BREAKING NEWS : ತಿಲಕ ಇಟ್ಟದ್ದಕ್ಕೆ ಬಿತ್ತಾ ಚೂರಿ ಇರಿತ ?!
ಶಿವಮೊಗ್ಗ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಕೊಟ್ಟ ಗೆಳೆಯನ ಹೇಳಿಕೆ…!

ಶಿವಮೊಗ್ಗ ಜಿಲ್ಲೆ ಇದೀಗ ಉದ್ವಿಗ್ನ ಪರಿಸ್ಥಿತಿಯಲ್ಲಿದೆ. ವೀರ ಸಾವರ್ಕರ್ ಫೋಟೋ ವಿವಾದದಿಂದ ಶಿವಮೊಗ್ಗ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಿದೆ. ಈ ಗಲಾಟೆಯಲ್ಲಿ ಚೂರಿ ಇರಿತಕ್ಕೊಳಗಾದ ಪ್ರೇಮ್‌ಸಿಂಗ್ ಸ್ನೇಹಿತ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರಕಿದಂತಾಗಿದೆ.

 

ಇದೀಗ ಗಾಯಾಳು ಪ್ರೇಮ್ ಸಿಂಗ್ ಸ್ನೇಹಿತ ಉತ್ತಮ್ ಭಾಟಿ ಸ್ಫೋಟಕ ಮಾಹಿತಿ ಹೊರಹಾಕಿದ. ರಾಜಸ್ಥಾನದಿಂದ ಬಂದು ಶಿವಮೊಗ್ಗ ಜಿಲ್ಲೆಯಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆ ವ್ಯಕ್ತಿ. ಅಲ್ಲಿ ಕೆಲಸ ಮುಗಿಸಿ ಮನೆ ತೆರಳುವ ಸಂದರ್ಭದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಚೂರಿ ಇರಿದ್ದಿದ್ದಾರೆ. ಪ್ರೇಮ್‌ಸಿಂಗ್ ಕೈಗೆ ರಾಕಿ, ಹಣೆಗೆ ತಿಲಕ ಇಟ್ಟುಕೊಂಡಿದ್ದಕ್ಕೆ ಚಾಕು ಇರಿದಿದ್ದಾರೆ ಎಂಬ ಹೇಳಿಕೆಯೊಂದನ್ನು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ್ದಾನೆ. ಪರಧರ್ಮ ಅಸಹಿಷ್ಣುತೆ ಈ ಮಟ್ಟಿಗೆ ಕಂಡು ಬಂದ ಘಟನೆ ಇದಾಗಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣ ಆಗಿದೆ.

ಶಿವಮೊಗ್ಗದ ಅಮೀರ್ ಅಹಮ್ಮದ್ ಸರ್ಕಲ್ ನಲ್ಲಿ ನಡೆದ ಗಲಾಟೆ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಪೊಲೀಸರು 144 ಸೆಕ್ಷನ್ ಇದೆ ಎಂದು ಹೇಳಿದಾಗ ನಾವು ಅಂಗಡಿ ಬಂದ್ ಮಾಡಿದೆವು. ಇದೇ ವೇಳೆ ಏಕಾಏಕಿ ಗುಂಪಿನಲ್ಲಿ ಬಂದ ಹತ್ತು ಜನರು ಪ್ರೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿ, ಚಾಕು ಇರಿದಿದ್ದಾರೆ. ಕೈಗೆ ರಾಕಿ ಕಟ್ಟಿಕೊಂಡಿದ್ದಕ್ಕೆ ಹಣೆಗೆ ತಿಲಕ ಇಟ್ಟಿದ್ದಕ್ಕೇ ಚಾಕು ಇರಿದಿದ್ದಾರೆ ಎಂದು ಉತ್ತಮ್ ಹೇಳಿದ್ದಾರೆ. ಗೆಳೆಯನ ಹೇಳಿಕೆ ಈಗ ಮಹತ್ವ ಪಡೆದುಕೊಂಡಿದ್ದು, ಈ ಇಡೀ ಪ್ರಕರಣವು ಸಮಾಜದಲ್ಲಿ ಮತ್ತೊಂದು ಭಯ ಉಂಟುಮಾಡುವ ತಂತ್ರವೇ ಎಂಬ ಬಗ್ಗೆ ಅನುಮಾನ ಹುಟ್ಟಿಸುವಂತಿದೆ. ಶಿವಮೊಗ್ಗದಲ್ಲಿ ಕೂಡಾ ಎನ್ ಐ ಎ ತನಿಖೆ ಆಗಬೇಕೆಂಬ ಕೂಗು ಎದ್ದಿದೆ.

Leave A Reply

Your email address will not be published.