ಸುಳ್ಯ : ಅನ್ಯಕೋಮಿನ ವಿದ್ಯಾರ್ಥಿಗೆ ಕಾಲೇಜಿನಲ್ಲಿ ಥಳಿತ | 7 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

ಸುಳ್ಯ ( Sullia) : ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಭಿನ್ನಕೋಮಿನವರಾಗಿದ್ದು, ಇಬ್ಬರೂ ಜೊತೆಯಾಗಿ ಇದ್ದರು ಎಂಬುದನ್ನೇ ನೆಪಮಾಡಿಕೊಂಡು, ಇದನ್ನು ಆಕ್ಷೇಪಿಸಿದ್ದು, ಜೊತೆಗೆ ನೈತಿಕ ಪೊಲೀಸ್ ಗಿರಿ ನಡೆಸಿದಂತಹ ಘಟನೆಯೊಂದು ಆ.30 ರಂದು ಸುಳ್ಯದಲ್ಲಿ ಕೇಳಿ ಬಂದಿತ್ತು. ಇದೀಗ ಈ ಘಟನೆ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲಾಗಿದೆ.

7 ಜನ ವಿದ್ಯಾರ್ಥಿಗಳು, ಓರ್ವ ವಿದ್ಯಾರ್ಥಿಗೆ ತನ್ನದೇ ಕಾಲೇಜಿನ ವಿದ್ಯಾರ್ಥಿನಿಯೋರ್ವಳ ಜೊತೆ ಮಾತಾಡಿದ್ದಕ್ಕೆ, ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಸುಳ್ಯದ ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪೊಲೀಸ್ ದೂರು ನೀಡಿದ್ದಾನೆ. ಆ ಆ. 30 ರಂದು ರಾತ್ರಿ ಪ್ರಕರಣ ದಾಖಲಾಗಿದೆ.

ಸುಳ್ಯ ತಾಲೂಕಿನ ಜಾಲ್ಕೂರು ಗ್ರಾಮದ ಸೋಣಂಗೇರೆ ಬಳಿಯ ಪೈಚಾರ್ ಮನೆ ನಿವಾಸಿ ಲತೀಫ್ ಎಂಬವರ ಪುತ್ರ ಮಹಮ್ಮದ್ ಸನೀಫ್ (19) ಎಂಬವರು ಹಲ್ಲೆಯಾದ ಬಗ್ಗೆ ದೂರು ನೀಡಿದವರು. ಈತ ಸುಳ್ಯದ ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ .ಕಾಂ ವಿದ್ಯಾರ್ಥಿ.

ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಬಿಎ ವಿಧ್ಯಾರ್ಥಿಗಳಾದ ದೀಕ್ಷಿತ್, ಧನುಷ್, ಪ್ರಜ್ವಲ್ ( ಅಂತಿಮ ವರ್ಷದ ಬಿಬಿಎ), ತನುಜ್ (ಅಂತಿಮ ವರ್ಷದ ಬಿಕಾಂ) ಅಕ್ಷಯ್ (ದ್ವಿತಿಯ ವರ್ಷದ ಬಿಕಾಂ) ಮೋಕ್ಷಿತ್ (ಅಂತಿಮ ವರ್ಷದ ಬಿಕಾಂ) ಹಾಗೂ ಗೌತಮ್ (ಎನ್ ಎಂಸಿ ಕಾಲೇಜು) ಹಲ್ಲೆ ನಡೆಸಿದಂತಹ ಆರೋಪಿಗಳು.

ದೂರುದಾರ ಸನೀಫ್ ಹಾಗೂ ಅದೇ ಕಾಲೇಜಿನ ವಿದ್ಯಾರ್ಥಿನಿ ಪಲ್ಲವಿ ಎಂಬ ಹುಡುಗಿ ಸ್ನೇಹಿತರು. ಇವರಿಬ್ಬರ ಸ್ನೇಹಕ್ಕೆ ಹಲವರ ಆಕ್ಷೇಪವಿತ್ತು. ಆ 30 ರಂದು ಬೆಳಿಗ್ಗೆ 10.30ರ ಸುಮಾರಿಗೆ ಸನೀಫ್ ಕಾಲೇಜಿನ ಕ್ಲಾಸ್ ರೂಂ ನಲ್ಲಿದ್ದಾಗ ಆರೋಪಿಗಳಾದ ದೀಕ್ಷಿತ್ ಮತ್ತು ಧನುಷ್ ಎಂಬವರು ಅಲ್ಲಿಗೆ ಬಂದು ಮಾತನಾಡಲಿದೆ ಕರೆದು, ಕಾಲೇಜಿನ ಗ್ರೌಂಡ್ ಡ್ ಗೆ ಕರೆದುಕೊಂಡು ಹೋಗಿದ್ದಾರೆ. ಆಗ ಅಲ್ಲಿ ಇತರ ಆರೋಪಿಗಳಾದ ಪ್ರಜ್ವಲ್, ತನುಜ್, ಅಕ್ಷಯ್, ಮೋಕ್ಷಿತ್ ಹಾಗೂ ಸುಳ್ಯದ ಎನ್ ಎಂಸಿ ಕಾಲೇಜಿನ ಗೌತಮ್ ಹಾಗೂ ಇತರರು, ದೂರುದಾರ ಸನೀಫ್ ನ ಕಾಲರ್ ಪಟ್ಟಿ ಹಿಡಿದು ನೀನು ಪಲ್ಲವಿಯೊಟ್ಟಿಗೆ ಯಾಕೆ ಮಾತನಾಡುತ್ತಿಯಾ ಎಂದು ಪ್ರಶ್ನಿಸಿ ದೊಣ್ಣೆಯಿಂದ ಬೆನ್ನಿಗೆ ಹೊಡೆದು, ನಂತರ ಕೆಳಗೆ ದೂಡಿ ಹಾಕಿ ಕಾಲಿನಿಂದ ತುಳಿದಿದ್ದಾರೆ. ಹಾಗೂ ಇನ್ನು ಮುಂದೆ ಪಲ್ಲವಿಯೊಂದಿಗೆ ಮಾತನಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿರುವುದಾಗಿ ಸನೀಫ್ ಆರೋಪಿಸಿದ್ದಾರೆ.

ಬಳಿಕ ಸನೀಫ್ ಕ್ಲಾಸ್ ಗೆ ವಾಪಸ್ಸು ತೆರಳಿ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಬೆನ್ನಿನ ಗಾಯಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಠಾಣೆಗೆ ದೂರು ನೀಡಿದ್ದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Leave A Reply

Your email address will not be published.