ಇಯರ್ ಫೋನ್ ನಿಂದಾಗಿ ಹೋಯ್ತು ಯುವಕರಿಬ್ಬರ ಪ್ರಾಣ!

Share the Article

ಇಂದು ಪ್ರತಿಯೊಬ್ಬರ ಕಿವಿಯಲ್ಲೂ ಇಯರ್ ಫೋನ್ ಇದ್ದೇ ಇರುತ್ತದೆ. ಅದೊಂತರ ಫ್ಯಾಷನ್ ಆಗಿ ಬಿಟ್ಟಿದೆ. ರಸ್ತೆಯಲ್ಲಿ ಹೋದ್ರೂ, ಬಸ್ ಲ್ಲಿ ಹೋದ್ರೂ ಅದು ಮಾತ್ರ ಕಿವಿಯಲ್ಲಿ ಇರುತ್ತದೆ. ಇಂತಹ ಇಯರ್ ಫೋನ್ ಎಂತಹ ಅಪಾಯ ತಂದೊಡ್ಡ ಬಹುದು ಎಂಬುದಕ್ಕೆ ಇಲ್ಲೊಂದು ಕಡೆ ನಡೆದ ಘಟನೆಯೇ ಉದಾಹರಣೆಯಾಗಿದೆ. ಹೌದು. ಇಯರ್ ಫೋನ್ ಕಿವಿಗಿಟ್ಟುಕೊಂಡು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರ ಮೇಲೆ ರೈಲು ಹರಿದು ಮೃತಪಟ್ಟಿರುವ ಘಟನೆ ನಡೆದಿದೆ.

ಅಶೋಕ್ ಕುಮಾರ್ ಸಿಂಗ್ (20) ಸ್ನೇಹಿತ ಮೋನು (18) ಮೃತರು.

ಈ ಘಟನೆ ಉತ್ತರ ಪ್ರದೇಶದ ಭದ್ರೋಹಿ ಮತ್ತು ಅಹಿಮಾನ್‌ಪುರ್ ಎಂಬಲ್ಲಿ ನಡೆದಿದ್ದು, ರೈಲು ನಿಲ್ದಾಣದ ಪ್ಲಾಟ್‌ಫಾರಂ ಸಂಖ್ಯೆ 2ರ ಮಧ್ಯದ ಹಳಿಯಲ್ಲಿ ಊಟದ ಬಳಿಕ ವಾಕಿಂಗ್ ಮಾಡುತ್ತಿದ್ದರು. ಕಿವಿಗೆ ಇಯರ್‌ಫೋನ್ ಹಾಕಿಕೊಂಡಿದ್ದರಿಂದ ಹೌರಾ ಲಾಲ್‌ಕುವಾನ್ ಎಕ್ಸ್‌ಪ್ರೆಸ್ ಬರುತ್ತಿರುವುದು ಅವರ ಗಮನಕ್ಕೆ ಬಂದಿರಲಿಲ್ಲ.

ಈ ವೇಳೆ ಭದೋಹಿ ರೈಲ್ವೆ ಸ್ಟೇಷನ್ ಪ್ರದೇಶದಲ್ಲಿ ಅವರ ಮೇಲೆ ರೈಲು ಚಲಿಸಿ, ಇಬ್ಬರು ಮೃತಪಟ್ಟಿದ್ದಾರೆ. ಜಲಾಲ್‌ಪುರದ ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ.

Leave A Reply