ಪಿಜ್ಜಾಗೆ ಬಳಸುವ ಹಿಟ್ಟು ಟಾಯ್ಲೆಟ್ ಬ್ರಶ್ ಇಡುವ ಸ್ಥಳದಲ್ಲಿ | ಡೊಮಿನೊಸ್ ವಿರುದ್ಧ ಜನರ ಆಕ್ರೋಶ
ಪಿಜ್ಜಾ ಇಂದಿನ ಯುವ ಜನತೆಯ ಫೆವರೇಟ್ ಫುಡ್ ಎಂದೇ ಹೇಳಬಹುದು. ಇಂತಿಪ್ಪ ಈ ಫುಡ್ ನ್ನು ಟಾಯ್ಲೆಟ್ ಗೆ ಬಳಸುವ ಬ್ರಶ್ ಗಳ ಅಡಿಯಲ್ಲಿ ಇಟ್ಟಿರುವ ಫೋಟೋವೊಂದು ವೈರಲ್ ಆಗಿದ್ದು ಜನರು ಫಿಜ್ಜಾ ತಿನ್ನಬೇಕಾ ಬೇಡ್ವಾ ಎಂದು ಯೋಚಿಸುವಂತಾಗಿದೆ.
ಡೊಮಿನೊಸ್ ಪಿಜ್ಜಾ ಅಂಗಡಿಯೊಂದರಲ್ಲಿ ಪಿಜ್ಜಾ ಮಾಡಲು ಬಳಸುವ ಹಿಟ್ಟಿನ ಉಂಡಿಗಳನ್ನು ಶೌಚಾಲಯದಲ್ಲಿ ಬಳಸುವ ಬ್ರಶ್‌ಗಳ ಜೊತೆಗೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಈ ಫೋಟೊವನ್ನು ಬೆಂಗಳೂರಿನ ಸಾಹಿಲ್ ಕಾರಣ್ಯ ಎನ್ನುವವರು ಹಂಚಿಕೊಂಡು ‘ನೋಡಿ, ಡೊಮಿನೊಸ್ ನಮಗೆ ಅತ್ಯಂತ ಪ್ರಶ್ ಆಗಿರುವ ಪಿಜ್ಜಾ ಡೆಲಿವರಿ ಮಾಡುವ ವಿಧಾನ, ಅತ್ಯಂತ ಅಸಹ್ಯಕರ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರೇ ಹೇಳಿರುವ ಪ್ರಕಾರ ಇದು ನಡೆದಿರುವುದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಚೂಢಸಂದ್ರದ ಬಳಿಯ ಹೊಸ ರೋಡ್ ಡೊಮಿನೋಸ್ ಪಿಜ್ಜಾ ಕೇಂದ್ರದಲ್ಲಿ ಎಂದು ತಿಳಿದು ಬಂದಿದೆ.
ಡೊಮಿನೋಸ್‌ನ್ನು ಟ್ಯಾಗ್ ಮಾಡಿ ಸಾಹಿಲ್ ಈ ಟ್ವಿಟ್ ಮಾಡಿರುವುದರಿಂದ ಡೊಮಿನೊಸ್ ಕೇರ್‌ನವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ವಿವರವಾದ ದೂರು ನೀಡಿ, ನಾವು ಖಂಡಿತವಾಗಿಯೂ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ.
ಸಾಹಿಲ್ ಅವರ ಈ ಟ್ವಿಟ್ ವೈರಲ್ ಆಗಿದ್ದು, ಅನೇಕ ಪಿಜ್ಜಾ ಪ್ರೇಮಿಗಳು ಪಿಜ್ಜಾದ ಹಿಟ್ಟು ಈ ರೀತಿ ಟಾಯ್ಲೆಟ್ ಬ್ರಶ್‌ಗಳ ಜೊತೆ ಇಟ್ಟಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.