Home Interesting ಹಾವಿಗೆ ಕಚ್ಚಿದ ಪುಟ್ಟ ಹುಡುಗಿ; ಪವಾಡವೆಂಬತೆ ಮಗು ಜೀವಂತ, ಹಾವು ಸಾವು!

ಹಾವಿಗೆ ಕಚ್ಚಿದ ಪುಟ್ಟ ಹುಡುಗಿ; ಪವಾಡವೆಂಬತೆ ಮಗು ಜೀವಂತ, ಹಾವು ಸಾವು!

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ನಾವು ಹಾವು ಕಚ್ಚಿ ಮನುಷ್ಯರು ಸಾಯುವುದನ್ನು ಕೇಳಿದ್ದೇವೆ. ಆದ್ರೆ, ಇಲ್ಲೊಂದು ಕಡೆ ನಂಬಲು ಅಸಾಧ್ಯವೆಂಬಂತೆ ಹಾವಿಗೆ ಬಾಲಕಿ ಕಚ್ಚಿ ಹಾವು ಸತ್ತಿರುವ ಆಘಾತಕಾರಿ ಘಟನೆ ನಡೆದಿದೆ.

ಇಂತಹ ಹೃದಯ ವಿದ್ರಾವಕ ಘಟನೆಯು ಟರ್ಕಿಯ ಬ್ಯಾಂಗೋಲ್ ನಗರದ ಕಾಂತಾರ್ ಎಂಬ ಪುಟ್ಟ ಗ್ರಾಮದಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಹುಡುಗಿಯ ವಯಸ್ಸು 2 ವರ್ಷಗಳು. ಪುಟ್ಟ ಬಾಲಕಿಯೋರ್ವಳು ತನ್ನ ಮನೆಯಲ್ಲಿ ಆಟವಾಡಿಕೊಂಡಿದ್ದಾಗ ಎಲ್ಲಿಂದಲೋ ಒಂದು ಹಾವು ಆಕೆಯ ಬಳಿಗೆ ಬಂದಿದೆ.

ಆ ಸಮಯದಲ್ಲಿ ಬಾಲಕಿಯ ಸುತ್ತಮುತ್ತ ಯಾರೂ ಇರಲಿಲ್ಲ. ಈ ವೇಳೆ ಬಾಲಕಿ ಆಟವಾಡುತ್ತ ಹಾವನ್ನು ಹಿಡಿದಿದ್ದು, ಕೋಪಗೊಂಡ ಹಾವು ಬಾಲಕಿಯನ್ನು ಕಚ್ಚಿದೆ. ಇದರಿಂದ ಕೋಪಗೊಂಡ ಅಮಾಯಕ ಬಾಲಕಿ ಕೂಡ ಹಾವನ್ನು ಹಿಡಿದು ತನ್ನ ಹಾಲುಳ್ಳ ಹಲ್ಲುಗಳಿಂದ ಜಗಿದಿದ್ದಾಳೆ. ಹಾವು ಕಚ್ಚಿ ನೋವು ಅನುಭವಿಸಿದಾಗ ಆಕೆ ಜೋರಾಗಿ ಅಳಲು ಪ್ರಾರಂಭಿಸಿದ್ದಾಳೆ. ಅಳುತ್ತಿರುವ ಬಾಲಕಿಯ ಧ್ವನಿ ಕೇಳಿ ಅಕ್ಕಪಕ್ಕದ ಜನರು ಆಕೆಯ ಬಳಿ ಧಾವಿಸಿದ್ದಾರೆ. ಆದರೆ ಬಾಲಕಿಯ ಕೋಣೆಯೊಳಗಿನ ದೃಶ್ಯವನ್ನು ನೋಡಿ ನೆರೆದವರೆಲ್ಲರೂ ದಂಗಾಗಿದ್ದಾರೆ.

ಸುಮಾರು ಅರ್ಧ ಮೀಟರ್ ಉದ್ದದ ಒಂದು ಹಾವನ್ನು ಪುಟ್ಟ ಬಾಲಕಿ ತನ್ನ ಹಲ್ಲುಗಳಲ್ಲಿ ಕಚ್ಚಿ ಹಿಡಿದಿರುವುದನ್ನು ಜನರು ನೋಡಿದ್ದಾರೆ. ಹಾವು ಬಾಲಕಿಯ ಕೆಳತುಟಿಗೆ ಕಚ್ಚಿತ್ತು. ಇದಾದ ನಂತರ ನೆರೆಹೊರೆಯವರು ತಡಮಾಡದೆ ಬಾಲಕಿಯನ್ನು ಟರ್ಕಿಯ ಬಿಂಗೋಲ್ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅಲ್ಲಿ ಆಕೆಯನ್ನು 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಸದ್ಯ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ. ಆದರೆ ಹಾವು ಮಾತ್ರ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಹಾವನ್ನು ಆಟಿಕೆ ಎಂದು ತಪ್ಪಾಗಿ ಭಾವಿಸಿ ತನ್ನ ಹಾಲಿನ ಹಲ್ಲುಗಳನ್ನು ಹಾವಿನ ಹೊಟ್ಟೆಯಲ್ಲಿ ಹುದುಗಿಸಿದ್ದಾಳೆ. ಇದರಿಂದ ಆಕೆಯ ಪ್ರಾಣ ಉಳಿದಿದ್ದೆ ರೋಚಕವಾಗಿದೆ.