ಉಡುಪಿ : ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ನಾಪತ್ತೆ!

Share the Article

ಉಡುಪಿ : ರಾತ್ರಿ ಮಲಗಿದ್ದ ಯುವತಿಯೋರ್ವಳು ಬೆಳಗ್ಗೆ ನಾಪತ್ತೆಯಾದ ಘಟನೆ ಕಾಪುವಿನಲ್ಲಿ ನಡೆದಿದೆ.

ಉದ್ಯಾವರ ಸಂಪಿಗೆನಗರದ ಮಸೀದಿ ಬಳಿಯ ನೇತ್ರಾವತಿ (20) ಎಂಬುವವರು ನಾಪತ್ತೆಯಾದ ಯುವತಿ.

ಕಳೆದ ಮೂರು ತಿಂಗಳಿನಿಂದ ಉದ್ಯಾವರದ ಸ್ಮಾರ್ಟ್ ಮೊಬೈಲ್ ಶಾಪ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಳು. ಸೋಮವಾರ ರಾತ್ರಿ ಊಟ ಮಾಡಿ ಹಾಲ್‌ನಲ್ಲಿ ಮಲಗಿದ್ದ ನೇತ್ರಾವತಿ ಮಂಗಳವಾರ ಬೆಳಗ್ಗೆ 5.30ಕ್ಕೆ ಎದ್ದು ವಾಶ್ ರೂಂಗೆ ಹೋಗಿದ್ದಾಳೆ. ಬಳಿಕ ಅಲ್ಲಿಂದ ಮತ್ತೆ ಬಾರದೆ ನಾಪತ್ತೆಯಾಗಿದ್ದಳು.

ಯುವತಿ ನಾಪತ್ತೆಯಾಗಿರುವುದರಿಂದ ಗಾಬರಿಗೊಂಡ ಮನೆಯವರು ಸಂಬಂಧಿಕರು, ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸಿದ್ದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಸದ್ಯ ಯುವತಿಯ ಸಹೋದರಿ ಜಯಲಕ್ಷ್ಮೀ ಅವರು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply