RSS ಸಾಮಾಜಿಕ ಜಾಲತಾಣದಲ್ಲಿ ತ್ರಿವರ್ಣ ಧ್ವಜದ‌ ಡಿಪಿ | ಭಾರೀ ಟೀಕೆಯ ನಂತರ ಡಿಪಿ ಬದಲಾವಣೆ

ತನ್ನ ಸಾಮಾಜಿಕ ಜಾಲತಾಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ತ್ರಿವರ್ಣ ಧ್ವಜವನ್ನು ತನ್ನ ಪ್ರೊಫೈಲ್‌ ಫೋಟೋವನ್ನಾಗಿ ಮಾಡಿದೆ.

 

ಅಜಾದಿ ಕೀ ಅಮೃತಮಹೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಪ್ರೊಫೈಲ್‌ನಲ್ಲಿ ತ್ರಿವರ್ಣಧ್ವಜವನ್ನು ಡಿಪಿ(ಡಿಸ್ಪ್ಲೇ ಫ್ಯೂಚರ್‌) ಮಾಡಬೇಕೇಂದು ಕೇಳಿಕೊಂಡಿದ್ದರು.

ಬಿಜೆಪಿ ನಾಯಕರು ತ್ರಿವರ್ಣ ಧ್ವಜವನ್ನು ಡಿಪಿ ಮಾಡಿಕೊಂಡಿದ್ದರೂ ಆರ್‌ಎಸ್‌ಎಸ್‌ ತನ್ನ ಖಾತೆಯಲ್ಲಿ ಡಿಪಿ ಬದಲಿಸಿರಲಿಲ್ಲ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿತ್ತು. ಈಗ ಆರ್‌ಎಸ್‌ಎಸ್‌ ತನ್ನ ಡಿಪಿಯಲ್ಲಿ ತ್ರಿವರ್ಣ ಧ್ವಜವನ್ನು ಹಾಕಿದೆ. ಅಷ್ಟೇ ಅಲ್ಲದೇ ಸಂಚಾಲಕ ಮೋಹನ್‌ ಭಾಗವತ್‌ ಅವರು ತಮ್ಮ ಡಿಪಿಯಲ್ಲಿ ತ್ರಿವರ್ಣ ಧ್ವಜವನ್ನು ಹಾಕಿದ್ದಾರೆ.

ಮೋಹನ್‌ ಭಾಗವತ್‌ ಅವರು ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ವೀಡಿಯೋವನ್ನು ಆರ್‌ಎಸ್‌ಎಸ್‌ ಅಪ್ಲೋಡ್‌ ಮಾಡಿದೆ.

Leave A Reply

Your email address will not be published.