ಚಿಕ್ಕಬಳ್ಳಾಪುರ ರಸ್ತೆ ಅಪಘಾತ | ಐಶರ್ ವಾಹನಕ್ಕೆ ಸಿಕ್ಕಿ ಚಿಂತಾಮಣಿ ಪ್ರಾಂಶುಪಾಲ ದುರಂತ ಸಾವು !

Share the Article

ಚಿಕ್ಕಬಳ್ಳಾಪುರ: ರಸ್ತೆ ಅಪಘಾತದಲ್ಲಿ ಚಿಂತಾಮಣಿ ನಗರದ ಲಕ್ಷ್ಮಿವಿದ್ಯಾ ಸಂಸ್ಥೆ ಪ್ರಾಂಶುಪಾಲ ಅಶೋಕ್ ರೆಡ್ಡಿ ಸಾವನ್ನಪ್ಪಿರುವ ಘಟನೆ ಚಿಂತಾಮಣಿಯಲ್ಲಿ ವರದಿಯಾಗಿದೆ.

ಶನಿವಾರ ಮುಂಜಾನೆ ಬೆಳಿಗ್ಗೆ ಸುಮಾರು 8:35 ಸಮಯದಲ್ಲಿ ಪ್ರಾಂಶುಪಾಲರು ತಮ್ಮ ಮನೆಯಿಂದ ಕಾಲೇಜಿಗೆ ಹೋಗುವ ಸಂದರ್ಭ ಐಷೆರ್ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಗಾಯವಾಗಿ ರಕ್ತ ಸಾವ್ರವಾಗಿದೆ .ಕೂಡಲೇ ಚಿಕಿತ್ಸೆಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೆಚ್ಚಿನ ಚಿಕೆತ್ಸೆಗೆ ಕೋಲಾರದ ಆರ್,ಎಲ್, ಜಾಲಪ್ಪ ಆಸ್ಪತ್ರೆಗೆ ದಾಖಲಿಸಲು ಸೂಚಿಸುತ್ತಾರೆ,ಆದರೆ ತಲೆಗೆ ತೀವ್ರ ರಕ್ತ ಸ್ರಾವ ಆದ್ದರಿಂದ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ .

ಮೃತ ವ್ಯಕ್ತಿ ಖಾಸಗಿ ಶಾಲೆಯ ಪ್ರಾಂಶುಪಾಲ ಎಂದು ತಿಳಿದು ಬಂದಿದೆ ಅಲ್ಲದೆ ರಸಾಯನ ಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾವಂತ ಎಂದು ಸಹ ತಿಳಿದಿದೆ.

ಕೆಲವು ದಿನಗಳ ಹಿಂದೆಯೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದೇಶದ ಕುರಿತು ಭಾಷಣ ಮಾಡಿದ್ದು ಇದೀಗ ಅವರ ಅಕಾಲಿಕ ಮರಣ ಕಂಡು ಮುಗಿಲು ಮುಟ್ಟಿದೆ. ಈ ಕುರಿತು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಐಷೆರ್ ಕ್ಯಾಂಟರ್ ವಾಹನ ಮತ್ತು ದ್ವಿಚಕ್ರ ವಾಹನ ಜಪ್ತಿ ಮಾಡಿ ತನಿಖೆ ನಡೆಸುತ್ತಿದ್ದರೆ.

Leave A Reply