‘ನಂಗೆ ಬಾಡಿಗೆ ಮನೆ ಕೊಡ್ತಿಲ್ಲ, ದಯಾಮರಣ ಕರುಣಿಸಿ ‘ ಎಂದು ಅರ್ಜಿ ಸಲ್ಲಿಸಿದ ಕರುಣ ಕಥೆ

ಸಮಾಜದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಮಂಗಳಮುಖಿಯೊಬ್ಬರು ದಯಾಮರಣಕ್ಕೆ ಅನುಮತಿ ನೀಡಿ ಎಂದು ಬೇಡಿಕೊಂಡಿದ್ದಾರೆ. ಮಡಿಕೇರಿ ನಿವಾಸಿ ರಿಹಾನ ಎಂಬ ಮಂಗಳ ಮುಖಿಯೇ ಈ ರೀತಿಯ ವಿಶೇಷ ಅನುಮತಿ ಕೋರಿದ್ದಾರೆ. ಜೀವನಕ್ಕಾಗಿ ಭಿಕ್ಷಾಟನೆ ನಡೆಸುತ್ತಿರುವ ರಿಹಾನಾ ಅವರು, ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದು, ಯಾವುದೇ ಸಹಕಾರ ದೊರೆಯದ ಕಾರಣ ದಯಾಮರಣಕ್ಕೆ ಅನುವು ಮಾಡುವಂತೆ ಇಂದು ಅರ್ಜಿ ಸಲ್ಲಿಸಿದ್ದಾರೆ.

 

ಮಂಗಳಮುಖಿಯಾದ ಕಾರಣ ನನಗೆ ಸ್ಥಳೀಯರು ಮನೆ ಕೊಡಲು ನಿರಾಕರಿಸುತ್ತಿದ್ದಾರೆ. ಮನೆ ಖಾಲಿಯಿದ್ದರೂ ಇಲ್ಲ ಎನ್ನುತ್ತಾರೆ. ಲಾಡ್ಜ್ ಗಳಿಗೆ ಭಾರೀ ಹಣ ನೀಡಬೇಕು. ಮೊತ್ತದ ಬಾಡಿಗೆ ಹಣ ನೀಡಿ ಸಾಕಾಗಿದೆ. ಖರ್ಚು ವೆಚ್ಚಕ್ಕೆ ಅತಿಯಾದ ಸಮಸ್ಯೆ ಎದುರಾಗಿದೆ. ಕೊಡಗಿನ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ಹೇಳಿದ್ದಾರೆ ಮಂಗಳಮುಖಿ

ಮಂಗಳ ಮುಖಿಯರಿಗೆ ಬದುಕುವ ಹಕ್ಕಿಲ್ಲವೇ, ಸಮಾಜ ನಮ್ಮನ್ನು ಏಕೆ ಕೆಟ್ಟ ದೃಷ್ಟಿಯಲ್ಲಿ ನೋಡುತ್ತದೆ. ನಾವೇನು ಭಿಕ್ಷೆ ಕೇಳುತ್ತಿಲ್ಲ ಹಣ ನೀಡುತ್ತೇವೆ ಎಂದರೂ ಮನೆ ಕೊಡುತ್ತಿಲ್ಲ ಎಂದು ತನಗೆ ಎದುರಾಗಿರುವ ಸಮಸ್ಯೆಯ ಬಗ್ಗೆ ರಿಹಾನ ಅಳಲನ್ನು ತೋಡಿಕೊಂಡಿದ್ದಾರೆ.

Leave A Reply

Your email address will not be published.