Home Interesting ಹೆಲ್ಮೆಟ್​ ಧರಿಸಿಲ್ಲವೆಂದು ಲೈನ್ ಮ್ಯಾನ್ ಗೆ ಭಾರಿ ದಂಡ ವಿಧಿಸಿದ ಪೊಲೀಸ್ ; ಸೇಡು ತೀರಿಸಿಕೊಳ್ಳಲು...

ಹೆಲ್ಮೆಟ್​ ಧರಿಸಿಲ್ಲವೆಂದು ಲೈನ್ ಮ್ಯಾನ್ ಗೆ ಭಾರಿ ದಂಡ ವಿಧಿಸಿದ ಪೊಲೀಸ್ ; ಸೇಡು ತೀರಿಸಿಕೊಳ್ಳಲು ಆತ ಮಾಡಿದ್ದೇನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಲೈನ್ ಮ್ಯಾನ್ ಗೆ ದಂಡ ವಿಧಿಸಿದ ಕಾರಣಕ್ಕೆ ಕೋಪಗೊಂಡ ಆತ ಪೊಲೀಸ್ ಠಾಣೆ ಮೇಲೆಯೇ ಸೇಡು ತೀರಿಸಿಕೊಂಡ ವಿಚಿತ್ರ ಘಟನೆ ನಡೆದಿದೆ.

ಹೌದು. ಹೆಲ್ಮೆಟ್​ ಧರಿಸಿಲ್ಲ ಅಂತ ಭಾರಿ ದಂಡ ವಿಧಿಸಿದ್ದಕ್ಕೆ ಪೊಲೀಸ್​ ಠಾಣೆಯ ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಪೊಲೀಸರ ವಿರುದ್ಧ ಲೈನ್​ಮ್ಯಾನ್​ ಸೇಡು ತೀರಿಸಿಕೊಂಡಿದ್ದಾನೆ. ಇಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದ ಶಾಮ್ಲಿ ಏರಿಯಾದ ಥಾನಾ ಭವನ್​ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಪೊಲೀಸರು ಲೈನ್​ಮ್ಯಾನ್​ ಬೈಕ್​ ಹಿಡಿದು ಹೆಲ್ಮೆಟ್​ ಹಾಕಿಲ್ಲ ಅಂತ 6 ಸಾವಿರ ರೂ. ದಂಡ ವಿಧಿಸಿದರು. ಆದರೆ, ಸಾಮಾನ್ಯ ದಂಡದ ಮೊತ್ತಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ್ದಕ್ಕೆ ಆಕ್ರೋಶಗೊಂಡ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಲೈನ್​ಮ್ಯಾನ್​ ವಿದ್ಯುತ್​ ಸಂಪರ್ಕ ಕಡಿತಗೊಳಿಸಿ ತನ್ನ ಸೇಡು ತೀರಿಸಿಕೊಂಡಿದ್ದಾನೆ.

ಹಲವು ತಿಂಗಳುಗಳ ಸುಮಾರು 56 ಸಾವಿರ ರೂ. ವಿದ್ಯುತ್​ ಬಿಲ್​ ಅನ್ನು ಪೊಲೀಸ್​ ಠಾಣೆ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ್ದಾರೆ. ಬಳಿಕ ಈ ವಿಷಯ ಗೊತ್ತಾದ ಬಳಿಕ ಠಾಣೆಯ ಮಹಿಳಾ ಸಿಬ್ಬಂದಿ ವಿದ್ಯುತ್​ ಕಂಬವೇರಿ ವಿದ್ಯುತ್​ ಸಮಸ್ಯೆ ಪರಿಹರಿಸಲು ಪರದಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.