ಹೊಲದಲ್ಲಿ ದಣಿವಾರಿಸಿಕೊಳ್ಳಲು ಮಲಗಿದ್ದ ಮಹಿಳೆಯ ಬೆನ್ನ ಮೇಲೇರಿದ ‘ನಾಗರ ಹಾವು’ | ಕೊನೆಗೇನಾಯ್ತು? ವೀಡಿಯೋ ವೈರಲ್
ಜೀವಂತ ಹಾವು ಕಂಡರೆ ಯಾರಿಗೆ ತಾನೇ ಭಯ ಆಗಲ್ಲ ಹೇಳಿ. ಎಲ್ಲರೂ ಹೆದರ್ತಾರೆ. ಹಾವು ರೋಡಲ್ಲಿ ಹೋಗುವಾಗಲೇ ಕಂಡರೆ, ಮಾರು ದೂರ ಓಡಿ ಹೋಗುವ ಜನರ ಮಧ್ಯೆ, ಈ ನಾಗಪ್ಪ ಓರ್ವ ಮಹಿಳೆಯ ಬೆನ್ನೇರಿ ಕುಳಿತದ್ದು ನಿಜಕ್ಕೂ ಭಯ ಹುಟ್ಟಿಸಿದೆ.
ನಡೆದಿದ್ದೇನೆಂದರೆ, ದುಡಿದು ದಣಿದ ಮಹಿಳೆಯೋರ್ವರು ಹೊಲದ ಹತ್ತಿರ ಮಲಗಿದ್ದರು. ಈ ಕ್ಷಣದಲ್ಲಿ ಅಲ್ಲಿಗೆ ಬಂದ ನಾಗರಾಜ ತಕ್ಷಣ ಈ ಮಹಿಳೆಯೋರ್ವರ ಮೇಲೆ ಹೆಡೆ ಎತ್ತಿ ಕುಳಿತು ಬಿಟ್ಟಿದೆ. ಈ ಘಟನೆ ಕಲಬುರಗಿಯ ಮಲ್ಲಾಬಾದ್ ಗ್ರಾಮದಲ್ಲಿ ನಡೆದಿದೆ. ನಾಗರಹಾವು ಆಕೆಯ ಬೆನ್ನನ್ನು ಬಿಟ್ಟು ದೂರ ಸರಿಯುವವರೆಗೆ ಆ ಮಹಿಳೆ ನಿಜಕ್ಕೂ ಕದಲದೇ ಮಲಗಿದ್ದು, ಆಕೆಯ ಧೈರ್ಯ ಮೆಚ್ಚಬೇಕು ಅನ್ನಿ.
ಜಮೀನಿನಲ್ಲಿ ಕೆಲಸ ಮುಗಿಸಿ ವಿಶ್ರಾಂತಿ ಪಡೆಯಲೆಂದು ಮಲಗಿದ್ದ ಭಾಗಮ್ಮ ಎಂಬ ಮಹಿಳೆಯ ಮೇಲೆಯೇ, ಈ ಹಾವು ಹತ್ತಿ ಹೆಡೆ ಎತ್ತಿ ಬಿಟ್ಟಿದೆ. ತಕ್ಷಣ ಎಚ್ಚರ ಆದ ಮಹಿಳೆ ಗಾಬರಿಯಿಂದ ಕೈಮುಗಿದು ನಾಗರಹಾವಿನಲ್ಲಿ ಕೈಮುಗಿದು ಪ್ರಾರ್ಥಿಸಿದ್ದಾಳೆ.
ಸ್ವಲ್ಪ ಹೊತ್ತು ಮಹಿಳೆಯ ಮೇಲೆ ಇದ್ದ ನಾಗಪ್ಪ, ಸ್ವಲ್ಪ ಹೊತ್ತಿನ ನಂತರ ಸ್ಥಳದಿಂದ ತೆರಳಿದೆ. ಮಹಿಳೆ ಮೇಲೆ ನಾಗರಹಾವು ಹೆಡೆ ಎತ್ತಿ ಕುಳಿತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.