ಉಕ್ರೇನ್ ಯುದ್ಧದ ಮಾಸ್ಟರ್ ಮೈಂಡ್ ನ ಮಗಳು ಭೀಕರ ಕಾರು ಸ್ಫೋಟದಲ್ಲಿ ಸಾವು|

Share the Article

ಉಕ್ರೇನ್ ಯುದ್ಧದ ಮಾಸ್ಟರ್ ಮೈಂಡ್, ವ್ಲಾಡಿಮಿರ್ ಪುತಿನ್ ರ ಮೆದುಳು ಎಂದೇ ಖ್ಯಾತಿ ಪಡೆದ 60 ವರ್ಷದ ಅಲೆಕ್ಸಾಂಡರ್ ಡುಗಿನ್ ನ ಪುತ್ರಿ ದರ್ಯಾ ಡುಗಿನ್ ಅವರು ಶನಿವಾರ ರಾತ್ರಿ ಮಾಸ್ಕೋದಲ್ಲಿ ನಡೆದ ಭೀಕರ ಕಾರು ಸ್ಪೋಟವೊಂದರಲ್ಲಿ ಸಾವನ್ನಪ್ಪಿದ್ದಾರೆ. ರಷ್ಯಾದ ರಾಜಧಾನಿ ಮಾಸ್ಕೋ ಹೊರವಲಯದ ಬೊಲ್ಕಿಯೆ ವ್ಯಾಜ್ಯೋಮಿ ಎಂಬ ಗ್ರಾಮದ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಈ ಸ್ಫೋಟ ಅಲೆಕ್ಸಾಂಡರ್ ಡುಗಿನ್ ರನ್ನು ಗುರಿಯಾಗಿಸಿತ್ತು, ಆದರೆ ಈ ಸಂಚಿಗೆ ಆತನ ಮಗಳು ಬಲಿಯಾಗಿದ್ದಾಳೆ.

ಬಾಂಬ್ ಸ್ಫೋಟದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ದರ್ಯಾ ಡುಗಿನ್ ಅವರ ಲ್ಯಾಂಡ್ ಕ್ರೂಸರ್ ಪ್ರಾಡೊ ಬೆಂಕಿಯಲ್ಲಿ ಸುಡುತ್ತಿರುವುದನ್ನು ಕಾಣಬಹುದು.

ದರ್ಯಾ ಡುಗಿನ್ ಹಬ್ಬವೊಂದರ ಕಾರ್ಯಕ್ರಮವನ್ನು ಮುಗಿಸಿ ಹಿಂದೆ ಬರುತ್ತಿದ್ದ ಸಂದರ್ಭದಲ್ಲಿ ಕಾರು ಸ್ಫೋಟವಾಗಿದೆ. ಮೂಲಗಳ ಪ್ರಕಾರ ಅಲೆಕ್ಸಾಂಡರ್ ಡುಗಿನ್ ಕೂಡಾ ಮಗಳ ಜೊತೆಗೆ ಅದೇ ಕಾರಿನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆತ ತನ್ನ ನಿರ್ಧಾರ ಬದಲಿಸಿ, ಬೇರೆ ಕಾರಿನಲ್ಲಿ ಹೊರಟಿದ್ದ.

ರಷ್ಯಾ ಪ್ರಕಾರ, ಉಕ್ರೇನ್ ನ ಭಯೋತ್ಪಾದಕರು ಈ ಕೃತ್ಯ ನಡೆಸಿದ್ದಾರೆ ಎಂಬ ಮಾಹಿತಿ ಹೇಳಿಕೊಂಡಿದೆ. ಅಲೆಕ್ಸಾಂಡರ್ ರನ್ನು ಹತ್ಯೆ ಮಾಡಲು ಹೋಗಿ ಅವರ ಮಗಳನ್ನು ಸ್ಫೋಟಿಸಿದ್ದಾರೆ. ಆಕೆ ನಿಜವಾದ ರಷ್ಯನ್ ಹುಡುಗಿ ಎಂದು ಹೇಳಿಕೆಯಲ್ಲಿ ತಿಳಿಸಿದೆ.

Leave A Reply