Home Interesting ಚಲಿಸುತ್ತಿರುವ ರೈಲಿಗೆ ಹತ್ತಲು ಹೋಗಿ ಇನ್ನೇನು ಪ್ರಾಣವೇ ಹೋಯ್ತು ಅನ್ನುವಷ್ಟರಲ್ಲಿ ರಕ್ಷಣೆಗೆ ಬಂದ ಆರ್‌ಪಿಎಫ್‌ ಸಿಬ್ಬಂದಿ

ಚಲಿಸುತ್ತಿರುವ ರೈಲಿಗೆ ಹತ್ತಲು ಹೋಗಿ ಇನ್ನೇನು ಪ್ರಾಣವೇ ಹೋಯ್ತು ಅನ್ನುವಷ್ಟರಲ್ಲಿ ರಕ್ಷಣೆಗೆ ಬಂದ ಆರ್‌ಪಿಎಫ್‌ ಸಿಬ್ಬಂದಿ

Hindu neighbor gifts plot of land

Hindu neighbour gifts land to Muslim journalist

ಚಲಿಸುತ್ತಿರುವ ರೈಲಿಗೆ ಹತ್ತಲು ಹೋಗಿ ಅದೆಷ್ಟೋ ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದೀಗ ಅದೇ ರೀತಿ ಇನ್ನೇನು ಪ್ರಾಣ ಹೋಗಿಯೇ ಬಿಡ್ತು ಅನ್ನುವಷ್ಟರಲ್ಲಿ ಅಧಿಕಾರಿಗಳು ವೃದ್ಧ ಮಹಿಳೆ ಮತ್ತು ಆಕೆಯ ಮಗನ ಜೀವವನ್ನು ಉಳಿಸಿದ ಘಟನೆ ನಡೆದಿದೆ.

ಹೌದು. ಬಂಕುರಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ (RPF) ಅಧಿಕಾರಿಯ ಜಾಗರೂಕತೆಯು ವೃದ್ಧ ಮಹಿಳೆ ಮತ್ತು ಆಕೆಯ ಮಗನ ಜೀವ ಉಳಿದಿದೆ. ಈ ಘಟನೆಯ ವೀಡಿಯೊವನ್ನು ರೈಲ್ವೆ ಸಚಿವಾಲಯವು ಸೋಮವಾರ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ಆರ್‌ಪಿಎಫ್‌ ( RPF) ಸಿಬ್ಬಂದಿಯನ್ನು ಶ್ಲಾಘಿಸಿದೆ.

ವೀಡಿಯೋದಲ್ಲಿ ಇರುವಂತೆ, ರೈಲು ನಿಲ್ದಾಣದಿಂದ ರೈಲು ಹೊರಟಿದ್ದು, ಆಗ ಚಲಿಸುತ್ತಿರುವ ರೈಲನ್ನು ಹತ್ತಲು ವೃದ್ಧ ಮಹಿಳೆ ಮತ್ತು ಆಕೆಯ ಮಗ ಪ್ರಯತ್ನಿಸುತ್ತಿರುತ್ತಾರೆ. ಈ ವೇಳೆ ಮಹಿಳಾ ಆರ್‌ಪಿಎಫ್‌ ಅಧಿಕಾರಿ ಗುರುತಿಸುತ್ತಾರೆ. ತಕ್ಷಣ ಅಪಾಯವನ್ನು ಗ್ರಹಿಸಿ, ಇವರಿಬ್ಬರನ್ನು ಸಮಯಕ್ಕೆ ಸರಿಯಾಗಿ ಅಪಾಯದಿಂದ ಪಾರು ಮಾಡಲು  ಓಡಲು ಪ್ರಾರಂಭಿಸುತ್ತಾರೆ.

ಕೆಲ ಸೆಕೆಂಡುಗಳ ನಂತರ, ಮಹಿಳೆ ಮತ್ತು ಅವಳ ಮಗ ಪ್ಲಾಟ್ ಫಾರ್ಮ್ ಮೇಲೆ ಜಾರಿ ಕೆಳಗೆ ಬೀಳುವುದನ್ನು ಕಾಣಬಹುದು. ಆದರೆ ಆ ವೇಳೆ ಆರ್‌ಪಿಎಫ್‌ ಅಧಿಕಾರಿ ಸ್ಥಳಕ್ಕೆ ತಲುಪಿದ್ದು, ಯಾವುದೇ ಅಪಘಾತಕ್ಕೆ ಮೊದಲು ಅವರನ್ನು ರಕ್ಷಿಸುತ್ತಾರೆ. ಈ ವೇಳೆ ಇತರ ಜನರು ಸಹ ಅವರ ಕಡೆಗೆ ಧಾವಿಸುವುದನ್ನು ಕಾಣಬಹುದು.

ಈ ಘಟನೆಯನ್ನು ನಿಲ್ದಾಣದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದೆ. “ಪಶ್ಚಿಮ ಬಂಗಾಳದ ಬಂಕುರಾ ನಿಲ್ದಾಣದಲ್ಲಿ ಆರ್‌ಪಿಎಫ್‌ ಸಿಬ್ಬಂದಿ ಕೈಗೊಂಡ ಜಾಗರೂಕತೆ ಮತ್ತು ತ್ವರಿತ ಕ್ರಮವು ಚಲಿಸುತ್ತಿರುವ ರೈಲು ಹತ್ತುವಾಗ ಜಾರಿದ ವೃದ್ಧ ಮಹಿಳೆ ಮತ್ತು ಆಕೆಯ ಮಗನ ಜೀವಗಳನ್ನು ಉಳಿಸಿದೆ. ಪ್ರಯಾಣಿಕರು ಚಲಿಸುವ ರೈಲನ್ನು ಹತ್ತದಂತೆ ಅಥವಾ ಇಳಿಯದಂತೆ ವಿನಂತಿಸಲಾಗಿದೆ” ಎಂದು ರೈಲ್ವೆ ಸಚಿವಾಲಯ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.

ಟ್ವಿಟ್ಟರ್ ನಲ್ಲಿ ಹಂಚಿಕೊಂಡ ವೀಡಿಯೊಗೆ ಕಾಮೆಂಟ್ ಗಳು ಬಂದಿದ್ದು, ಇಂತಹ ಘಟನೆಗಳನ್ನು ತಪ್ಪಿಸಲು ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸುವಂತೆ ಬಳಕೆದಾರರು ಭಾರತೀಯ ರೈಲ್ವೆಗೆ ಸಲಹೆಗಳನ್ನು ನೀಡಿದರೆ, ಇನ್ನೂ ಕೆಲವರು “ವಾವ್! ಲೇಡಿ ಪೊಲೀಸ್‌ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ” ಗ್ರೇಟ್‌ ಜಾಬ್ ಆಫೀಸರ್” ಎಂದು ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಶ್ಲಾಘಿಸಿದ್ದಾರೆ.