ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯರ ಜಟಾಪಟಿ; ವೈರಲ್ ಆಗಿದೆ ಕಿತ್ತಾಟದ ವಿಡಿಯೋ.!
ಸಾಮಾಜಿಕ ಜಾಲತಾಣದಲ್ಲಿ ವಿಧವಿಧವಾದ ವಿಲಕ್ಷಣ ವೀಡಿಯೋಗಳು ಅಪ್ ಲೋಡ್ ಆಗುತ್ತಾ ಇರುತ್ತದೆ. ಈ ವೀಡಿಯೋಗಳಲ್ಲಿ ಅತಿ ರಂಜನೀಯ, ಅತ್ಯಾಕರ್ಷಕ ವೀಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.
ಕಾನ್ಪುರದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ನಡುವೆ ನಡೆದ ಜಟಾಪಟಿಯ ವಿಡಿಯೋ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಮೂವರು ಬಾಲಕಿಯರ ನಡುವೆ ತರಗತಿಯಲ್ಲೇ ಈ ಕ್ರೇಜಿ ಫೈಟ್ ನಡೆದಿದೆ. ಶಾಲಾ ಸಮವಸ್ತ್ರ ಧರಿಸಿದ 3 ವಿದ್ಯಾರ್ಥಿನಿಯರು ಪರಸ್ಪರ ಕೂದಲನ್ನು ಎಳೆದಾಡಿಕೊಂಡು ಜಗಳ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಒಬ್ಬರಿಗೊಬ್ಬರು ಥಳಿಸಿದ್ದಾರೆ.
ಈ ಗಲಾಟೆ ನಿಲ್ಲದೇ ಇರುವುದನ್ನು ಕಂಡು, ಕ್ಲಾಸ್‌ನಲ್ಲಿದ್ದ ಇತರ ವಿದ್ಯಾರ್ಥಿನಿಯರು ಜಗಳ ನಿಲ್ಲಿಸಲು ಬಂದಿದ್ದಾರೆ. ಕೆಲವರು ಮಧ್ಯಪ್ರವೇಶಿಸಿ ಜಗಳಕ್ಕಿಳಿದಿದ್ದವರನ್ನು ದೂರ ಸರಿಸಲು ಸಹ ಯತ್ನಿಸಿದ್ದಾರೆ.
ಆದರೆ ಯಾರೇ ಶತ ಪ್ರಯತ್ನ ಪಟ್ಟರೂ ಕೂಡಾ ವಿದ್ಯಾರ್ಥಿನಿಯರ ಕಿತ್ತಾಟವನ್ನು ತಡೆಯಲು
ಸಾಧ್ಯವಾಗಲಿಲ್ಲ. ಈ ವೀಡಿಯೋವನ್ನು ಪತ್ರಕರ್ತ ಅಮಿತ್ ಸಿಂಗ್ ಶೇರ್ ಮಾಡಿದ್ದಾರೆ. ಕಾನ್ಪುರದ ಪ್ರತಿಷ್ಠಿತ ಖಾಸಗಿ ಶಾಲೆಯ ವಿದ್ಯಾರ್ಥಿನಿಯರು ಅಂತಾ ಬರೆದುಕೊಂಡಿದ್ದಾರೆ. ಈಗಾಗಲೇ ಸುಮಾರು 90 ಸಾವಿರ ಜನರು ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಈ ಕಾದಾಟದ ಹಿಂದಿನ ಕಾರಣ ಮಾತ್ರ ಬಹಿರಂಗವಾಗಿಲ್ಲ.