ಪ್ರಿಯಕರನಿಗೆ ಏಡ್ಸ್ ಇದೆಯೆಂದು ತನ್ನ ದೇಹದೊಳಗು ಎಚ್ ಐವಿ ಇಂಜೆಕ್ಟ್ ಮಾಡಿಕೊಂಡ ಯುವತಿ

Share the Article

ಪ್ರೀತಿ ಪ್ರೇಮಿಗಳನ್ನು ಯಾವ ಮಟ್ಟಕ್ಕೆ ಕೊಂಡೊಯುತ್ತದೆ ಎಂಬುದಕ್ಕೆ ಇಲ್ಲೊಂದು ಕಡೆ ನಡೆದ ಘಟನೆ ನಿದರ್ಶನವಾಗಿದೆ. ಬಹುಶಃ ಇದುವೇ ನಿಜವಾದ ಪ್ರೀತಿ ಇರಬಹುದೇನೋ.. ಹೌದು. ಪ್ರೀತಿಸುತ್ತಿದ್ದ ಯುವಕನಿಗೆ HIV ಇದೆ ಎಂಬ ಕಾರಣಕ್ಕೆ ಯುವತಿಯೋರ್ವಳು ಆತನ ದೇಹದಿಂದ ರಕ್ತ ಹೊರತೆಗೆದು ತನ್ನ ದೇಹದೊಳಗೂ ಇಂಜೆಕ್ಟ್ ಮಾಡಿಕೊಂಡಿರುವ ವಿಚಿತ್ರ ಘಟನೆ ನಡೆದಿದೆ.

ಈ ಘಟನೆ ರಾಜಧಾನಿ ಗುವಾಹಟಿಯಿಂದ 30 ಕಿಲೋ ಮೀಟರ್ ದೂರದ ಸುಲ್ಕುಚಿ ಎಂಬ ಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಶಾಲೆಯೊಂದರಲ್ಲಿ ಓದುತ್ತಿರುವ ಯುವತಿ ಈ ರೀತಿ ನಡೆದುಕೊಂಡಿದ್ದಾಳೆ. ಹೌದು. ಗೆಳೆಯನಿಗೆ ಎಚ್​ಐವಿ ಪಾಸಿಟಿವ್​ ಇದೆ ಅಂತ ಗೊತ್ತಾದ್ರೂ ಸಹ ಆತನೊಂದಿಗೆ ಮೂರು ಸಲ ಮನೆ ಬಿಟ್ಟು ಪರಾರಿಯಾಗಿದ್ದಳು.

ಬಳಿಕ ಯುವತಿಯ ಕುಟುಂಬಸ್ಥರು ಆಕೆಯನ್ನು ವಾಪಸ್ ಕರೆತಂದಿದ್ದು, ಯುವಕನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ, ಆತ ಜೈಲು ಸೇರಿದ್ರೂ ಈಕೆಯ ಹುಚ್ಚು ಪ್ರೀತಿ ಮಾತ್ರ ನಿಲ್ಲಲೇ ಇಲ್ಲ. ಆತನಿಗೆ ಏಡ್ಸ್​ ಇದೆ.ಆತನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುವ ಪ್ರಯತ್ನವನ್ನೂ ಈಕೆ ನಿರಂತರವಾಗಿ ನಡೆಸುತ್ತಿದ್ದಾಳೆ.

ದೈಹಿಕ ಸಂಪರ್ಕ ಬೆಳೆಸಿರುವುದಾಗಿಯೂ ಯುವತಿ ಹೇಳಿಕೊಂಡಿದ್ದಳು, ಈ ಹಿನ್ನೆಲೆಯಲ್ಲಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಲಾಗಿದೆ. ಈ ವೇಳೆ ಆಕೆಗೂ ಏಡ್ಸ್‌ ಇರುವುದು ಪತ್ತೆಯಾಗಿದೆ.

Leave A Reply