Home latest ಮಾಲ್ ನಲ್ಲಿ ಸಾವರ್ಕರ್ ಫೋಟೋ | ಶಿವಮೊಗ್ಗ ಉದ್ವಿಗ್ನ !!!

ಮಾಲ್ ನಲ್ಲಿ ಸಾವರ್ಕರ್ ಫೋಟೋ | ಶಿವಮೊಗ್ಗ ಉದ್ವಿಗ್ನ !!!

Hindu neighbor gifts plot of land

Hindu neighbour gifts land to Muslim journalist

ಶಿವಮೊಗ್ಗ: ವೀರ ಸಾವರ್ಕರ್ ಫೋಟೋವೊಂದನ್ನು ಶಿವಪ್ಪ ನಾಯಕ ಮಾಲ್‌ನಲ್ಲಿ ಪಾಲಿಕೆ ವತಿಯಿಂದ ಹಾಕಿದ್ದಕ್ಕೆ ತೀವ್ರ ಗೊಂದಲ ಸೃಷ್ಠಿಸಿದಾತನ ವಿರುದ್ಧ ಕೇಸ್ ದಾಖಲಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆಯ ವಿಚಾರವಾಗಿ SDPI ಕಾರ್ಯಕರ್ತನ ವಿರುದ್ಧ ಕೇಸ್‌ ದಾಖಲಾಗಿದೆ.

75ನೇ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮಾಚರಣೆ ಹಿನ್ನೆಲೆ ಹೋರಾಟಗಾರ ವೀರ ಸಾವರ್ಕರ್‌ ಭಾವಚಿತ್ರವನ್ನು ಮಾಲ್‌ನಲ್ಲಿ ಎದುರು ಹಾಕಲಾಗಿತ್ತು. ಇದನ್ನು ಕಂಡ SDPI ಮತ್ತು PFI ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಭಾವಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದ SDPI ಕಾರ್ಯಕರ್ತನ ಅರೀಫ್‌ ಎಂಬವನ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಅರೀಫ್‌ ಪಾಲಿಕೆ ಸದಸ್ಯೆಯ ಪತಿ ಎಂದು ಗುರುತಿಸಲಾಗಿದೆ. ಡೊಡ್ಡ ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಬಿಜೆಪಿ ಪ್ರತಿಭಟನೆ

ಇನ್ನು ಎಸ್‌ಡಿಪಿಐ ಕಾರ್ಯಕರ್ತರ ಆಕ್ರೋಶ ಬೆನ್ನಲ್ಲೆ ಇತ್ತ ಸಿಟಿ ಸೆಂಟರ್ ಮಾಲ್ ಎದುರು ಬಿಜೆಪಿ ಪ್ರತಿಭಟನೆ ಶುರುವಾಗಿದೆ. ಇಂದು ಮಧ್ಯಾಹ್ನ ಸಿಟಿ ಸೆಂಟರ್ ಮಾಲ್ ನಲ್ಲಿ ಪ್ರತಿಭಟನೆ ನಡೆಸಿ ಸಾವರ್ಕರ್ ಭಾವಚಿತ್ರ ತೆಗೆಯುವಂತೆ ಎಸ್ ಡಿಪಿಐ ಕಾರ್ಯಕರ್ತರು ಒತ್ತಾಯಿಸಿದ್ದರು. ಈ ವೇಳೆ ಎಸ್ ಡಿಪಿಐ ಕಾರ್ಯಕರ್ತರು ಅವಾಚ್ಯ ಶಬ್ದಗಳನ್ನು ಬಳಸಿದ್ದರು. ಹೀಗಾಗಿ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಬಿಜೆಪಿ ಪ್ರತಿಭಟನೆ ನಡೆಸಿದೆ. ಎಸ್‌ಡಿಪಿಐ ಕಾರ್ಯಕರ್ತರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಿಂದಲೇ ಸಿಟಿ ಸೆಂಟರ್ ಮಾಲ್ ನಲ್ಲಿ ಸ್ವಾತಂತ್ರ ಹೋರಾಟಗಾರರ ಭಾವಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.