Home latest ನಮಾಜ್ ಮುಗಿಸಿ ಬಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗೆ ಚಾಕು ಇರಿತ, ಸಾವು

ನಮಾಜ್ ಮುಗಿಸಿ ಬಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗೆ ಚಾಕು ಇರಿತ, ಸಾವು

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ವಿದ್ಯಾರ್ಥಿಯೋರ್ವನನ್ನು ತಾನು ಕಲಿಯುತ್ತಿದ್ದ ಕಾಲೇಜಿನ 50 ಮೀಟರ್ ಅಂತರದಲ್ಲೇ ಕೊಲೆ ಮಾಡಿರೋ ಘಟನೆಯೊಂದು ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

18 ವರ್ಷದ ಅರ್ಬಜ್ ಎಂಬ ವಿದ್ಯಾರ್ಥಿಯನ್ನ ಚಾಕು ಇರಿದು ಹತ್ಯೆ ಮಾಡಲಾಗಿದೆ.

ನಿನ್ನೆ(ಶುಕ್ರವಾರ) ಮಧ್ಯಾಹ್ನ 2.30ರ ಸುಮಾರಿಗೆ ಕಾಲೇಜಿನಿಂದ ಕೆಳಗೆ ಬಂದ ವಿದ್ಯಾರ್ಥಿಗೆ ಯಾರೋ ಚಾಕು ಇರಿತ ಮಾಡಿದ್ದಾರೆ. ಈತ ರಕ್ತ ಸ್ರಾವವಾಗಿ ಒದ್ದಾಡ್ತಿದ್ದ. ಇದನ್ನು ನೋಡಿದ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗೋವಷ್ಟರಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ಇದೇ ಕಾಲೇಜಿನಲ್ಲಿ ಮೃತ ಅರ್ಬಜ್ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡ್ತಿದ್ದ. ಕಳೆದ ಎರಡು ದಿನಗಳಿಂದ ಈ ಕಾಲೇಜ್ ನಲ್ಲಿ ಕಲ್ಟರಲ್ ಕಾರ್ಯಕ್ರಮಗಳು ನಡೀತಿದ್ದು, ಖುಷಿಯಾಗಿ ಎಲ್ಲರೂ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ರು. ಆದ್ರೆ ನಿನ್ನೆ ಕುಲ್ಲಕ ವಿಚಾರಕ್ಕೆ ಅರ್ಬಜ್, ಅರ್ಬಜ್ ಸ್ನೇಹಿತರು ಮತ್ತು ಬೇರೆ ಸ್ಪೂಡೆಂಟ್ಸ್ ಮಧ್ಯೆ ಜಗಳವಾಗಿದೆ.

ನಂತರ ಎಂದಿನಂತೆ ಶುಕ್ರವಾರ ಮತ್ತೆ ಕಾಲೇಜಿಗೆ ಬಂದಿದ್ದ ಅರ್ಬಜ್ ಮಧ್ಯಾಹ್ನದ ನಮಾಜ್ ಮುಗಿಸಿಕೊಂಡು ಕಾಲೇಜ್ ಗೆ ಬಂದಿದ್ದಾನೆ. ಈ ವೇಳೆ ಯಾರೋ ಅರ್ಬಜ್ ನ ಕರೆ ಮಾಡಿ ಕೆಳಗೆ ಕರೆದಿದ್ದಾರೆ. ನಂತರ ಹಂತಕರು ಇಲ್ಲಿಂದ 50 ಮೀಟರ್ ದೂರ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ. ಪರಿಣಾಮ ಅರ್ಬಜ್ ಸಾವನ್ನಪ್ಪಿದ್ದಾನೆ.

ಸದ್ಯ ಘಟನಾ ಸ್ಥಳಕ್ಕೆ ಕೆ.ಜಿ ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.