Home latest ‘ಡ್ಯೂಟಿ’ಯಿಂದ ಬ್ಯೂಟಿ ಕಡೆ ವಾಲಿದ ಇನ್ಸ್ ಪೆಕ್ಟರ್ | ಮಸಾಜ್ ಮಾಡಿಸಿಕೊಂಡ ತಪ್ಪಿಗೆ ಸಸ್ಪೆಂಡ್!!!

‘ಡ್ಯೂಟಿ’ಯಿಂದ ಬ್ಯೂಟಿ ಕಡೆ ವಾಲಿದ ಇನ್ಸ್ ಪೆಕ್ಟರ್ | ಮಸಾಜ್ ಮಾಡಿಸಿಕೊಂಡ ತಪ್ಪಿಗೆ ಸಸ್ಪೆಂಡ್!!!

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ವೀಡಿಯೋಗಳು ವೈರಲ್ ಆಗುವುದು ದೊಡ್ಡ ವಿಚಾರವೇನೆಲ್ಲ. ಆದರೆ ಕೆಲವೊಂದು ವೀಡಿಯೋಗಳು ತಂದೊಡ್ಡುವ ಸಂಚಾಕಾರ ಅಷ್ಟಿಷ್ಟಲ್ಲ. ಏಕೆಂದರೆ ಇಲ್ಲೊಂದು ವೈರಲ್ ಆದ ವೀಡಿಯೋ, ಓರ್ವನ ಜೀವನಕ್ಕೆ ಸಂಚಕಾರ ತಂದಿದೆ. ಏನದು ಪ್ರಕರಣ? ಇಲ್ಲಿದೆ ವಿವರ.

ಈ ಘಟನೆ ಪ್ರಯಾಗ್‌ರಾಜ್ ನಲ್ಲಿ ನಡೆದಿದೆ‌. ಈ ಜಿಲ್ಲೆಯ ಸ್ಪಾ ಕೇಂದ್ರವೊಂದರಲ್ಲಿ ಇನ್ಸ್‌ಪೆಕ್ಟರ್‌ವೊಬ್ಬ ಕರ್ತವ್ಯದಲ್ಲಿದ್ದಾಗಲೇ ಸ್ಪಾ ಸೆಂಟರ್‌ಗೆ ಬಂದು ಮಸಾಜ್ ಮಾಡಿಕೊಂಡಿದ್ದಾನೆ. ಆದರೆ ಹೇಗೋ ಅನಂತರ ಈ ವೀಡಿಯೋ ವೈರಲ್ ಆಗಿದ್ದು, ಇದನ್ನು ಗಂಭೀರವಾಗಿ ತಗೊಂಡಿರುವ ಈ ಪ್ರಯಾಗ್ ರಾಜ್ ಎಸ್ಎಸ್ಎಪಿ ಶೈಲೇಶ್ ಕುಮಾರ್ ಪಾಂಡೆ, ಈ ಇನ್ಸ್‌ಪೆಕ್ಟರ್‌ಅನ್ನು ಅಮಾನತು ಮಾಡಿದ್ದಾರೆ.

ಸ್ಪಾ ಸೆಂಟರ್‌ನಲ್ಲಿ ಸಮವಸ್ತ್ರ ಧರಿಸಿದ ಇನ್‌ಸ್ಪೆಕ್ಟರ್ ಮಸಾಜ್ ಪಡೆಯುತ್ತಿರುವ ವೀಡಿಯೋ ಇದಾಗಿದ್ದು, ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಂದಲೂ ಸೂಚನೆ ಬಂದಿತ್ತು. ಪೊಲೀಸ್ ಇಲಾಖೆಯ ಪ್ರಮುಖರಿಗೂ ಕೂಡ ಈ ವೀಡಿಯೋಗಳು ಸಿಕ್ಕಿದ್ದವು. ಇದೀಗ ವೀಡಿಯೋ ವೈರಲ್ ಆದ ನಂತರ ಎಸ್ಎಸ್ಎಪಿ ಅವರನ್ನು ಅಮಾನತುಗೊಳಿಸಿದ್ದಾರೆ. ವೀಡಿಯೋದಲ್ಲಿ ಸಮವಸ್ತ್ರ ಧರಿಸಿರುವ ಇನ್ಸ್‌ಪೆಕ್ಟ‌ರ್ ಗೆ ಯುವತಿಯೊಬ್ಬಳು ಮಸಾಜ್ ಮಾಡುತ್ತಿರುವ ದೃಶ್ಯವಿದೆ.

ಅಮಾನತುಗೊಳಿಸಿರುವ ಇನ್‌ಸ್ಪೆಕ್ಟರ್ ಸಿವಿಲ್ ಲೈನ್ ಔಟ್‌ಪೋಸ್ಟ್‌ನ ಉಸ್ತುವಾರಿಯಲ್ಲಿದ್ದು. ಇನ್ಸ್ ಪೆಕ್ಟರ್ ಹೆಸರು ರಾಕೇಶ್ ವರ್ಮಾ. ಸ್ಪಾ ಸೆಂಟರ್‌ನಲ್ಲಿ ಸಮವಸ್ತ್ರ ಧರಿಸಿದ್ದ ಇನ್ಸ್‌ಪೆಕ್ಟರ್ ಯುವತಿಯ ಕೈಯಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಇದಾದ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ವೈರಲ್ ಆಗಿರುವ ವಿಡಿಯೋ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.