ಭೀಕರ ಅಪಘಾತಕ್ಕೆ ಗಾಳಿಯಲ್ಲಿ ಹಾರಿ ಹೋದ ಮಹಿಳೆ ; ಭಯಾನಕ ವೀಡಿಯೋ ವೈರಲ್

Share the Article

ಸ್ಕೂಟರ್ ಗೆ ಕಾರ್ ಡಿಕ್ಕಿ ಹೊಡೆದ ವೇಳೆ ಮಹಿಳೆಯೊಬ್ಬರು ಗಾಳಿಯಲ್ಲಿ ಹಾರಿ ಹೋಗಿ, ಪತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಭೀಕರ ಅಪಘಾತ ಸಂಭವಿಸಿದೆ.

ಯುಎಇ ನಲ್ಲಿ ಉದ್ಯೋಗ ಮಾಡುತ್ತಿದ್ದ ಅಬ್ದುಲ್ ಖಾದರ್ ಎಂಬವರು ರಜೆಯ ಸಲುವಾಗಿ ತಮ್ಮ ಊರಿಗೆ ಬಂದಿದ್ದು, ಪತ್ನಿ, ರುಖಿಯ ಜೊತೆ ಸ್ಕೂಟರ್ ನಲ್ಲಿ ಸಂಬಂಧಿಕರ ಮನೆಗೆ ತೆರಳಿ ವಾಪಸ್ ಆಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಕಾರ್ ನೇರವಾಗಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.

ಇದರ ತೀವ್ರತೆಗೆ ರುಖಿಯಾ ಗಾಳಿಯಲ್ಲಿ ಹಾರಿ ದೂರಕ್ಕೆ ಬಿದ್ದಿದ್ದಾರೆ. ಅಬ್ದುಲ್ ಖಾದರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶನಿವಾರದಂದು ಈ ಘಟನೆ ನಡೆದಿದ್ದು, ಅಪಘಾತದ ದೃಶ್ಯಾವಳಿ ಬೆಚ್ಚಿ ಬೀಳಿಸುವಂತಿದೆ. ಕೇರಳದ ಮಲಪ್ಪುರಂನಲ್ಲಿ ನಡೆದ ಈ ಭೀಕರ ಅಪಘಾತದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave A Reply