ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರ ಜಡೆ ಜಗಳ | ಕಿತ್ತಾಟ ಶುರು ಆಗುತ್ತಿದ್ದಂತೆ ಇಬ್ಬರ ನೆಚ್ಚಿನ ಹುಡುಗ ಮಾಡಿದ್ದೇನು ಗೊತ್ತಾ?

Share the Article

ಒಂದು ಹುಡುಗಿಗಾಗಿ ಇಬ್ಬರು ಹುಡುಗಿಯರು ಕಿತ್ತಾಡುವುದು ಮಾಮೂಲ್. ಆದರೆ ಇಲ್ಲೊಂದು ಕಡೆ ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರಿಬ್ಬರು ಬಸ್​ ನಿಲ್ದಾಣದಲ್ಲೇ ಬಡಿದಾಡಿಕೊಂಡಿರುವ ಘಟನೆ ನಡೆದಿದೆ.

17 ವರ್ಷದ ಇಬ್ಬರು ಹುಡುಗಿಯರು ಬಾಯ್​ಫ್ರೆಂಡ್​ಗಾಗಿ ಸಾರ್ವಜನಿಕರ ಎದುರೇ ಕಿತ್ತಾಡಿಕೊಂಡು ಕಿರಿಕಿರಿ ಉಂಟು ಮಾಡಿದ್ದಾರೆ. ಘಟನೆ ಕಳೆದ ಬುಧವಾರ ಬೆಳಗ್ಗೆ ಮಹಾರಾಷ್ಟ್ರದ ಜನನಿಬಿಡ ಪೈಠಾನ್ ಬಸ್​ ನಿಲ್ದಾಣದಲ್ಲೇ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ​

ಇಬ್ಬರು ಹುಡುಗಿಯರಲ್ಲಿ ಒಬ್ಬಳು ಹುಡುಗನ ಜೊತೆ ಬಸ್​ ನಿಲ್ದಾಣಕ್ಕೆ ಬಂದಿದ್ದಳು. ಈ ವಿಚಾರ ಇನ್ನೊಬ್ಬಾಕೆಗೆ ತಿಳಿದು, ಕೂಡಲೇ ಆಕೆ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಇಬ್ಬರ ಮಧ್ಯ ಬಾಯ್​ಫ್ರೆಂಡ್​ ವಿಚಾರಕ್ಕಾಗಿ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು, ತಾಳ್ಮೆ ಕಳೆದುಕೊಂಡು ಹುಡುಗಿಯರು ಸಾರ್ವಜನಿಕರು ಇದ್ದಾರೆ ಎಂಬುದನ್ನು ಗಮನಿಸದೇ ಸ್ಥಳದಲ್ಲೇ ಕಿತ್ತಾಡಿಕೊಂಡಿದ್ದಾರೆ.

ಆದ್ರೆ, ಯಾವಾಗ ಹುಡುಗಿಯರಿಬ್ಬರು ಜಗಳ ಆಡಲು ಆರಂಭಿಸಿದರೂ ಅದನ್ನು ನೋಡಿದ ಹುಡುಗ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಜಗಳ ನೋಡಿದ ಪೊಲೀಸರು ಇಬ್ಬರನ್ನು ಠಾಣೆಗೆ ಕರೆದೊಯ್ದು ಬುದ್ಧಿ ಮಾತು ಹೇಳಿ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply