ಮತ್ತೆ ಶುರುವಾಯ್ತು ಅಜಾನ್ ದಂಗಲ್ | ಸರಕಾರದ ಸುತ್ತೋಲೆಗೆ ಕ್ಯಾರೇ ಇಲ್ಲ, ಪ್ರತಿಭಟನೆಗೆ ಕರೆ

Share the Article

ಒಮ್ಮೆ ತಣ್ಣಗಾಗಿದ್ದ ಅಜಾನ್ ವಿವಾದ ಈಗ ಮತ್ತೆ ಮೇಲೇರಲು ಸಜ್ಜಾಗಿದೆ. ರಾಜ್ಯದಲ್ಲಿ ಮತ್ತೆ ಅಜಾನ್ ದಂಗಲ್ ಶುರುವಾಗಿದ್ದು, ಮಸೀದಿಗಳು ಧ್ವನಿ ವರ್ಧಕಗಳ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆಗಸ್ಟ್ 23 ರ ನಾಳೆಯಿಂದ ಮತ್ತೆ ಹೋರಾಟಕ್ಕೆ ಹಿಂದೂ ಸಂಘಟನೆಗಳು ನಿರ್ಧಾರ ಮಾಡಿದೆ.

ರಾಜ್ಯಾದ್ಯಂತ, ಶ್ರೀರಾಮ ಸೇನೆ ಅನಧಿಕೃತ ಅಜಾನ್ ಲೌಡ್ ಸ್ಪೀಕರ್ ವಿರುದ್ಧ ಹಿಂದೂ ಸಂಘಟನೆಗಳು ಮತ್ತೆ ಹೋರಾಟಕ್ಕೆ ಮುಂದಾಗಿದ್ದು, ಮಸೀದಿ ಧ್ವನಿವರ್ಧಕ ವಿರುದ್ಧ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯದ ಎಲ್ಲಾ ಜಿಲ್ಲೆಯ ಎಸ್‌ಪಿ ಕಚೇರಿಗಳ ಎದುರು ಪ್ರತಿಭಟನೆಗೆ ಶ್ರೀರಾಮಸೇನೆ ಕರೆ ನೀಡಿದೆ.

ಈ ಕುರಿತು ಮಾತನಾಡಿರುವ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು, ಹಲವು ಮಸೀದಿಗಳಲ್ಲಿ ಇನ್ನೂ ಆಜಾನ್ ಕೂಗಲು ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ. ಸರ್ಕಾರದ ಸುತ್ತೋಲೆಯಂತೆ ಕಡಿಮೆ ಡೆಸಿಬಲ್ ಬಳಸುತ್ತಿಲ್ಲ. ಹೀಗಾಗಿ ಆಗಸ್ಟ್ 23 ರ ಮಂಗಳವಾರದಂದು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

Leave A Reply