ದ.ಕ ಸೆಕ್ಷನ್ 144 ಆಗಸ್ಟ್ 14 ಮಧ್ಯರಾತ್ರಿಯವರೆಗೆ ವಿಸ್ತರಣೆ, ನಿರ್ಬಂಧ ಸಡಿಲಿಕೆ

ಮಂಗಳೂರು: ಕರಾವಳಿಯಲ್ಲಿ ಉದ್ವಿಗ್ನಗೊಂಡಿದ್ದ ವಾತಾವರಣ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆದಾಗಿಯೂ ಒಂದಿಷ್ಟು ಸಡಿಲಿಕೆ ಮತ್ತೆಂದಿಷ್ಟು ನಿರ್ಬಂಧಗಳು ಇನ್ನೊಂದು ವಾರಗಳ ಮಟ್ಟಿಗೆ ಮುಂದುವರಿಯುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್ 144 ಅನ್ನು ಆಗಸ್ಟ್ 14 ಮಧ್ಯರಾತ್ರಿಯವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಆದರೆ ಜಿಲ್ಲೆಯಾದ್ಯಂತ ಹೇರಿದ್ದ ಮಧ್ಯದ ಅಂಗಡಿ ಇವತ್ತು ಇತರ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮತ್ತು ತೆರೆಯುವ ಸಂಬಂಧಿತ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಶಸ್ತ್ರಾಸ್ತ್ರಗಳನ್ನು ಒಯ್ಯುವುದು, ಸಾರ್ವಜನಿಕ ಮೆರವಣಿಗೆಗಳು, ಪ್ರತಿಕೃತಿಗಳನ್ನು ಸುಡುವುದು ಅಥವಾ ಪ್ರತಿಭಟನೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಂಗಡಿಗಳ ಮುಚ್ಚುವಿಕೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ಸಡಿಲಿಸಿದ್ದಾರೆ. ಅಂಗಡಿ ಮುಚ್ಚುವಿಕೆಯ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮದ್ಯದಂಗಡಿಗಳು ಕೂಡಾ ಇನ್ನು ಎಂದಿನಂತೆ ತೆರೆದಿರಲಿದ್ದು, ಎಲ್ಲಾ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಬಹುದು. ಆದರೆ ಸೆಕ್ಷನ್ 144 ಜಾರಿಯಲ್ಲಿ ಇರುತ್ತದೆ.

Leave A Reply

Your email address will not be published.