ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿ ಬಿದ್ದು ಸುಳ್ಯದ ಸಾಫ್ಟ್‌ವೇರ್ ಇಂಜಿನಿಯರ್ ಸಾವು!

Share the Article

ಬೆಂಗಳೂರು: ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟ ಘಟನೆ ನಗರದ ಹೆಣ್ಣೂರಿನಲ್ಲಿ ರವಿವಾರ ನಡೆದಿದೆ.

ಮೃತಪಟ್ಟ ಟೆಕ್ಕಿಯನ್ನು ಮೂಲತಃ ಸುಳ್ಯದವರಾದ ಅರ್ಚಕ ನಾರಾಯಣ ಭಟ್ ಎಂಬವರ ಪುತ್ರ ವಿಶ್ವಾಸ್ ಕುಮಾರ್ (33) ಎಂದು ಗುರುತಿಸಲಾಗಿದೆ.

ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ವಿಶ್ವಾಸ್, ಹೆಣ್ಣೂರು ಎಚ್‍ಬಿಆರ್ ಲೇಔಟ್ 5ನೇ ಬ್ಲಾಕ್‍ನಲ್ಲಿ ತಮ್ಮ ಕಟ್ಟಡದ ಟೆರೇಸ್‍ಗೆ ರಾಷ್ಟ್ರಧ್ವಜ ಹಾರಿಸುವ ಸಲುವಾಗಿ ಹೋಗಿದ್ದರು. ರವಿವಾರ ಮಧ್ಯಾಹ್ನ 1.45ರ ಸುಮಾರಿಗೆ ವಿಶ್ವಾಸ್ ಟೆರೇಸ್‍ನ ಅಡ್ಡಗೋಡೆಯನ್ನು ಏರಿ ಧ್ವಜ ಹಾರಿಸುವ ಸಲುವಾಗಿ ಕೋಲು ಕಟ್ಟಲು ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದರು ಎಂದು ಪೊಲೀಸರು ಹೇಳಿದ್ದಾರೆ.

“ನಾರಾಯಣ ಭಟ್ ಹಾಗೂ ವೈಶಾಲಿ ತಕ್ಷಣ ವಿಶ್ವಾಸ್ ಅವರನ್ನು ಆಸ್ಪತ್ರೆಗೆ ಸಾರಿಸಿದರೂ, ತಲೆಗೆ ಆಗಿದ್ದ ಗಂಭೀರ ಗಾಯದಿಂದಾಗಿ ಅವರು ಮೃತಪಟ್ಟರು” ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ. ಪತ್ನಿ ವೈಶಾಲಿ ಹಾಗೂ ಎರಡು ವರ್ಷದ ಮಗಳು ಮತ್ತು ಪೋಷಕರ ಜತೆ ವಿಶ್ವಾಸ್ ವಾಸವಿದ್ದರು.

Leave A Reply