Home Interesting ಖಾಸಗಿ ಶಾಲಾ ಬಸ್​ ಹಾಗೂ ಕ್ಯಾಂಟರ್​ ನಡುವೆ ಭೀಕರ ಅಪಘಾತ ; ಸ್ಥಳದಲ್ಲೇ ಇಬ್ಬರ ದುರ್ಮರಣ

ಖಾಸಗಿ ಶಾಲಾ ಬಸ್​ ಹಾಗೂ ಕ್ಯಾಂಟರ್​ ನಡುವೆ ಭೀಕರ ಅಪಘಾತ ; ಸ್ಥಳದಲ್ಲೇ ಇಬ್ಬರ ದುರ್ಮರಣ

Hindu neighbor gifts plot of land

Hindu neighbour gifts land to Muslim journalist

ಖಾಸಗಿ ಶಾಲಾ ಬಸ್​ ಮತ್ತು ಕ್ಯಾಂಟರ್​ ನಡುವೆ ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಬಸ್​ ಮತ್ತು ಕ್ಯಾಂಟರ್​ ನಡುವೆ ಬೆಳಗಾವಿಯ ಅಥಣಿ ಪಟ್ಟಣ ಹೊರವಲಯದ ಮೀರಜ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಎರಡೂ ವಾಹನದ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್​ನಲ್ಲಿ 20 ಮಕ್ಕಳು ಸಂಚರಿಸುತ್ತಿದ್ದರು. 10ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಥಣಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಣಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ ಅಥಣಿ ಪಟ್ಟಣದಲ್ಲಿರುವ ಹಾಸ್ಟೆಲ್‌ನಿಂದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಕರೆ ತರುವಾಗ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ಕಾಲೇಜಿನ ಒಳಗಡೆ ಬಸ್ ಪ್ರವೇಶ ಪಡೆಯೋ ಕೆಲ ಕ್ಷಣಗಳ ಮುನ್ನ ಅಪಘಾತ ಸಂಭವಿಸಿದೆ.