ಸಾಲ ವಾಪಸ್ ಕೇಳಿದ್ದಕ್ಕೆ ಬ್ಯಾಟ್ ನಿಂದ ಬಾರಿಸಿ ಕೊಲೆ…!

ಸಾಲ ವಾಪಸ್​ ಕೇಳಿದಕ್ಕೆ ಬ್ಯಾಟ್​ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮುನ್ನೆಕೊಳಲು ಸಮೀಪದ ಜೆಆರ್​ಎಂ ಪರ್ಲ್​ ಅಪಾರ್ಟ್ಮೆಂಟ್​ನಲ್ಲಿ ನಡೆದಿದೆ.

 

ಬೆಂಗಳೂರಿನ ಮಾರತ್ ಹಳ್ಳಿ ವೆಂಕಟೇಶಪ್ಪ (65) ಕೊಲೆಯಾದ ದುರ್ದೈವಿ.
ಮೃತ ವೆಂಕಟೇಶಪ್ಪ, ಆಪ್ತರಾದ ಶಿವಪ್ಪ ಅಲಿಯಾಸ್ ಮೇಷ್ಟ್ರು ಎನ್ನುವವರಿಗೆ ನಂಜುಂಡರೆಡ್ಡಿ ಹಾಗೂ ಪ್ರಕಾಶ್ ಅವರಿಂದ ಸಾಲ ಕೊಡಿಸಿದ್ದರು. ಸಾಲಕ್ಕೆ ಸಂಬಂಧಿಸಿದಂತೆ ಶಿವಪ್ಪ ನೀಡಿದ್ದ ಚೆಕ್​ ಬೌನ್ಸ್​ ಆಗಿತ್ತು. ಇದನ್ನು ಕೇಳಲೆಂದು ವೆಂಕಟೇಶಪ್ಪ ಸಾಲಗಾರರೊಂದಿಗೆ ಶಿವಪ್ಪನ ಅಪಾರ್ಟ್ಮೆಂಟ್ ಬಳಿ ಬಂದಿದ್ದರು.ಈ ವೇಳೆ ಕೋಪಗೊಂಡ ಶಿವಪ್ಪ ಬ್ಯಾಟ್​ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನೆ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹಿಡಿಯಲು ಬಲೆ ಬೀಸಿದ್ದಾರೆ.

Leave A Reply

Your email address will not be published.