Home Interesting ಪ್ರೇಯಸಿಯ ಹೊಟ್ಟೆ ಉರಿಸಲು ಈತ ಇಳಿಸಿಕೊಂಡಿದ್ದು ಬರೋಬ್ಬರಿ 70ಕೆಜಿ ತೂಕ!

ಪ್ರೇಯಸಿಯ ಹೊಟ್ಟೆ ಉರಿಸಲು ಈತ ಇಳಿಸಿಕೊಂಡಿದ್ದು ಬರೋಬ್ಬರಿ 70ಕೆಜಿ ತೂಕ!

Hindu neighbor gifts plot of land

Hindu neighbour gifts land to Muslim journalist

ಅದೆಷ್ಟೋ ಪ್ರೇಮಿಗಳಿಗೆ ಪ್ರೀತಿ ಎಂಬುದು ಜೀವನ ಪಾಠವಾಗಿರುತ್ತೆ. ಪ್ರೀತಿಸಿದಾಕೆ ಕೈ ಕೊಟ್ಟಳು ಎಂದು ಕೆಲವೊಂದಷ್ಟು ಜನ ಕೆಟ್ಟ ಅಭ್ಯಾಸಕ್ಕೆ ಮರುಳಾದರೆ. ಇನ್ನೂ ಕೆಲವೊಂದಷ್ಟು ಜನ ಇದರಿಂದಲೇ ಪಾಠ ಕಲಿಯುತ್ತಾರೆ. ಅದೇ ರೀತಿ ಇಲ್ಲೊಬ್ಬ ತನ್ನನ್ನು ಪ್ರೀತಿಸಲು ನಿರಾಕರಿಸಿದ ಹುಡುಗಿಯ ಹೊಟ್ಟೆ ಉರಿಸಲು ಈತ ಮಾಡಿದ ಕೆಲಸ ನೋಡಿದ್ರೆ ಶಭಾಷ್ ಅನ್ನದೇ ಇರಲು ಚಾನ್ಸ್ ಯೇ ಇಲ್ಲ.

ಹೌದು. ಬರೋಬ್ಬರಿ 159 ಕೆಜಿ ತೂಕವಿದ್ದ ಯುವಕ ಇದೀಗ 70 ಕೆಜಿ ತೂಕ ಇಳಿಕೆ ಮಾಡಿದ್ದಾರೆ. ಇದೆಲ್ಲ ಸಾಹಸ ಒಂದು ಹುಡುಗಿಗಾಗಿ ಅಂದ್ರೆ ನೀವು ನಂಬುತ್ತೀರಾ?. ಆದ್ರೆ ನಂಬಲೇ ಬೇಕಾಗಿದೆ.

ನೀನು ತುಂಬಾ ದಪ್ಪಗಿದ್ದೀಯಾ ನಾನು ನಿನ್ನನ್ನು ಪ್ರೀತಿಸಲಾರೆ ಎಂದು ಪ್ರೇಯಸಿ ಕೈಕೊಟ್ಟು ಹೋಗಿದ್ದಕ್ಕೆ ಪುವಿ ಎಂಬ ಯುವಕನ ಮನಸ್ಸು ಚೂರಾಗಿತ್ತು. ಇದರಿಂದಲೇ ಕೊರಗಿದ್ದ ಪುವಿ ಕೊನೆಗೆ ತೂಕ ಇಳಿಸುವ ನಿರ್ಧಾರಕ್ಕೆ ಬಂದು ಜಿಮ್‌ಗೆ ಸೇರಿದ.

ನಿಯಮಿತವಾಗಿ ಜಿಮ್ ಮಾಡುತ್ತಾ ತನ್ನ ದೇಹಕ್ಕೆ ಒಂದು ಒಳ್ಳೆಯ ಆಕಾರ ನೀಡಿದ್ದಾರೆ. ಈ ಮೊದಲ XXXL ಸೈಜ್ ಬಟ್ಟೆ ತೊಡುತ್ತಿದ್ದ ಪುವಿ ಇದೀಗ L ಸೈಜ್‌ಗೆ ಇಳಿದಿದ್ದಾರೆ.

ಪುವಿ ಜಿಮ್‌ನಲ್ಲಿ ವರ್ಕೌಟ್ ಮಾಡುವುದರ ಜೊತೆಗೆ ತನ್ನ ಆಹಾರ ಪೋಷಣೆಯ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ ಅಲ್ಲದೆ, ಬಿಟ್ಟು ಹೋದ ಪ್ರೇಯಸಿ ಹೊಟ್ಟೆ ಉರಿದುಕೊಳ್ಳಲು ಈ ರೀತಿಯಲ್ಲಿ ಪುವಿ ಬದಲಾಗಿದ್ದಾರೆ.

ಯುವಕ ಇದೀಗ 69 ಕೆಜಿ ಇದ್ದು, ಅರ್ಧಕರ್ಧ ದೇಹದ ತೂಕವನ್ನು ಇಳಿಸಿದ್ದಾರೆ. ತನ್ನ ತೂಕ ಇಳಿಸುವ ಪಯಣದ ವಿಡಿಯೋವನ್ನು ಪುವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪುವಿಯನ್ನು ನೋಡಿ ಎಲ್ಲರು ಆಶ್ಚರ್ಯಚಕಿತರಾಗಿದ್ದಾರೆ. ಒಟ್ಟಾರೆ, ಒಂದು ಹುಡುಗಿಯಿಂದಾಗಿ ತನ್ನ ಜೀವನ ಹಾದಿಯನ್ನೇ ಬದಲಾಯಿಸಿದಾನೆ. ಅದಿಕ್ಕೆ ಹೇಳೋದು ನೋಡಿ, ನಮ್ಮನ್ನು ಎಷ್ಟು ಹೀಯಾಳಿಸುತ್ತಾರೋ ಅಷ್ಟೇ ಉನ್ನತ ಸಾಧನೆ ಮಾಡಲು ಅವರು ಸ್ಫೂರ್ತಿ ಆಗಿರುತ್ತಾರೆ ಎಂದು..