ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸ್ವರ್ಣೋದ್ಯಮಿ ಜಿ.ಎಲ್.ಬಲರಾಮ ಆಚಾರ್ಯರಿಗೆ ಬಾಂಧವ್ಯ ಫ್ರೆಂಡ್ಸ್ ವತಿಯಿಂದ ಅಭಿನಂದನೆ

Share the Article

ಪುತ್ತೂರು: ಉದ್ಯಮ ಕ್ಷೇತ್ರದ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಾಧನೆಗೈದಿರುವುದಕ್ಕೆ ಸಂಬಂಧಿಸಿ ವಿ.ಆರ್.ಎಲ್. ಸಮೂಹ ಸಂಸ್ಥೆಯ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಚಾನಲ್ ವತಿಯಿಂದ ‘ವಿಜಯರತ್ನ-2022’ ಪ್ರಶಸ್ತಿ ಪುರಸ್ಕೃತಗೊಂಡಿರುವ ಪುತ್ತೂರಿನ ಖ್ಯಾತ ಸ್ವರ್ಣೋದ್ಯಮಿ, ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಮಾಲಕ ಜಿ.ಎಲ್.ಬಲರಾಮ ಆಚಾರ್ಯರವರನ್ನು ಬಾಂಧವ್ಯ ಫ್ರೆಂಡ್ಸ್ ವತಿಯಿಂದ ಆ.20 ರಂದು ಅಭಿನಂದಿಸಿ ಗೌರವಿಸಲಾಯಿತು.
ಜಿ.ಎಲ್.ಕಾಂಪ್ಲೆಕ್ಸ್‌ನಲ್ಲಿರುವ ಜಿ.ಎಲ್.ಬಲರಾಮ ಆಚಾರ್ಯರವರ ಕಚೇರಿಯಲ್ಲಿ ಬಲರಾಮ ಆಚಾರ್ಯರವರನ್ನು ಅಭಿನಂದಿಸಲಾಯಿತು. ಬಾಂಧವ್ಯ ಫ್ರೆಂಡ್ಸ್ ವತಿಯಿಂದ ಪುತ್ತೂರಿನಲ್ಲಿ ಪ್ರತೀ ವರ್ಷ ನಡೆಯುತ್ತಿರುವ ಬಾಂಧವ್ಯ ಕ್ರಿಕೆಟ್ ಪಂದ್ಯಾಟಕ್ಕೆ ಪ್ರಾಯೋಜಕತ್ವ ವಹಿಸಿ ಬೆಂಬಲ ನೀಡುತ್ತಿರುವುದಕ್ಕಾಗಿ ಈ ಸಂದರ್ಭದಲ್ಲಿ ಬಲರಾಮ ಆಚಾರ್ಯರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಬಾಂಧವ್ಯ ಫ್ರೆಂಡ್ಸ್ ಸಂಘಟಕರಾದ ಸ್ಕರಿಯ ಯಂ.ಎ, ಫಾರೂಕ್ ಶೇಕ್ ಮತ್ತು ಪ್ರಶಾಂತ ರೈ ಶಾಲು ಹೊದಿಸಿ, ಹಾರ ಹಾಕಿ ಸ್ಮರಣಿಕೆ ನೀಡಿ ಅಭಿನಂದಿಸಿದರಲ್ಲದೆ ಜಿ.ಎಲ್.ಬಲರಾಮ ಅಚಾರ್ಯರವರಿಂದ ಇನ್ನಷ್ಟು ಸಮಾಜ ಸೇವೆ ಸಿಗುವ ಮೂಲಕ ಉದ್ಯಮ ಕ್ಷೇತ್ರದಲ್ಲೂ ಪುತ್ತೂರಿಗೆ ಇನ್ನಷ್ಟು ಕೀರ್ತಿ ಬರುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಉದಯಕುಮಾರ್ ಉಪಸ್ಥಿತರಿದ್ದರು.

Leave A Reply