Home Entertainment ಹಸುವಿನ ಮುಂದೆಯೇ ರೀಲ್ಸ್ ಮಾಡಿದ ಯುವತಿ ; ಮುಂದೆ ಆಗಿದ್ದು?

ಹಸುವಿನ ಮುಂದೆಯೇ ರೀಲ್ಸ್ ಮಾಡಿದ ಯುವತಿ ; ಮುಂದೆ ಆಗಿದ್ದು?

Hindu neighbor gifts plot of land

Hindu neighbour gifts land to Muslim journalist

ಪ್ರಾಣಿಗಳು ತಮ್ಮಷ್ಟಕ್ಕೆ ತಾವಿದ್ರೆ, ತೆಪ್ಪಗೆ ಇರುತ್ತವೆ. ಅದೇ ಅದಿಕ್ಕೆ ಕಿರಿಕ್ ಮಾಡಲು ಹೋದ್ರೆ ಮಾತ್ರ ಅಟ್ಟಾಡಿಸಿಕೊಂಡು ಬರೋದ್ರಲ್ಲಿ ಡೌಟ್ ಇಲ್ಲ. ಅದೇ ರೀತಿಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕಾಮೆಂಟ್ ಗಳ ಮಹಾ ಮಳೆಯೇ ಸುರಿದಿದೆ.

ಇಂದು ಪ್ರತಿಯೊಬ್ಬರಿಗೂ ರೀಲ್ಸ್ ಹುಚ್ಚು ಇದ್ದೇ ಇದೆ. ಅದೇ ರೀತಿ ಇಲ್ಲೊಬ್ಬಳು ತನ್ನ ರೀಲ್ಸ್ ಗಾಗಿ ಹಸುವನ್ನೇ ಬಳಸಿಕೊಂಡಿದ್ದಾಳೆ. ಆದ್ರೆ, ಕೊನೆಗೆ ಇವಳಿಗೆ ಮಾತ್ರ ಬೇಡ ಇತ್ತಪ್ಪಾ ಇದರ ಸಹವಾಸ ಅನ್ನೋ ಮಟ್ಟಿಗೆ ಆಗಿದೆ ಆಕೆಯ ಪರಿಸ್ಥಿತಿ. ಹೌದು. ಯುವತಿಯೊಬ್ಬಳು ಹಸುವಿನ ಮುಂದೆ ಡಾನ್ಸ್ ಮಾಡುತ್ತಾ ಕೀಟಲೆ ಕೊಟ್ಟಾಗ ಕೋಪಗೊಂಡ ಹಸು ಆಕೆಗೆ ಬಲವಾಗಿ ಗುದ್ದಿದೆ. ಅಂತೂ ಆಕೆಯ ರೀಲ್ಸ್ ನೋಡಿ ಬಿದ್ದು ಬಿದ್ದು ನಕ್ಕವರೇ ಹೆಚ್ಚು. ಅಷ್ಟಕ್ಕೂ ಆ ವೈರಲ್ ವೀಡಿಯೋದಲ್ಲಿ ಏನಿದೆ ಎಂದು ನೀವೇ ನೋಡಿ.

ವಿಡಿಯೋದಲ್ಲಿ ಕಾಣುವಂತೆ, ಹಗ್ಗದಿಂದ ಕಟ್ಟಿ ಹಾಕಿದ್ದ ಹಸುವಿನ ಮುಂದೆ ಗುಲಾಬಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ಲೆಗ್ಗಿಂಗ್‌ಗಳನ್ನು ಧರಿಸಿರುವ ಯುವತಿಯೊಬ್ಬಳು ಹಸುವಿಗೆ ಆಹಾರ ಹಾಕುತ್ತಾಳೆ. ಅಷ್ಟು ಮಾತ್ರವಲ್ಲದೆ ಅದನ್ನು ಹಸು ತಿನ್ನಲೂ ಬಿಡದೆ ವಿಲಕ್ಷಣವಾಗಿ ನೃತ್ಯವನ್ನು ಮಾಡುತ್ತಾಳೆ. ಹಸಿದ ವೇಳೆ ಹಾಕಿದ ಆಹಾರವನ್ನು ಸುಮ್ಮನೆ ತಿನ್ನಬೇಕು ಎನ್ನವಷ್ಟರಲ್ಲಿ ಯುವತಿಯ ಡಾನ್ಸ್ ಹಸುವಿಗೆ ಕಿರಿಕಿರಿ ಉಂಟುಮಾಡಿದೆ. ಆರಂಭದಲ್ಲಿ ಸುಮ್ಮನಾಗಿದ್ದ ಹಸು ನಂತರ ಕೋಪಗೊಂಡು ಅವಳನ್ನು ಬಲವಾಗಿ ತಳ್ಳುತ್ತದೆ. ಪರಿಣಾಮವಾಗಿ ಆ ಯುವತಿ ಹಿಂಬದಿ ಇದ್ದ ಬುಟ್ಟಿಯೊಳಗೆ ಬೀಳುತ್ತಾಳೆ. ಆ ಮೂಲಕ ರೀಲ್ಸ್ ವಿಡಿಯೋ ಕೊನೆಗೊಳ್ಳುತ್ತದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ‘psycho_biihari ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ರೀಲ್ಸ್ ವಿಡಿಯೋ ಈವರೆಗೆ 46 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 24 ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.