Home ದಕ್ಷಿಣ ಕನ್ನಡ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಲೀಲೋತ್ಸವ

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಲೀಲೋತ್ಸವ

Hindu neighbor gifts plot of land

Hindu neighbour gifts land to Muslim journalist

ನರಿಮೊಗರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ಕೃಷ್ಣ ಲೀಲೋತ್ಸವ ಆ.19ರಂದು ವಿದ್ಯಾಸಂಸ್ಥೆಯ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಂಸ್ಕೃತ ವಿದ್ವಾಂಸ ವೇದಮೂರ್ತಿ ಕೇಶವ ಭಟ್ ಕೇಕನಾಜೆ ಉದ್ಘಾಟಿಸಿದರು. ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ಶಿಬರ ಜಯರಾಮ ಕೆದಿಲಾಯ ಸಭಾಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ಸಂಯೋಜಕ ಹರಿಪ್ರಸಾದ್, ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ಪ್ರಬಂಧಕ, ಪೋಷಕ ನಾರಾಯಣ ಬನ್ನಿಂತಾಯ ಪಿ, ಬೆಂಗಳೂರಿನ ಸಿವಿಲ್ ಕಂಟ್ರಾಕ್ಟರ್, ಪೋಷಕ ಮನೋಹರ್ ಬಿ,ವಿದ್ಯಾಸಂಸ್ಥೆಗಳ ಸಂಚಾಲಕ ಎಚ್.ಭಾಸ್ಕರ ಆಚಾರ್ ಹಿಂದಾರು,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಶಾಲಾ ವಿದ್ಯಾರ್ಥಿ ನಾಯಕ ಹರ್ಷಿತ್ ಎಸ್.ನಾಯ್ಕ,ಆಡಳಿತ ಸಮಿತಿ ಸದಸ್ಯರಾದ ಹರೀಶ್ ಪುತ್ತೂರಾಯ,ಪ್ರಸನ್ನ ಭಟ್,ಅಶೋಕ್ ಕುಮಾರ್ ಪುತ್ತಿಲ ಉಪಸ್ಥಿತರಿದ್ದರು.
ಅತಿಥಿಗಳನ್ನು ತಾಂಬೂಲ ನೀಡಿ,ಪುಷ್ಪವೃಷ್ಟಿ ,ಹಾರಾರ್ಪಣೆ ಮೂಲಕ ಗೌರವಿಸಲಾಯಿತು.

ಕೃಷ್ಣಪ್ರಸಾದ್ ಕೆದಿಲಾಯ ಸ್ವಾಗತಿಸಿದರು, ಶಾಲಾ ಮುಖ್ಯಗುರು ಜಯಮಾಲಾ ವಿ.ಎನ್ ನಿರೂಪಿಸಿದರು.