ಮಂಗಳೂರು : ಮಕ್ಕಳ ಕೈಯಲ್ಲಿದ್ದ ರಾಖಿ ತೆಗೆಸಿ ಕಸದ ಬುಟ್ಟಿಗೆ ಎಸೆದ ಶಿಕ್ಷಕರು ! ಶಾಲೆಗೆ ಪೋಷಕರ,ಬಿಜೆಪಿ ಕಾರ್ಯಕರ್ತರ ಮುತ್ತಿಗೆ

Share the Article

ಮಂಗಳೂರು: ಎಲ್ಲೆಡೆ ರಕ್ಷಾಬಂಧನದ ಸಂಭ್ರಮ. ಅದರಲ್ಲೂ ಮಕ್ಕಳ ಕೈಯಲ್ಲಂತೂ ಬಗೆ ಬಗೆಯ ರಕ್ಷಾಬಂಧನ ಇರುತ್ತೆ. ಅಂತಿಪ್ಪ ಮಕ್ಕಳ ಕೈಯ್ಯಲ್ಲಿದ್ದ ರಕ್ಷಾ ಬಂಧನದ ರಾಖಿ ಕಿತ್ತೆಸೆದ ಘಟನೆಯೊಂದು ಮಂಗಳೂರಿನ ಶಾಲೆಯೊಂದರಲ್ಲಿ ನಡೆದಿದೆ. ಈ ಆರೋಪದ ಹಿನ್ನೆಲೆ ಪೋಷಕರು ಮತ್ತು ಬಿಜೆಪಿ ಕಾರ್ಯಕರ್ತರಿಂದ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಮಂಗಳೂರು ಹೊರವಲಯದ ಕಾಟಿಪಳ್ಳದ ಖಾಸಗಿ ಶಾಲೆಯಲ್ಲಿ ನಡೆದಿದೆ.

ಕಾಟಿಪಳ್ಳದ ಇನ್ಸೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂತಹ ದುರದೃಷ್ಟಕರ ಘಟನೆ ನಡೆದಿದೆ. ನಿನ್ನೆ ರಕ್ಷಾಬಂಧನ ಹಿನ್ನೆಲೆ ಕೈಗೆ ರಾಖಿ ಕಟ್ಟಿಕೊಂಡು ಮಕ್ಕಳು ಖುಷಿಯಾಗಿಯೇ ಹೋಗಿದ್ದರು, ಆದರೆ ಶಾಲೆಗೆ ಬಂದ ಮಕ್ಕಳ ರಾಖಿ ತೆಗೆಸಿ ಕೆಲ ಶಿಕ್ಷಕರು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆ ಶಾಲೆಗೆ ಆಗಮಿಸಿ ಮುಖ್ಯಶಿಕ್ಷಕ ಮತ್ತು ಶಿಕ್ಷಕರಿಗೆ ಪೋಷಕರು ತರಾಟೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಯುವಮೋರ್ಛಾ ಕಾರ್ಯಕರ್ತರಿಂದಲೂ ಶಾಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದ್ದು, ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಸುರತ್ಕಲ್ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಫ್ರೆಂಡ್ ಶಿಪ್ ಬ್ಯಾಂಡ್ ಅಂದುಕೊಂಡು ತೆಗೆಸಿದ್ದಾಗಿ ಶಿಕ್ಷಕರು ಸಮಜಾಯಿಷಿ ಕೊಟ್ಟಿದ್ದಾರೆ. ರಕ್ಷಾ ಬಂಧನ ಯಾವುದೇ ಕಾರಣಕ್ಕೂ ತೆಗೆಸಲ್ಲ ಅಂತ ಶಾಲಾ ಮುಖ್ಯಶಿಕ್ಷಕ ಹೇಳಿದ್ದಾರೆ. ಆದರೆ ಪೋಷಕರು ಶಿಕ್ಷಕರೇ ಮತ್ತೆ ಮಕ್ಕಳ ಕೈಗೆ ರಕ್ಷೆ ಕಟ್ಟುವಂತೆ ಪಟ್ಟು ಹಿಡಿದ್ದಾರೆ.

Leave A Reply