Home latest ಪುತ್ತೂರು | ಲೆಕ್ಚರರ್ ಹುಡುಗಿ ಜತೆ ಧರ್ಮಸ್ಥಳ ಗ್ರಾಮದ ಖಾಸಗಿ ಲಾಡ್ಜ್ ಗೆ ಬುಕ್ಕಿಂಗ್ ಗೆ...

ಪುತ್ತೂರು | ಲೆಕ್ಚರರ್ ಹುಡುಗಿ ಜತೆ ಧರ್ಮಸ್ಥಳ ಗ್ರಾಮದ ಖಾಸಗಿ ಲಾಡ್ಜ್ ಗೆ ಬುಕ್ಕಿಂಗ್ ಗೆ ಬಂದ ಅನ್ಯ ಮತೀಯ….!

Hindu neighbor gifts plot of land

Hindu neighbour gifts land to Muslim journalist

ಪುತ್ತೂರು : ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪ ಅನ್ಯ ಜೋಡಿಯನ್ನು ಕೊಕ್ಕಡ ಹಿಂದೂ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಕೊಕ್ಕಡದ ಸಮೀಪದ ಕಾಪಿನ ಬಾಗಿಲು ಎಂಬ ಪ್ರದೇಶದಲ್ಲಿ ಹಿಂದೂ ಕಾರ್ಯಕರ್ತರು ಅನ್ಯ ಜೋಡಿಯನ್ನು ಹಿಡಿದಿದ್ದಾರೆ.

ಹುಡುಗನು ಗದಗ ಮೂಲದ ರಫೀಕ್ (21) ಸಂಕದಲ್, ತಾಲೂಕು ನರಗುಂಡ್, ಪೋಸ್ಟ್ ಚಿಕ್ ನರಗುಂಡು ಗದಗ ಎಂಬಾತ. ಆತ ಅಲ್ಲೇ ಗದಗದ ಹಿಂದೂ ಯುವತಿಯನ್ನು ಧರ್ಮಸ್ಥಳಕ್ಕೆ ಕರೆ ತಂದಿದ್ದು ಖಾಸಗಿ ಲಾಡ್ಜ್ ಬುಕ್ಕಿಂಗ್ ಗಾಗಿ ಬಂದಿರುತ್ತಾರೆ. ನವ ವಿವಾಹಿತ ಅನ್ಯ ಮತೀಯ ಜೋಡಿ ಎಂದು ತಿಳಿದ ಕೂಡಲೆ ಲಾಡ್ಜ್ ಸಿಬ್ಬಂದಿಯು, ರೂಮ್ ನೀಡಲು ನಿರಾಕರಿಸಿದ್ದಾರೆ.

ಆಗ ಅವರು ತಕ್ಷಣ ಅಲ್ಲಿಂದ ಮರಳಿ ಬೆಂಗಳೂರು ಕಡೆಗೆ ಎಸ್ಕೇಪ್ ಆಗಲು ಬಸ್ ಹತ್ತಿದ್ದರು. ಆಗ, ವಾಪಸ್ ಹೋಗುವ ವೇಳೆಯಲ್ಲಿ ಕೊಕ್ಕಡದಲ್ಲಿ ಸುದ್ದಿ ತಿಳಿದ ಹಿಂದೂ ಕಾರ್ಯಕರ್ತರು ಜಮಾವಣೆ ಆಗಿದ್ದಾರೆ. ಅವರು ಕೊಕ್ಕಡದ ಪಕ್ಕ ಬಸ್ ನಿಲ್ಲಿಸಿ ಅನ್ಯ ಕೋಮಿನ ಜೋಡಿಯನ್ನು ಹಿಡಿದಿದ್ದಾರೆ. ನಂತರ ಜೋಡಿಯನ್ನು ನೇಲ್ಯಾಡಿ ಪೋಲಿಸರಿಗೆ ಒಪ್ಪಿಸಿದ್ದಾರೆ.

ಯುವತಿಯು ಒಂದು ವಿದ್ಯಾ ಸಂಸ್ಥೆಯಲ್ಲಿ ಲೆಕ್ಚರರ್ ಎಂದು ವಿಚಾರಿಸಿದಾಗ ತಿಳಿದು ಬಂದಿದೆ. ಆಕೆಯ ಮನೆಯವರ ನಂಬರ್ ಕೇಳಿದಾಗ, ಆಕೆ ತನ್ನ ಮನೆಯವರ ನಂಬರ್ ನೀಡಲು ನಿರಾಕರಿಸಿದ್ದಾಳೆ. ಮನೆಗೆ ಗೊತ್ತಾದರೆ ಮಾನ ಮರ್ಯಾದಿ ಹೋಗುವ ಭಯದಿಂದ ಮನೆಯವರ ವಿಳಾಸ ತಿಳಿಸದೆ ಸಮಯ ತಳ್ಳಿದ್ದಾಳೆ. ಈಗ ಪೋಲಿಸ್ ವಿಚಾರಣೆ ಸಾಗಿದೆ ಎನ್ನಲಾಗಿದೆ. ಅವರಿಬ್ಬರೂ ಜಾಲಿ ಟ್ರಿಪ್ ಹೊರಟವರು ಎನ್ನಲಾಗಿದ್ದು, ಕಳೆದ ತಿಂಗಳಿನಲ್ಲಿ ಇಂತದ್ದು 4 ನೆಯ ಪ್ರಕರಣ.