ಧ್ವಜಾರೋಹಣಕ್ಕೆ ಈದ್ಗಾ ಮೈದಾನ ಸಿದ್ಧ – ಸರ್ಪಗಾವಲು ಸುತ್ತು ಹಾಕಿಕೊಂಡು ನಿಂತ ಖಾಕಿ ಪಡೆ….!

Share the Article

ನಾಳೆ ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯ ದಿನದ ಸಂಭ್ರಮ. ಇತ್ತ ಚಾಮರಾಜಪೇಟೆ ಈದ್ಗಾ ಮೈದಾನದಲ್ಲೂ ನಾಳೆಯ ಸ್ವಾತಂತ್ರ್ಯ ದಿನಾಚರಣೆಗೆ ಸಾರ್ವಜನಿಕರಿಗೆ ಪಾಸ್ ಕೊಡುವ ಬಗ್ಗೆ ಚಿಂತನೆ ನಡೆಯುತ್ತಿದೆ.

ವಂದೇ ಮಾತರಂ ಮತ್ತು ಭಾರತ್ ಮಾತಾಕಿ ಜೈ ಅಂತ ಎರಡೇ ಘೋಷಣೆ ಕೂಗಬೇಕು ಎನ್ನುವ ಷರತ್ತುಗಳು ಇವೆ. ಅದನ್ನು ಹೊರತುಪಡಿಸಿ ಯಾವುದೇ ಪಕ್ಷ, ಸಂಘಟನೆ ಬೇರೆ ಯಾವುದೇ ತರಹದ ಘೋಷಣೆಗಳನ್ನ ಮೈದಾನದಲ್ಲಿ ಕೂಗುವಂತಿಲ್ಲ. ಮಕ್ಕಳನ್ನ ಹೊರತುಪಡಿಸಿ ಸಾರ್ವಜನಿಕರಿಗೆ ಪ್ರತ್ಯೇಕ ಗೇಟ್ ಮೂಲಕ ಪ್ರವೇಶ ಇರಲಿದೆ. ಕಂದಾಯ ಇಲಾಖೆ ಅಧಿಕಾರಿಗಳು ಈಗಾಗಲೇ ಧ್ವಜಾರೋಹಣ ಸ್ಥಂಭದ ಗುರುತು ಮಾಡಿದ್ದಾರೆ.

ಮಧ್ಯಾಹ್ನ ಸಮಯಕ್ಕೆ ಆರ್ ಎಎಫ್ ಪಡೆಯಿಂದ ಚಾಮರಾಜಪೇಟೆಯಲ್ಲಿ ಪರೇಡ್ ನಡೆಯಲಿದ್ದು. ಇದೇ ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಹಿನ್ನೆಲೆ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ. ಮಾಣಿಕ್ ಷಾ ಮೈದಾನದಲ್ಲಿ ಸಿಎಂ ಧ್ವಜಾರೋಹಣ ಮಾಡುವ ಸಮಯಕ್ಕೆ ಈದ್ಗಾದಲ್ಲಿಯೂ ಧ್ವಜರೋಹಣ ನಡೆಸಲಿದ್ದಾರೆ.

ಗಣ್ಯರಿಗೆ ವೇದಿಕೆ ಮಾಡಿದ್ದು, ಕುರ್ಚಿ ವ್ಯವಸ್ಥೆಯನ್ನ ಸಹ ಮಾಡಲಿದ್ದಾರೆ. ಒಟ್ಟಾರೆ ನಾಳೆ ಮೈದಾನವಿಡೀ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಸರ್ಪಗಾವಲಿನಲ್ಲಿರಲಿದೆ.

Leave A Reply