Health Tips ; ಊಟ ಮಾಡುವಾಗ ಗಂಟಲಿನಲ್ಲಿ ಮೀನಿನ ಮುಳ್ಳು ಸಿಕ್ಕಾಕೊಂಡರೆ ಈ ರೀತಿ ತೆಗೆಯಿರಿ

ನಾನ್ ವೆಜ್ ಪ್ರಿಯರಿಗೆ ಮೀನು ಇಷ್ಟ ಆಗುತ್ತೆ. ಅದರಲ್ಲೂ ತರಹೇವಾರಿ ಮೀನು ಯಾರಿಗೆ ಇಷ್ಟ ಆಗಲ್ಲ ಹೇಳಿ? ಆದರೆ ಸಮಸ್ಯೆ ಏನೆಂದರೆ ಕೆಲವೊಂದು ಮೀನಿನ ಮುಳ್ಳು ಬಹಳ ಅಪಾಯಕಾರಿಯಾಗಿರುತ್ತದೆ. ಇವುಗಳನ್ನು ಗಡಿಬಿಡಿಯಲ್ಲಿ ತಿಂದರೆ, ಸಿಕ್ಕಾಕಿಕೊಂಡರೆ ತೊಂದರೆ ತಪ್ಪಿದ್ದಲ್ಲ.

ಮೀನು ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಮೀನನ್ನು ತಿನ್ನುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಮೀನು ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗುತ್ತದೆ, ಹೃದಯದ ಆರೋಗ್ಯವು ಬಲವಾಗಿರುತ್ತದೆ. ಆದರೂ ಕೆಲವರು ಮೀನುಗಳನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಕಾರಣ ಅದರಲ್ಲಿನ ಮುಳ್ಳುಗಳು. ಮೀನಿನ ಮುಳ್ಳು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡರೆ ಅಪಾಯಕ್ಕೆ ಸಿಲುಕಬಹುದು ಎಂಬ ಆತಂಕ. ಮೀನಿನ ಮುಳ್ಳು ಗಂಟಲಿನಲ್ಲಿ ಸಿಲುಕಿಕೊಳ್ಳದೆ ನೇರವಾಗಿ ಜೀರ್ಣಾಂಗಕ್ಕೆ ಹೋದರೆ ಚಿಂತಿಸಬೇಕಾಗಿಲ್ಲ. ಆದರೆ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡರೆ ಏನು ಕಥೆ? ಬನ್ನಿ ಈ ಕುರಿತೇ ನಾವು ತಿಳಿಯೋಣ.

ಗಂಟಲಿನಲ್ಲಿ ಮುಳ್ಳು ಸಿಕ್ಕಿಹಾಕಿಕೊಂಡಾಗ ಚೆನ್ನಾಗಿ ನೀರು ಕುಡಿಯಿರಿ.

ಮೀನಿನ ಮುಳ್ಳು ಅಂಟಿಕೊಂಡ ತಕ್ಷಣ ಸೋಡಾ ಕುಡಿಯುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಸೋಡಾದಲ್ಲಿರುವ ಅನಿಲವು ಗಂಟಲಿನ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಪರಿಣಾಮವಾಗಿ ಮುಳ್ಳು ಹೊರಬರುತ್ತದೆ.

ಗಂಟಲಿನಲ್ಲಿ ಮುಳ್ಳು ಸಿಕ್ಕಿಹಾಕಿಕೊಂಡಾಗ ಚೆನ್ನಾಗಿ ನೀರು ಕುಡಿಯಿರಿ.

ಮೀನಿನ ಊಟ ಮಾಡುವಾಗ, ಒಂದು ವೇಳೆ ಮೀನಿನ ಮುಳ್ಳು ಗಂಟಲಿನಲ್ಲಿ ಅದರ ಮುಳ್ಳು ಸಿಕ್ಕಿಹಾಕಿಕೊಂಡರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

ಬಾಳೆಹಣ್ಣಿನ ತುಂಡುಗಳನ್ನು ಜಗಿಯದೆ ನುಂಗಬೇಕು. ಹೀಗೆ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಕೊಂಡ ಬ್ರೆಡ್ ತಿನ್ನಿ, ಬ್ರೆಡ್‌ನ ಎರಡೂ ಬದಿಯಲ್ಲಿ ಕಡಲೆಕಾಯಿ ಬೆಣ್ಣೆಯನ್ನು ಹರಡಿ ತಿನ್ನಿರಿ.

ಚೆನ್ನಾಗಿ ಹುರಿದು ರೋಸ್ಟ್ ಮಾಡಿರುವ, ಸ್ವಲ್ಪ ಶೇಂಗಾಬೀಜಗಳನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ, ಆ ಬಳಿಕ ನುಂಗಿಬಿಡಿ. ಈ ವಿಧಾನದಿಂದಲೂ ಗಂಟಲಲ್ಲಿ ಸಿಲುಕಿಕೊಂಡಿದ್ದ ಮುಳ್ಳು ನಿವಾರಣೆಯಾಗುತ್ತದೆ.

ಮೀನಿನ ಮುಳ್ಳು ಗಂಟಲಿನಲ್ಲಿ ಸಿಕ್ಕಿಕೊಂಡಾಗ
4 ಅಥವಾ 5 ಬಾರಿ ಕೆಮ್ಮಬೇಕು. ಇದರಿಂದ ಮುಳ್ಳು ಹೊರಬರುತ್ತದೆ.

ಕಂದು ಬಣ್ಣದ ಬ್ರೆಡ್‌ಗೆ, ಒಂದು ಸಣ್ಣ ಚಮಚ ಪೀನಟ್ ಬಟರ್, ಸವರಿ, ಬಾಯಿಗೆ ಹಾಕಿ ಕೊಂಡು ಚೆನ್ನಾಗಿ ಅಗಿದು, ಆಮೇಲೆ ನುಂಬಿ ಬಿಡಿ. ಬಳಿಕ ಒಂದು ಲೋಟ ನೀರು ಕುಡಿಯಿರಿ. ಈ ವಿಧಾನದಿಂದಲೂ ಗಂಟಲ ಮುಳ್ಳು ನಿವಾರಣೆ ಯಾಗುತ್ತದೆ.

ಎಷ್ಟೇ ಪ್ರಯತ್ನಿಸಿದರೂ ಮುಳ್ಳು ಗಂಟಲಿನಿಂದ ಹೊರಬರದಿದ್ದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Leave A Reply

Your email address will not be published.