Home International ಭಾರೀ ಇಂಟೆಲೆಜೆಂಟ್ ಕಳ್ಳ | ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಮಾಡಿದ ಉಪಾಯವೇನು ನೋಡಿ

ಭಾರೀ ಇಂಟೆಲೆಜೆಂಟ್ ಕಳ್ಳ | ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಮಾಡಿದ ಉಪಾಯವೇನು ನೋಡಿ

Hindu neighbor gifts plot of land

Hindu neighbour gifts land to Muslim journalist

ಕಳ್ಳರು ಕಳ್ಳತನ ಮಾಡುವಾಗ ನಾನಾ ರೀತಿಯ ಉಪಾಯ ಮಾಡುತ್ತಾರೆ. ಕಳ್ಳರು ಈಗ ಆಧುನಿಕತೆಗೆ ತಕ್ಕಂತೆ ಬದಲಾಗಿದ್ದಾರೆ. ಕಳ್ಳರು ತಂತ್ರಜ್ಞಾನದ ಬಗ್ಗೆ ಫುಲ್ ಅಪ್ಡೇಟ್ ಆಗಿದ್ದಾರೆ ಎಂದೇ ಹೇಳಬಹುದು. ಕಳ್ಳತನದಲ್ಲೂ ಹಲವು ತಂತ್ರಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಕಳ್ಳತನ ಮಾಡಿದ ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಹೋಗುವ ಊರಿಂದ ಊರಿಗೆ ಪರಾರಿಯಾಗುವ ಕಳ್ಳರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವಿಶೇಷ ಇಂಟೆಲೆಜೆಂಟ್ ಕಳ್ಳ ಇದ್ದಾನೆ

ಇಲ್ಲೊಬ್ಬ ಕಳ್ಳ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡಗಿದ್ದೆಲ್ಲಿ ಎಂದು ಕೇಳಿದರೆ ನೀವು ನಿಜಕ್ಕೂ ದಂಗಾಗ್ತೀರ. ಹೌದು ಇಂಗ್ಲೆಂಡ್‌ನಲ್ಲಿ ಕಳ್ಳನೋರ್ವ ಪೊಲೀಸರಿಂದ ತಪ್ಪಿಸಿಕೊಳ್ಳಲು ಆತನಷ್ಟೇ ದೊಡ್ಡ ಗಾತ್ರದ ಟೆಡ್ಡಿಬೇರ್‌ನೊಳಗೆ ಅಡಗಿದ್ದಾನೆ. ಆದರೆ ಕಳ್ಳರು ಚಾಪೆ ಅಡಿ ನುಗ್ಗಿದರೆ ಪೊಲೀಸರು ರಂಗೋಲಿ ಕೆಳಗೆ ನುಗ್ತಾರೆ ಎಂಬುದು ಈ ಕಳ್ಳನಿಗೆ ಗೊತ್ತಿಲ್ಲ ಕಾಣಬೇಕು. ಹಾಗಾಗಿ ಈತನನ್ನು ಟೆಡ್ಡಿಬೇರ್‌ನೊಳಗಿನಿಂದಲೂ ಹೊರಗೆಳೆದು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ಸು ಕಂಡಿದ್ದಾರೆ.

ಯುನೈಟೆಡ್ ಕಿಂಗ್‌ಡಮ್‌ನ ಕೇವಲ 18 ವರ್ಷದ ಜೋಶುವಾ ಡಾಟ್ಸನ್ ಎಂಬಾತನೇ ಹೀಗೆ ಟೆಡ್ಡಿಬೇರ್ ಒಳಗೆ ಅಡಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲೆತ್ನಿಸಿದ್ದ ಕಳ್ಳ. ಈತ ಕಾರು ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ. ಆದರೆ ಈತ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡಗಿಕೊಂಡ ಜಾಗ ನೋಡಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ.

ಪೊಲೀಸರ ಪ್ರಕಾರ, ಈ ಯುವ ತರುಣ ಕಾರು ಕಳ್ಳ ಜೋಶುವಾ ಡಾಟ್ಸನ್, ಆತನಷ್ಟೇ ದೊಡ್ಡ ಗಾತ್ರದ ಟೆಡ್ಡಿಬೇರ್ ಆಟಿಕೆಯೊಳಗೆ ಅಡಗಿರುವುದನ್ನು ನೋಡಿ ಆತನನ್ನು ಟೆಡ್ಡಿಬೇರ್‌ನಿಂದ ಹೊರಬರುವಂತೆ ಮಾಡಿ ಕಂಬಿ ಹಿಂದೆ ಕೂರಿಸಿದ್ದಾರೆ. ಈತ ಐದು ಅಡಿ ಎತ್ತರದ ಟೆಡ್ಡಿಬೇರ್‌ನೊಳಗೆ ಅಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿರುವ ಪೊಲೀಸರು, ಈ ದೈತ್ಯ ಟೆಡ್ಡಿಬೇರ್‌ನ ಎರಡು ವಿವಿಧ ಕೋನಗಳಿಂದ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೇ ತಿಂಗಳಲ್ಲಿ ಕಾರನ್ನು ಕದ್ದಿದ್ದ ಜೋಶುವಾ ಡಾಟ್ಸನ್, ಈ ಪ್ರಕರಣದಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದ. ಎಫ್‌ಬಿ ಪೋಸ್ಟ್‌ನ ಪ್ರಕಾರ, ಪೊಲೀಸರು ಆತನ ಮನೆಯ ವಿಳಾಸವನ್ನು ತಲುಪಿ ಮನೆಯನ್ನು ಹುಡುಕಿದಾಗ, ಕೋಣೆಯಲ್ಲಿ ದೊಡ್ಡ ಗಾತ್ರದ ಟೆಡ್ಡಿಬೇರ್‌ವೊಂದು ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ. ಒಂದು ಕ್ಷಣ ದಂಗಾದ ಅವರು ನಂತರ ಜೋಶುವಾ ಮಗುವಿನ ಆಟದ ಕರಡಿಯೊಳಗೆ ಅಡಗಿರುವುದನ್ನು ಪತ್ತೆ ಮಾಡಿದ್ದಾರೆ. ಪೊಲೀಸರಿಗೆ ಚಮಕ್ ನೀಡಿ ತಪ್ಪಿಸಿಕೊಳ್ಳಲು ಜೋಶುವಾ ಆಟದ ಕರಡಿಯೊಳಗೆ ನುಗ್ಗಿಕೊಂಡಿದ್ದ. ಒಂದು ವೇಳೆ ಸ್ವಲ್ಪ ಸಮಯದವರೆಗೆ ಆತ ಉಸಿರನ್ನು ನಿಯಂತ್ರಿಸಿಕೊಂಡಿದ್ದರೆ ಪೊಲೀಸರಿಂದ ಆತ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಪೊಲೀಸರ ಸೂಕ್ಷ್ಮ ಗ್ರಹಿಕೆ ಆತನನ್ನು ಕಂಬಿ ಹಿಂದೆ ಕಳುಹಿಸುವಂತೆ ಮಾಡಿದೆ.

ಹಲವು ಪ್ರಕರಣಗಳಿಗೆ ಬೇಕಾಗಿದ್ದ ಜೋಶುವಾಗೆ ನ್ಯಾಯಾಲಯ ಒಂಬತ್ತು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.