Home latest ಅಪ್ರಾಪ್ತ ಮುಸ್ಲಿಂ ಬಾಲಕಿಯ ಒಪ್ಪಿತ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವಿಲ್ಲ – ಹೈಕೋರ್ಟ್ ತೀರ್ಪು

ಅಪ್ರಾಪ್ತ ಮುಸ್ಲಿಂ ಬಾಲಕಿಯ ಒಪ್ಪಿತ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವಿಲ್ಲ – ಹೈಕೋರ್ಟ್ ತೀರ್ಪು

Hindu neighbor gifts plot of land

Hindu neighbour gifts land to Muslim journalist

ವಯಸ್ಕ ಹೆಣ್ಣು ತನ್ನ ಪೋಷಕರ ಒಪ್ಪಿಗೆಯಿಲ್ಲದೆ ಮುಸ್ಲಿಂ ಕಾನೂನು ಪ್ರಕಾರ ಮದುವೆಯಾಗಬಹುದು. ಇಷ್ಟು ಮಾತ್ರವಲ್ಲದೇ, ಮದುವೆಯಾದ ಹೆಣ್ಣು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೂ ತನ್ನ ಪತಿಯೊಂದಿಗೆ ವಾಸಿಸುವ ಹಕ್ಕು ಆಕೆಗೆ ಇದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಮದುವೆಯ ನಂತರ ಪತಿಯ ಜೊತೆ ಆಕೆ ಲೈಂಗಿಕ ಕ್ರಿಯೆ ನಡೆಸಿದ್ದರೆ ಅದು ಮಕ್ಕಳ ರಕ್ಷಣಾ ಕಾಯ್ದೆ ವ್ಯಾಪ್ತಿಗೆ ಬಾರದು ಎಂದೂ ನ್ಯಾಯಮೂರ್ತಿ ಜಸ್ಮಿತ್ ಸಿಂಗ್ ಅವರಿದ್ದ ಏಕ ಸದಸ್ಯ ಪೀಠ ಹೇಳಿದೆ.

ಈ ಪ್ರಕರಣವನ್ನು ಪೋಕ್ಸೋ ಕಾಯ್ದೆಯಡಿ ಪರಿಗಣಿಸಲು ಕೋರಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠವು, ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದು ಮುಸ್ಲಿಂ ವೈಯಕ್ತಿಕ ಕಾನೂನುಗಳ ಪ್ರಕಾರ ವಿವಾಹವಾಗಿ, ದೈಹಿಕ ಸಂಬಂಧ ಹೊಂದಿದೆ ಎಂದು ಹೇಳಿದೆ.

ಅದಾಗ್ಯೂ, ಬಾಲಕಿ ಗರ್ಭಿಣಿಯಾಗಿದ್ದಾಗ ಆಕೆಯನ್ನು ಪತಿಯಿಂದ ದೂರ ಮಾಡಿದರೆ ಹುಟ್ಟಲಿರುವ ಮಗು ಮತ್ತು ಆಕೆಗೂ ಹೆಚ್ಚು ಆಘಾತವಾಗುತ್ತದೆ. ಇಲ್ಲಿ ಅರ್ಜಿದಾರರಿಗೆ ರಕ್ಷಣೆ ನೀಡಿ, ಅವರ ಹಿತಕಾಯುವುದು ಸರ್ಕಾರದ ಮುಖ್ಯ ಗುರಿಯಾಗಿರಬೇಕು.ವಬಾಲಕಿ ಒಪ್ಪಿತ ಮದುವೆಯಾಗಿದ್ದರೆ ಮತ್ತು ಆಕೆ ಸಂತೋಷವಾಗಿದ್ದರೆ, ಅವರ ವೈಯಕ್ತಿಕ ಬದುಕಿನಲ್ಲಿ ಪ್ರವೇಶಿಸಲು ಮತ್ತು ದಂಪತಿ ಬೇರ್ಪಡಿಸಲು ಯಾರಿಗೂ ಅವಕಾಶವಿಲ್ಲ. ಒಂದು ವೇಳೆ ಇದಕ್ಕೆ ಆಸ್ಪದ ನೀಡಿದರೆ, ವೈಯಕ್ತಿಕ ಬದುಕನ್ನು ಕಸಿದುಕೊಂಡಂತೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಬಾಲಕಿಯೋರ್ವಳು (15 ವರ್ಷ, 5 ತಿಂಗಳು) ಮಾರ್ಚ್ 11ರಂದು ಬಿಹಾರದಲ್ಲಿ ತನ್ನ ಪ್ರೇಮಿಯನ್ನು ಮದುವೆಯಾಗಿದ್ದು, ನಂತರ ರಕ್ಷಣೆ ಕೋರಿದ್ದಳು. ‘ಪೋಷಕರು ನಿರಂತರ ಹಲ್ಲೆ ನಡೆಸುತ್ತಿದ್ದರು. ಇದರಿಂದ ಬೇಸತ್ತು, ತನ್ನ ಸ್ನೇಹಿತನೊಂದಿಗೆ ಓಡಿ ಹೋಗಿ ಮದುವೆಯಾಗಿರುವೆ’ ಎಂದು ಬಾಲಕಿ ಹೇಳಿದ್ದಳು.

ಆದರೆ ಬಾಲಕಿಯ ಪೋಷಕರು ಈ ಮದುವೆ ವಿರೋಧಿಸಿದ್ದಾರೆ. ಹಾಗೂ ತಮ್ಮ ಅಪ್ರಾಪ್ತ ಮಗಳು ಮದುವೆಯಾಗಿರುವ ವ್ಯಕ್ತಿ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ಆರೋಪ ಮಾಡಿದ್ದು, ಪೋಕ್ಸೋ ಕಾಯ್ದೆಯಡಿ ದ್ವಾರಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ತೀರ್ಪನ್ನು ನೀಡುತ್ತಾ ದೆಹಲಿ ಹೈಕೋರ್ಟ್ ಈ ಆದೇಶ ನೀಡಿದೆ.