ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಪಾತ್ರಕ್ಕೆ ಸಿಟಿ ರವಿ ಫಿಕ್ಸ್ ?!

ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಒಂದು ಅಚ್ಚರಿಯ ಅಭ್ಯರ್ಥಿ ಸಿಕ್ಕಿದ್ದಾರೆ. ಜೊತೆಜೊತೆಯಲಿ  ಧಾರಾವಾಹಿಯಿಂದ ಆರ್ಯ ಔಟ್ ಆಗುತ್ತಿರುವ ಹಾಗೆ ಆ ಸ್ಥಾನಕ್ಕೆ ಹಲವು ಮುಖಗಳ ಹೊಂದಿಕೆ ಮಾಡಲಾಗುತ್ತಿದೆ. ರಂಗಿ ತರಂಗದ ಗಡ್ಡದ ಅನೂಪ್ ಭಂಡಾರಿ ಬಂದ್ರು, ಅದು ಇನ್ನೂ ಫೈನಲ್ ಆದ ಹಾಗಿಲ್ಲ. ಆ ನಂತರ ಸುನಿಲ್ ಪುರಾಣಿಕ್, ಹರೀಶ್ ರಾಜ್ ಹೆಸರು ತೇಲಿ- ಕೇಳಿ ಬಂತು. ಅದೂ ಫೈನಲ್ ಆಗಿಲ್ಲ ಈಗ. ಈಗ ಚಿಂತೆಯಲ್ಲಿರುವ ಚಿತ್ರ ತಂಡ ದಾರಿಯಲ್ಲಿ ಸಿಕ್ಕ ಸಿಕ್ಕ, ಇರೋ ಬರೋ ಗಡ್ಡಧಾರಿಗಳನ್ನು ದಾರಿ ಮಧ್ಯೆಯೇ ತಡೆದು ನಿಲ್ಲಿಸಿ, ಆ ಶೇಪನ್ನು ಆರ್ಯವರ್ಧನನ ಹಳೆಯ ಶೇಪುಗೆ ಹೋಲಿಕೆ ಮಾಡುತ್ತಿದೆಯಂತೆ.

 

ಆ ಪ್ರಯತ್ನದಲ್ಲಿ ಅವರು ಸಕ್ಸಸ್ ಆದಂತಿಲ್ಲ. ಈಗ ಅಲ್ಲಿ ಇಲ್ಲಿ ಯಾಕೆ ಹುಡುಕ್ತೀರಿ, ನಮ್ಮ ಸಕಲ ಕಲಾ ವಲ್ಲಭ ಮಂತ್ರಿ ಇದ್ದಾರಲ್ಲ, ಅವರನ್ನು ಸಂಪರ್ಕಿಸಿ ಅಂತ ಯಾರೋ ಅಂದರಂತೆ. ಆಗ ಎಲ್ಲರ ಕಣ್ಣ್ ಬಿದ್ದದ್ದು ಸಿಟಿ ರವಿಯವರ ಗಡ್ಡದ ಮೇಲೆ. ಈ ವಯ್ಯ ಗಡ್ಡ ತೆಗೆದದ್ದು ಯಾರೂ ಕಂಡೇ ಇಲ್ಲ, ಅದು ಒರಿಜಿನಲ್ ಗಡ್ಡ, ಅದ್ರಿಂದ ಪದೇ ಪದೇ ಗಡ್ಡ ಇಡುವ ಕಾಸ್ಟ್ಯೂಮ್ ಖರ್ಚು ಬೇರೆ ಇರಲ್ಲ. ಡೈಲಾಗ್ ಡೆಲಿವರಿಯಲ್ಲಿ ಸೀಟಿಯನ್ನು ಮೀರಿಸೋರು ಯಾರಿದ್ದಾರೆ? ಶಾಟ್ ಒಂದೇ ಟೇಕಿಗೆ ಓಕೆ. ಹಾಗಾಗಿ ಸೀಟಿ ರವಿನ ಹಾಕ್ಕೊಳ್ಳಿ ಅಂತ ಯಾರೋ ಡೈರೆಕ್ಟರ್ ಪ್ರೊಡ್ಯೂಸರ್ ಕಿವೀಲಿ ಸೀಟಿ ಊದಿದ್ರಂತೆ.

ಆಗ ತಿರುಗಿತು ಸೀಟಿ ರವಿ ಮೇಲೆ ಚಿತ್ರ ಜಗತ್ತಿನ ಕಣ್ಣು. ಅರೆ, ಹೌದಲ್ಲ, ಆರ್ಯ ಪಾತ್ರಕ್ಕೆ ಸೀಟಿನೇ ಒಳ್ಳೆ ಮ್ಯಾಚ್. ಸಾಧ್ಯ ಆದ್ರೆ ಹಾಕ್ಕೊಳ್ಳಿ ಕ್ಯಾಚ್ ಅಂದ್ರಂತೆ ಪ್ರೊಡ್ಯೂಸರ್. ಅಲ್ಲದೆ, ಸೀಟಿ ರವಿಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಮಹಿಳಾ ಅಭಿಮಾನಿಗಳ ಸಂಖ್ಯೆ ಕೂಡಾ ಹೆಚ್ಚಿದೆ. ಒಂದೊಮ್ಮೆ, ತಮ್ಮ ಮಂತ್ರಿಗಿರಿಯ ಬ್ಯುಸಿ ಶೆಡ್ಯೂಲ್ ನ ಮಧ್ಯೆ ಸೀಟಿ ಯಸ್ ಅಂದ್ರೆ, ಆರ್ಯ ಹೊಸ ರೂಪದಲ್ಲಿ ಬರಲಿದ್ದಾನೆ.

ಸಿ.ಟಿ. ರವಿ ಅವರು ಈವರೆಗೂ ಯಾವುದೇ ಧಾರಾವಾಹಿ, ಸಿನಿಮಾದಲ್ಲಿ ನಟಿಸದೇ ಇದ್ದರೂ, ಅವರ ಲುಕ್ ಆರ್ಯವರ್ಧನ್ ಪಾತ್ರಧಾರಿಯನ್ನು ಹೋಲುತ್ತದೆ. ಹಾಗಾಗಿ ಸಿ.ಟಿ. ರವಿ ಅವರಿಗೆ ಅವಕಾಶ ಕೊಡಿ ಎಂದು ಅನೇಕರು ಆಗ್ರಹಿಸಿದ್ದಾರೆ. ಇದೊಂದು ರೀತಿಯಲ್ಲಿ ತಮಾಷೆ ಅನಿಸಿದರೂ, ಆರ್ಯವರ್ಧನ್ ಪಾತ್ರವನ್ನು ಅನೇಕರು ಸಿ.ಟಿ ರವಿ ಅವರಲ್ಲಿ ಕಾಣುತ್ತಿದ್ದಾರೆ. ಅಲ್ಲದೇ, ಅನಿರುದ್ಧ ಅವರಂತೆ ಗೆಟಪ್ ಹೊಂದಿರುವ ರವಿ ಅವರ ಫೋಟೋವನ್ನು ಹಲವರು ಹಾಕಿದ್ದಾರೆ.

ಇಲ್ಲಿಯತನಕ ಯಾವುದೂ ಫಿಕ್ಸ್ ಆಗಿಲ್ಲ. ಎಲ್ಲಾ ಊಹಾಪೋಹಗಳೇ. ಆದರೆ, ಗಡ್ಡ ಇರುವ ಗುಡ್ಡದ ಘನತೆಯ ವ್ಯಕ್ತಿತ್ವ ಇರುವ ವ್ಯಕ್ತಿಯನ್ನು 13,000 ಕೋಟಿ ಸಾಮ್ರಾಜ್ಯದ ಅಧಿಪತಿ ಆರ್ಯವರ್ಧನ್ ಮೇಲೆ ಆವಾಹಿಸಿ ತರಲು ನಿರಂತರ ಹುಡುಕಾಟ ನಡೆಸುತ್ತಿರುವುದಂತೂ ಸುಳ್ಳಲ್ಲ.

Leave A Reply

Your email address will not be published.