Home Entertainment ಕಾಸು ಕೊಟ್ಟು ಬೇಕಾದಷ್ಟು ಜನ್ರ ಜೊತೆ ಮಲಗಿದ್ದೇನೆ – ಮತ್ತೆ ಸದ್ದು ಮಾಡುತ್ತಿದೆ ಸ್ಯಾಂಡಲ್ ವುಡ್...

ಕಾಸು ಕೊಟ್ಟು ಬೇಕಾದಷ್ಟು ಜನ್ರ ಜೊತೆ ಮಲಗಿದ್ದೇನೆ – ಮತ್ತೆ ಸದ್ದು ಮಾಡುತ್ತಿದೆ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕನ ಮಾತು

Hindu neighbor gifts plot of land

Hindu neighbour gifts land to Muslim journalist

ಮಹಿಳೆಯರನ್ನು ಕೆಲವರು ಭೋಗದ ವಸ್ತುವಾಗಿ ನೋಡುತ್ತಾರೆ ಕೆಲವರು. ಅದು ಮನೆ ಇರಲಿ ಅಥವಾ ಹೊರಗಡೆ ಇರಲಿ. ಇದಕ್ಕೆ ಚಿತ್ರರಂಗ ಹೊರತಲ್ಲ. ಈ ಫೀಲ್ಡಲ್ಲಿ ನಿಜಕ್ಕೂ ಹೆಣ್ಮಕ್ಕಳು ಕೇಳಬಾರದ್ದನ್ನೆಲ್ಲ ಕೇಳ್ತಾರೆ. ತಪ್ಪು ಮಾಡಿಲ್ಲ ಅಂದರೂ ಮಾಡಿದ್ದಾರೆ ಅನ್ನೋ ರೇಂಜಿಗೆ ಜನ ಅಪವಾದ ಹಾಕುತ್ತಾರೆ.

ಕೆಲವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಬಹಿರಂಗವಾಗಿಯೇ ಆರೋಪ ಮಾಡಿದ ಘಟನೆನೂ ಇದೆ. ಈಗ ಇದೇ ಚಿತ್ರರಂಗದ ಬಗ್ಗೆ ಮಾತನಾಡುವುದಾದರೆ, ಓಂ ಪ್ರಕಾಶ್ ರಾವ್ ಮುಚ್ಚುಮರೆಯಿಲ್ಲದೆ ಖಾಸಗಿ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದ ಮಾತಿನ ವೀಡಿಯೋವೊಂದು ಈಗ ವೈರಲ್ ಆಗಿದೆ.

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ನಟ ಓಂ ಪ್ರಕಾಶ್ ರಾವ್. ಇವರು ಖ್ಯಾತ ನಟ ಎನ್ ಎಸ್ ರಾವ್ ಅವರ ಮಗ. ಬಹಳ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ಹಲವು ಹಿಟ್ ಸಿನಿಮಾಗಳನ್ನು ನೀಡಿದ ಸೂಪರ್ ನಿರ್ದೇಶಕ. ಆದರೆ ಇತ್ತೀಚೆಗೆ ವಿವಾದಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ವ್ಯಕ್ತಿ, ಇದೀಗ ತಮ್ಮ ಬದುಕಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ಈ ವೀಡಿಯೋದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಹೆಣ್ಣು ಬಾಕಾ ಎಂದೇ ಇಂಡಸ್ಟ್ರಿಯ ಕೆಟ್ಟ ಹೆಸರು ತೆಗೆದುಕೊಂಡಿದ್ದಾರೆ. ಅವರು ಅವಕಾಶ ಅರಸಿಕೊಂಡು ಬಂದ ಹುಡುಗಿಯರನ್ನು ಉಪಯೋಗಿಸಿಕೊಂಡಿರುವ ಬಗ್ಗೆ ಆರೋಪವಿದೆ. ಆದರೆ ಇಲ್ಲಿಯವರೆಗೆ ಒಂ ಪ್ರಕಾಶ್ ಅವರ ಬಗ್ಗೆ ಯಾವ ನಟಿಯೂ ಅಂಥ ಆರೋಪವನ್ನು ಮಾಡಿಲ್ಲ.

“ನಾನು ಕಾಸು ಕೊಟ್ಟು ತುಂಬಾ ಹುಡುಗೀರ ಜತೆ ಮಲಗಿದ್ದೇನೆ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಓಂ ಪ್ರಕಾಶ್ ರಾವ್ ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಾನು ಇಂಡಸ್ಟ್ರಿಯ ಯಾರನ್ನೂ ಬಳಸಿಕೊಂಡಿಲ್ಲ. ಆದರೆ ದುಡ್ಡು ಕೊಟ್ಟು ತುಂಬಾ ಜನರನ್ನು ಬಳಸಿಕೊಂಡಿದ್ದೇನೆ, ನಾನು ಗಂಡಸು, ಏನೂ ಬೇಕಾದರೂ ಮಾಡ್ತೀನಿ. ನಾನು ಇದನ್ನೆಲ್ಲ ಹೊರಗಡೆ ಮಾಡಿದ್ದೀನಿ, ಹಾಗಂತ ನಾನು ಇಂಡಸ್ಟ್ರಿಯಲ್ಲಿ ಇರುವವರನ್ನು ಮಿಸ್ ಯೂಸ್ ಮಾಡಿಲ್ಲ. ಅಥವಾ ಯಾರನ್ನೇ ಆದರೂ ಆ ರೀತಿ ಬಳಸಿಕೊಂಡು ಹೀರೋಯಿನ್ ಆಗೋಕೆ ಅವಕಾಶ ನೀಡಿಲ್ಲ. ಇದು ನನ್ನ ಹೆಂಡತಿಗೂ ಗೊತ್ತು ಎಂದು ಹೇಳುವ ವಿಡಿಯೋ ಈಗ ವೈರಲ್ ಆಗುತ್ತಿದೆ.