ಯುವತಿ ಮೇಲೆ ಗುಂಡು ಹಾರಿಸಿ ಯುವಕ ಎಸ್ಕೇಪ್ – ಭಯಾನಕ ವೀಡಿಯೋ ಸಿಸಿಟಿವಿಯಲ್ಲಿ ಸೆರೆ

ಪ್ರೀತಿ ಎಂಬ ಹುಚ್ಚು, ಪ್ರೇಮಿಗಳನ್ನು ಯಾವೆಲ್ಲ ಕ್ರೂರ ಕೃತ್ಯ ಎಸಗುವಂತೆ ಮಾಡುತ್ತದೆ ಎಂಬುದಕ್ಕೆ ಸಾಲು-ಸಾಲು ಉದಾಹರಣೆಗಳೇ ನಮ್ಮ ಕಣ್ಣ ಮುಂದೆ ನಡೆದುಹೋಗಿದೆ. ಇದೀಗ ಅದೇ ರೀತಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಡಹಗಲೇ ಯುವಕನೋರ್ವ ಯುವತಿಗೆ ಗುಂಡು ಹಾರಿಸಿರುವ ಭಯಾನಕ ಘಟನೆ ನಡೆದಿದೆ.

 

ಇಂತಹುದೊಂದು ಘಟನೆ ಪಾಟ್ನಾದ ಬೇರ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿಪಾರಾದ ಇಂದ್ರಪುರಿ ಪ್ರದೇಶದಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯ ದೃಶ್ಯಾವಳಿ ಆ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿ ಇರುವಂತೆ, ರಸ್ತೆಯಲ್ಲಿ ವ್ಯಕ್ತಿ ನಡೆದುಕೊಂಡು ಬರುತ್ತಾನೆ. ಇವನ ಹಿಂದೆಯಿಂದ ಯುವತಿ ಕೂಡ ಬರುತ್ತಾಳೆ. ಈ ವೇಳೆ ಆ ವ್ಯಕ್ತಿ ಯುವತಿ ಮುಂದೆ ಸಾಗುತ್ತಿದ್ದಂತೆ ಆಕೆಯ ಕುತ್ತಿಗೆಗೆ ಗುಂಡು ಹಾರಿಸಿ ಓಡಿದ್ದಾನೆ.

ಕುತ್ತಿಗೆಗೆ ಗುಂಡು ತಗುಲಿದ ಯುವತಿ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ತರಕಾರಿ ವ್ಯಾಪಾರಿಯೊಬ್ಬರ ಮಗಳು ಎಂದು ತಿಳಿದು ಬಂದಿದೆ. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಈ ಘಟನೆ ನಡೆದಿದೆ ಎಂದು ಪಾಟ್ನಾ ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.