ಏರ್‌ಲೈನ್ಸ್ ನಿಂದ BIG ಆಫರ್‌ ; ಈಗ ಕೇವಲ 9 ರೂಪಾಯಿಗೆ ವಿದೇಶಕ್ಕೆ ಹಾರ್ಬೋದು ! ಈ ಚಾನ್ಸ್ ಮಿಸ್‌ ಮಾಡ್ಕೊಬೇಡಿ !

ವಿಮಾನದಲ್ಲಿ ವಿದೇಶಕ್ಕೆ ಹಾರಬೇಕು ಎಂದು ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಒಮ್ಮೆ ವಿದೇಶಕ್ಕೆ ಹೋಗಬೇಕು ಎಂಬುದು ದೊಡ್ಡ ಕನಸು ಆಗಿರುತ್ತೆ. ಆದರೆ ಈಗಿನ ದುಬಾರಿ ಜೀವನದಲ್ಲಿ ಅಷ್ಟು ದೊಡ್ಡ ಮೊತ್ತದ ಟಿಕೆಟ್ ಕೊಂಡು ಪ್ರಯಾಣಿಸುವುದು ಕಷ್ಟದ ಕೆಲಸ. ಆದರೆ, ಜುಜುಬಿ ಮೊತ್ತಕ್ಕೆ, ಕೇವಲ ಒಂದು ಬನ್ ಗಿಂತಲೂ ಕಡಿಮೆ ಮೊತ್ತಕ್ಕೆ ವಿದೇಶ ಪ್ರವಾಸ ಮಾಡುವಂತಿದ್ದರೆ…! ಆ ಅವಕಾಶ ದೊರೆತರೆ ನಮಗಿಂತ ಅದೃಷ್ಟವಂತರು ಯಾರಿರುತ್ತಾರೆ ಹೇಳಿ ? ಆ ಅವಕಾಶ ಈಗ ದೊರೆತಿದೆ.

ವಿಯೆಟ್ನಾಮ್ ಏರ್ ಲೈನ್ಸ್ ನಿಮಗೆ ಇಲ್ಲೊಂದು ಭರ್ಜರಿ ಆಫರ್ ಕೊಟ್ಟಿದೆ. ವಿಶೇಷ ಕೊಡುಗೆಯಲ್ಲಿ ವಿಯೆಟ್ಜೆಟ್ ಏರ್ಲೈನ್ಸ್ ಕೇವಲ 9 ರೂ. ಬೆಲೆಯಲ್ಲಿ ವಿಮಾನ ಟಿಕೆಟ್‌ಗಳನ್ನು ನೀಡುತ್ತಿದೆ.
ಆದ್ರೆ, ಆಗಸ್ಟ್ 15 ರಿಂದ ಮಾರ್ಚ್ 26 ರವರೆಗೆ ಮಾತ್ರ. ಒಟ್ಟು 30,000 ಪ್ರಮೋಷನಲ್ ಟಿಕೆಟ್‌ಗಳು ಲಭ್ಯವಿವೆ.

ಈ ಕೊಡುಗೆಯು ದೆಹಲಿ, ಮುಂಬೈ, ಅಹಮದಾಬಾದ್ ಮತ್ತು ಹೈದರಾಬಾದ್ ಸೇರಿದಂತೆ ವಿಯೆಟ್ನಾಂನ ರಾಜಧಾನಿ ಹನೋಯ್, ಹೊ ಚಿ ಮಿನ್ಹ್, ಡಾ ನಾಂಗ್ ಮತ್ತು ಫುಕ್ವಾಕ್ ಸೇರಿದಂತೆ ವಿಯೆಟ್ನಾಂನ ನಾಲ್ಕು ನಗರಗಳಿಗೆ ಹೋಗುವ 17 ಮಾರ್ಗಗಳಲ್ಲಿ ಮಾನ್ಯವಾಗಿದೆ. ವಿಯೆಟ್ಜೆಟ್ ಪ್ರಸ್ತುತ ನವದೆಹಲಿ / ಮುಂಬೈಯನ್ನು ಹನೋಯ್ / ಹೋ ಚಿ ಮಿನ್ಹ್ ಸಿಟಿಯೊಂದಿಗೆ ವಾರಕ್ಕೆ 4 ವಿಮಾನಗಳೊಂದಿಗೆ ಸಂಪರ್ಕಿಸುತ್ತದೆ. ಸೆಪ್ಟೆಂಬರ್ 2022 ರಿಂದ, ವಿಯೆಟ್ಜೆಟ್ ಹನ್ನೊಂದು ಹೆಚ್ಚುವರಿ ಮಾರ್ಗಗಳನ್ನು ನಿರ್ವಹಿಸಲಿದೆ.

ಅಂದಹಾಗೆ, ಕಳೆದ ವಾರ, ಆಗಸ್ಟ್ 17 ರಂದು ಹೋ ಚಿ ಮಿನ್ಹ್ ನಗರದಲ್ಲಿ ನಡೆದ ಭಾರತ-ವಿಯೆಟ್ನಾಂ ಪ್ರವಾಸೋದ್ಯಮ ಉತ್ತೇಜನ ಸಮಾವೇಶದಲ್ಲಿ, ಎರಡೂ ದೇಶಗಳ ಸರ್ಕಾರಿ ಅಧಿಕಾರಿಗಳು ಮತ್ತು ಕೈಗಾರಿಕಾ ಪ್ರತಿನಿಧಿಗಳು ಸಭೆ ಸೇರಿ ಭಾರತದಿಂದ ಒಳಬರುವ ಪ್ರವಾಸೋದ್ಯಮವನ್ನ ಹೇಗೆ ಉತ್ತೇಜಿಸಬಹುದು ಎಂದು ಚರ್ಚಿಸಿದರು. ಹೋ ಚಿ ಮಿನ್ಹ್ ನಗರದಲ್ಲಿ ಭಾರತದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಆಯೋಜಿಸಿದ್ದ ಈ ಸಭೆಯಲ್ಲಿ ವಿಯೆಟ್ನಾಂ ರಾಷ್ಟ್ರೀಯ ಪ್ರವಾಸೋದ್ಯಮ ಆಡಳಿತದ (ವಿಎನ್ಎಟಿ) ಉಪಾಧ್ಯಕ್ಷ ಫಾಮ್ ವ್ಯಾನ್ ತುಯ್ ಮತ್ತು ವಿಯೆಟ್ನಾಂನಲ್ಲಿನ ಭಾರತೀಯ ರಾಯಭಾರಿ ಪ್ರಣಯ್ ವರ್ಮಾ ಭಾಗವಹಿಸಿದ್ದರು. ವಿಯೆಟ್ನಾಂನಲ್ಲಿ ಪ್ರಯಾಣ ಮಾರುಕಟ್ಟೆಯನ್ನು ಬೆಳೆಸಲು ಎರಡೂ ದೇಶಗಳ ಪ್ರಯಾಣ ಸಂಸ್ಥೆಗಳ ನಡುವಿನ ವ್ಯಾಪಾರ ಸಂಬಂಧಗಳು ನಿರ್ಣಾಯಕವಾಗಿವೆ ಎಂಬುದನ್ನ ಮನಗಂಡು, ಎರಡೂ ದೇಶಗಳ 34 ಪ್ರಯಾಣ ಕಂಪನಿಗಳು ಚರ್ಚೆಗಳನ್ನು ನಡೆಸಿದವು. ಇನ್ನು ವಿಯೆಟ್ನಾಂಗೆ ಭಾರತೀಯರ ಪ್ರಯಾಣದ ಬೇಡಿಕೆಯನ್ನು ಹೆಚ್ಚಿಸಲು ಪ್ರವಾಸೋದ್ಯಮ ಮಾಹಿತಿಯನ್ನು ವಿನಿಮಯ ಮಾಡಿಕೊಂಡವು.

ಭಾರತ ಮತ್ತು ವಿಯೆಟ್ನಾಮೀಸ್ ನಡುವಿನ ನೇರ ವಿಮಾನವು ಸುಮಾರು ಐದರಿಂದ ಆರು ಗಂಟೆಗಳನ್ನ ತೆಗೆದುಕೊಳ್ಳುತ್ತದೆ. ಆದ್ರೆ, ಬ್ಯಾಂಕಾಕ್ ಅಥವಾ ಸಿಂಗಾಪುರದ ಮೂಲಕ ಸಂಪರ್ಕಿಸುವ ಮೂಲಕ ಪ್ರಯಾಣದ ಸಮಯವನ್ನು10 ಅಥವಾ 12 ಗಂಟೆಗಳಿಗೆ ದ್ವಿಗುಣಗೊಳಿಸಬಹುದು.
ಪ್ರಸ್ತುತ, ಬಜೆಟ್ ವಾಹಕಗಳಾದ ವಿಯೆಟ್ಜೆಟ್ ಏರ್ ಮತ್ತು ಇಂಡಿಗೋ ಒಟ್ಟಿಗೆ ವಾರಕ್ಕೆ ಎರಡು ದೇಶಗಳ ನಗರಗಳ ನಡುವೆ ಒಂದು ಡಜನ್ ಅಥವಾ ಅದಕ್ಕಿಂತ ಹೆಚ್ಚು ನೇರ ವಿಮಾನಗಳನ್ನ ನಿರ್ವಹಿಸುತ್ತವೆ. ಅದೇನೇ ಇರಲಿ 9ರೂ. ದರದಲ್ಲಿ ಪ್ರಯಾನಿಸುವುದು ಖುಷಿಯ ವಿಚಾರವೇ ಸರಿ .

Leave A Reply

Your email address will not be published.