Home latest ಇಡೀ ರಾತ್ರಿ ಮರದಲ್ಲಿ ನೇತಾಡಿದ ನವಜಾತ ಶಿಶು!! ಊರವರ ಸಮಯಪ್ರಜ್ಞೆ-ಅವರಿಗಾಗಿ ಹುಡುಕಾಟ

ಇಡೀ ರಾತ್ರಿ ಮರದಲ್ಲಿ ನೇತಾಡಿದ ನವಜಾತ ಶಿಶು!! ಊರವರ ಸಮಯಪ್ರಜ್ಞೆ-ಅವರಿಗಾಗಿ ಹುಡುಕಾಟ

Hindu neighbor gifts plot of land

Hindu neighbour gifts land to Muslim journalist

ಬೆಳಗಾವಿ:ನವಜಾತ ಶಿಶುವೊಂದನ್ನು ಚೀಲದಲ್ಲಿ ಕಟ್ಟಿ ಮರದಲ್ಲಿ ನೇತು ಹಾಕಿದ ಕುಕೃತ್ಯದ ಘಟನೆಯೊಂದು ಜಿಲ್ಲೆಯ ಖಾನಾಪುರ ಸಮೀಪದ ಗೌಳಿವಾಡ ಎಂಬಲ್ಲಿ ನಡೆದಿದ್ದು, ಮಗುವಿನ ಅಳುವಿನ ಶಬ್ದದಿಂದಾಗಿ ಘಟನೆಯು ಬೆಳಕಿಗೆ ಬಂದಿದೆ.

ಗ್ರಾಮದ ಆಶಾಕಾರ್ಯಕರ್ತೆಯರೊಬ್ಬರ ಗಮನಕ್ಕೆ ಬಂದ ಕೂಡಲೇ ಆಂಬುಲೆನ್ಸ್ ಮೂಲಕ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಸುಮಾರು 2.5ಕೆಜಿ ತೂಕವಿದ್ದು, ರಾತ್ರಿ ಇಡೀ ಮರದಲ್ಲಿ ನೇತಾಡಿದ ಪರಿಣಾಮ ಅತ್ತು ಅತ್ತು ನಿತ್ರಾಣಗೊಂಡಿದ್ದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಮಗುವನ್ನು ಬಿಟ್ಟು ಹೋದವರು ಯಾರು ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲದಿದ್ದರೂ, ಗ್ರಾಮದೆಲ್ಲೆಡೆ ಮಗುವಿನ ಹೆತ್ತವರ ಹುಡುಕಾಟವು ನಡೆಯುತ್ತಿದೆ.