ಚಿರತೆಗೂ ಸಿಕ್ತು ಆಧಾರ್ ಕಾರ್ಡ್….! ಆಧಾರ್ ಕಾರ್ಡ್ ನಲ್ಲಿ ಚಿರತೆಗೆ ಇರುವ ಹೆಸರು ‘ ಬಿಬತ್ಯಾ ಬೇಲ್ಗಾಂವ್‌ಕರ್ ‘ !!!

ಆಪರೇಷನ್ ಚೀತಾ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು. ಶಿವಮೊಗ್ಗದ ಸಕ್ರೆಬೈಲಿನಿಂದ ಗಜಪಡೆ ಬೆಳಗಾವಿಯತ್ತ ಟೂರ್ ಸ್ಟಾರ್ಟ್ ಮಾಡಿದೆ. ಸತತ 22 ದಿನಗಳಿಂದ 400 ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದರೂ ಈವರೆಗೆ ಚಿರತೆ ತನ್ನ ಗುಟ್ಟು ಬಿಟ್ಟು ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಲೆ ಬಿಸಿ ತಗ್ಗಿಸಿ, ಚಿರತೆಯನ್ನು ಪತ್ತೆ ಮಾಡಲು ಟ್ರೋಲಿಗರು ಆಧಾರ್ ಕಾರ್ಡ್ ಒಂದನ್ನು ಸಿದ್ಧಪಡಿಸಿದ್ದಾರೆ.

 

ಈವರೆಗೆ ಚಿರತೆ ಸೆರೆಯಾಗದ ಹಿನ್ನೆಲೆಯಲ್ಲಿ ವಿಭಿನ್ನ ರೀತಿಯ ಪೋಸ್ಟರುಗಳ ಮೂಲಕ ಟ್ರೋಲಿಗರು ವ್ಯಂಗ್ಯ ಮಾಡಿದ್ದಾರೆ. ಚಿರತೆ ಹೆಸರಿನಲ್ಲಿ ಆಧಾರ್ ಕಾರ್ಡ್ ಸಹ ಸಿದ್ಧಪಡಿಸಿದ್ದಾರೆ. ‘ ಬಿಬತ್ಯಾ ಬೇಲ್ಗಾಂವ್‌ಕರ್ ‘ ಎಂದು ಚಿರತೆಗೆ ಹೆಸರು ಇಟ್ಟಿದ್ದು, ಈ ಹೆಸರಿನಲ್ಲೇ ಆಧಾರ್ ಕಾರ್ಡ್ ಸಿದ್ಧಪಡಿಸಿದ್ದಾರೆ.

ಅಲ್ಲದೇ `ಎಷ್ಟು ಬೇಕಾದ್ರೂ ಪ್ರಯತ್ನ ಮಾಡಿ ನಾನು ಗಣಪತಿ ಹಬ್ಬ ಮುಗಿಸಿಕೊಂಡು ಹೋಗ್ತೇನೆ. ಯಾರಪ್ಪಂದೇನ್ ಐತಿ, ಬೆಳಗಾವಿ ನಂದೈತಿ ಬೆಳಗಾವಿ ಬಿಟ್ಟು ಹೋಗಲ್ಲ, ನಾನೇನ್ ಆತಂಕವಾದಿನಾ ನನ್ನ ಹಿಡಿಯಲು ಆನೆ, ನಾಯಿ, ಪೊಲೀಸರು ಬಂದಿದ್ದೀರಿ’ ಎಂದು ಚಿರತೆಯೇ ಹೇಳಿಕೊಂಡಂತೆ ಹಾಸ್ಯಭ1ರಿತವಾಗಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಜೊತೆಗೆ ಚಿರತೆಯನ್ನೂ ಸಂದರ್ಶನ ಮಾಡುತ್ತಿರುವ ಫೋಟೋಗಳನ್ನ ಟ್ರೋಲ್ ಮಾಡಲಾಗಿದೆ.

ಅತ್ತ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಹಸ ಪಡುತ್ತಿದ್ದಾರೆ. ಪೊಲೀಸರ ನೆಟ್ಟಿಗೆ ಚಿರತೆ ಬೀಳುತ್ತಿಲ್ಲ. ಇತ್ತ ನೆಟ್ಟಿಗರು ಜಾಲತಾಣದ ಕಾಲದಲ್ಲಿ ಚಿರತೆಯನ್ನು ಎಳೆತಂದಿದ್ದಾರೆ. ಕ್ರೂರ ಚಿರತೆ ಕೂಡಾ ಹಾಸ್ಯಕ್ಕೆ ಒಂದು ಸಕತ ಸಬ್ಜೆಕ್ಟ್ ಆಗಿದ್ದು ಎಲ್ಲರೂ ಇನ್ನೂ ಸಿಗದ ಚಿರತೆಯ ಕಾಲು ಎಳೆಯುತ್ತಿದ್ದಾರೆ.

Leave A Reply

Your email address will not be published.