಂಗಳು) ಇದ್ದರು. ದಿಲೀಪ್ ತಹಶೀಲ್ದಾರ್ ಕಚೇರಿಯಲ್ಲಿ ವಿಆರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬ ಮನೆಯೊಂದರ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದು, ಮಂಗಳವಾರ ಬೆಳಗ್ಗೆ ಒಂಬತ್ತು ಗಂಟೆ ವೇಳೆಗೆ ದಿಲೀಪ್ ಮಲಗಿದ್ದಾಗ ತಾಯಿ ತನ್ನ ಮಗಳು ಐರಾಳನ್ನು ನೈಲಾನ್ ಹಗ್ಗದಿಂದ ಕಟ್ಟಿದ ತೊಟ್ಟಿಲಲ್ಲಿ ಹಾಕಿದ್ದಾರೆ.

ಮಗುವಿನ ಮೇಲೆ ಬೇಬಿ ಶಾಲ್ ಅನ್ನು ಸಹ ಹಾಕಿದ್ದರು. ಬಳಿಕ ತಾಯಿ ಮನೆ ಕೆಳಗೆ ಬಟ್ಟೆ ಒಗೆಯಲು ತೆರಳಿದ್ದರು. ಮಲಗಿದ್ದ ಐರಾ ನಿದ್ದೆಯಿಂದ ಎದ್ದು ತೊಟ್ಟಿಲಲ್ಲೇ ಒದ್ದಾಡಿದ್ದಾಳೆ. ಈ ಕ್ರಮದಲ್ಲಿ ನೈಲಾನ್ ಹಗ್ಗದ ಮಧ್ಯೆ ಐರಾಳ ತಲೆ ಸಿಲುಕಿಕೊಂಡಿತ್ತು. ಆದರೆ ಕೂಡಲೇ ಉಸಿರುಗಟ್ಟಿದ್ದರಿಂದ ಐರಾ ಮೂರ್ಛೆ ಹೋಗಿದ್ದಳು. ಬಟ್ಟೆ ತೊಳೆದ ನಂತರ ತಾಯಿ ಹಿಂತಿರುಗಿ ಮಗುವನ್ನು ನೋಡಿದ್ದಾರೆ. ಮಲಗಿದೆ ಎಂದುಕೊಂಡಿದ್ದ ತಾಯಿ ಮಗುವಿನ ಚಲನವಲನ ಇಲ್ಲದ ಕಾರಣ ಶಾಲ್ ತೆಗೆದು ನೋಡಿದ್ದಾರೆ. ಕೂಡಲೇ ಮೂರ್ಛೆ ಹೋಗಿದ್ದ ಮಗುವನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಉಸಿರುಗಟ್ಟಿ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಕುರಿತು ಯಾವುದೇ ದೂರು ಬಂದಿಲ್ಲ ಎಂದು ಗಂಭೀರ್‌ಪೇಟೆ ಎಸ್ಎಸ್ಎಐ ಮಹೇಶ್ ತಿಳಿಸಿದ್ದಾರೆ