ಮಂಗಳೂರು – ಮಡಿಕೇರಿ ರಾಷ್ಟ್ರೀಯ ಹೆದ್ದಾರಿ | ಸಂಚಾರಕ್ಕೆ ಇನ್ನು ಮುಕ್ತ ಮುಕ್ತ

ಭಾರೀ ಮಳೆಯಿಂದಾಗಿ ಗುಡ್ಡ ಕುಸಿತದ ಭೀತಿ ಉಂಟಾಗುವ ಕಾರಣದಿಂದ ಮಡಿಕೇರಿ ಮಂಗಳೂರು ರಸ್ತೆ ಸಂಚಾರವನ್ನು ರಾತ್ರಿ ವೇಳೆ ನಿಷೇಧ ಮಾಡಲಾಗಿತ್ತು.

 

ಇದೀಗ ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನಗಳ ಪ್ರಯಾಣಕ್ಕೆ ಹೇರಿದ್ದ ನಿರ್ಬಂಧವನ್ನು ಕೊಡಗು ಜಿಲ್ಲಾಧಿಕಾರಿಗಳು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ವಾಹನ ಸವಾರರು ಇನ್ನು ಮುಂದೆ ನಿರ್ಭೀತಿಯಿಂದ ವಾಹನ ಚಲಾಯಿಸಿಕೊಂಡು ಹೋಗಬಹುದು.

ಮದೆನಾಡಿನಲ್ಲಿ ಗುಡ್ಡ ಕುಸಿತದ ಭೀತಿಯಿಂದ ರಸ್ತೆ ಸಂಪರ್ಕವನ್ನು ರಾತ್ರಿಯ ವೇಳೆ ನಿಷೇಧ ಮಾಡಲಾಗಿತ್ತು. ಇದೀಗ ಗುಡ್ಡವನ್ನು ಕ್ಲೀಯರ್ ಮಾಡುವ ಕೆಲಸ ನಡೆಯುತ್ತಿದ್ದು, ಜತೆಗೆ ವಾಹನ ಸವಾರರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

Leave A Reply

Your email address will not be published.