‘ಸರ್ಕಾರಿ ಕೆಲಸ’ಕ್ಕಾಗಿ ಯುವತಿಯರು ಮಂಚ ಹತ್ತಬೇಕು, ಯುವಕರು ಲಂಚ ಕೊಡಬೇಕು-ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

Share the Article

ಕಲಬುರ್ಗಿ: “ಸರ್ಕಾರ ಕೆಲಸಬೇಕು ಅಂದರೆ ಸಾಕು ಯುವಕರು ಲಂಚ ಕೊಡಬೇಕು , ಯುವತಿಯರು ಮಂಚ ಹತ್ತಬೇಕು. ಇದು ಲಂಚ-ಮಂಚದ ಸರ್ಕಾರವಾಗಿದೆ” ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ದೃಷ್ಟಿಯಲ್ಲಿ ಸರಕಾರದ ಸಾಧನೆ ಶೂನ್ಯ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡುತ್ತಿಲ್ಲ. ಸಚಿವ ಪ್ರಭು ಚೌಹಾನ್ ಆಪ್ತ ಜ್ಞಾನದೇವ ಜಾಧವ್ ಅನೇಕ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ ಎಲ್ಲರನ್ನೂ ವಂಚಿಸಿ, ಈಗ ಪೊಲೀಸರ ವಶದಲ್ಲಿದ್ದಾರೆ. ಈಗ ಪ್ರತಿ ಹುದ್ದೆಗಳ ನೇಮಕಾತಿಯಲ್ಲಿಯೂ ಅಕ್ರಮ ನಡೆಯುತ್ತಿದೆ. ಕೆಪಿಟಿಸಿಎಲ್​ನ 1,492 ಹುದ್ದೆಗಳಿಗೆ ಅರ್ಜಿ ಕರೆದಾಗ ಅದಕ್ಕೆ ಅರ್ಜಿ ಹಾಕಿದವರು 3 ಲಕ್ಷಕ್ಕೂ ಅಧಿಕ ಜನ. ಈಗ ಈ ಪರೀಕ್ಷೆ ಕೂಡಾ ಸರಕಾರ ಪಿಎಸ್ ಐ ಪರೀಕ್ಷೆ ನಡೆಸಿದಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.

Leave A Reply