ಚೀನಾದಲ್ಲಿ ಮತ್ತೊಂದು ಮಾಹಾಮಾರಿ ವೈರಸ್ ಪತ್ತೆ | 35 ಜನರಿಗೆ ಸೋಂಕು
ಮೊದಲೇ ಕೊರೊನಾ ಹಾವಳಿಯಿಂದ ನಲುಗಿದ ಜನತೆಗೆ ಈಗ ಮತ್ತೊಂದು ವೈರಸ್ ಪತ್ತೆಯಾಗಿದೆ ಎಂಬ ವರದಿ ಬರುತ್ತಿದೆ. ಚೀನಾದಲ್ಲಿ ಝೂನೋಟಿಕ್ ಲ್ಯಾಂಗ್ಯಾ ವೈರಸ್ ಪತ್ತೆಯಾಗಿದ್ದು, ಇದುವರೆಗೆ 35 ಜನರು ಈ ಸೋಂಕಿಗೆ ಒಳಗಾಗಿದ್ದಾರೆ ಎಂದು ತೈವಾನ್‌ನ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ತಿಳಿಸಿದೆ.
ಲಾಂಗ್ಯಾ ವೈರಸ್ ಚೀನಾದ ಶಾಂಡೊಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ಕಂಡುಬಂದಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂದು ತೈಪೆ ಟೈಮ್ಸ್ ವರದಿ ಮಾಡಿದೆ.
ಅಧ್ಯಯನದ ಪ್ರಕಾರ, ಮನುಷ್ಯನಿಂದ ಮನುಷ್ಯನಿಗೆ ಈ ವೈರಸ್ ಹರಡುವ ಬಗ್ಗೆ ವರದಿಯಾಗಿಲ್ಲ ಎಂದು
ತೈವಾನ್‌ನ ಸಿಡಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಚುವಾಂಗ್ ಜೆನ್-ಪ್ರಿಯಾಂಗ್ ಭಾನುವಾರ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ತೈಪೆಯು ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷಾ ವಿಧಾನವನ್ನು ಸ್ಥಾಪಿಸಲಿದ್ದು, ಅದು ವೈರಸ್ ಮತ್ತು ಅದರ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.