ಮುಳ್ಳೇರಿಯಾ: ಭುಜಂಗ ಬಾರಾ ಒಂದು ಉಗ್ರ ಹೋರಾಟ ಉಂಟು!! ಸಿನಿಮಾವನ್ನು ಮೀರಿಸುವಂತೆ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿ-ಪೋಷಕರು ಪ್ರತಿಭಟಿಸಿದ್ದು ಯಾಕೆ!??
ಮುಳ್ಳೇರಿಯಾ:ಕಳೆದ ಒಂದೆರಡು ವರ್ಷಗಳ ಹಿಂದೆ ತೆರಕಂಡ ಚಿತ್ರವೊಂದರ ದೃಶ್ಯವನ್ನೇ ಹೋಲುವಂತಹ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆಯೊಂದು ಗಡಿನಾಡಿನಲ್ಲಿ ನಡೆದಿದೆ.ಸರ್ಕಾರಿ ಕನ್ನಡ ಶಾಲೆಯಲ್ಲಿ ಕನ್ನಡ ಮಾತನಾಡಲು ಬಾರದ ಶಿಕ್ಷಕರ ವಿರುದ್ಧ ನಡೆಯುವ ಪ್ರತಿಭಟನೆಯೊಂದು ಸರ್ಕಾರಿ ಹಿ. ಪ್ರಾ ಶಾಲೆ ಕಾಸರಗೋಡು ಎನ್ನುವ ಕನ್ನಡ ಸಿನಿಮಾದಲ್ಲಿ ಬರುವ ಒಂದು ದೃಶ್ಯ. ಅದೇ ದೃಶ್ಯವನ್ನು ಹೋಲುವ ನೈಜ ಘಟನೆಯೊಂದು ನಡೆದಿದ್ದು, ಇಲ್ಲಿ ಕನ್ನಡ ಬಾರದ ಶಿಕ್ಷಕಿಯ ವಿರುದ್ಧ ವಿದ್ಯಾರ್ಥಿಗಳು ಬೀದಿಗೆ ಇಳಿದಿದ್ದಾರೆ.
ಮುಳ್ಳೇರಿಯಾ ಸಮೀಪದ ಆದೂರು ಸರ್ಕಾರಿ ಪ್ರೌಢ ಶಾಲೆಗೆ ಭೌತಶಾಸ್ತ್ರ ವಿಭಾಗಕ್ಕೆ ಕನ್ನಡ ಬಾರದ ಶಿಕ್ಷಕಿಯನ್ನು ನೇಮಿಸಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿ ಬಷ್ಕಕರಿಸಿ ಪ್ರತಿಭಟಿಸಿದರು.
2019ರಲ್ಲಿ ಪೈವಳಿಕೆಯ ಶಾಲೆಯೊಂದಕ್ಕೆ ನೇಮಕಗೊಂಡಿದ್ದ ಶಿಕ್ಷಕಿಗೆ ಕನ್ನಡ ಬರುವುದಿಲ್ಲ ಎನ್ನುವ ಆರೋಪದಲ್ಲಿ ಪ್ರತಿಭಟನೆ ನಡೆಸಿದ್ದು, ಬಳಿಕ ಶಿಕ್ಷಕಿಗೆ ಮೈಸೂರಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜ್ಸ್ ಸಂಸ್ಥೆಯಲ್ಲಿ 10 ತಿಂಗಳ ತರಬೇತಿ ಪಡೆಯಲು ಕೋರ್ಟ್ ಆದೇಶಿಸಿತ್ತು.
ಅದರಂತೆ ತರಬೇತಿ ಮುಗಿಸಿ ಆದ್ದೂರು ಶಾಲೆಗೆ ನೇಮಕಗೊಂಡಿದ್ದು, ಈ ವೇಳೆ ಅರೆಬರೇ ಕನ್ನಡ ಮಾತನಾಡುತ್ತಾ ಮಾಡುವ ಪಠ್ಯಗಳು ಅರ್ಥವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದರು.ಕೂಡಲೇ ಶಿಕ್ಷಕಿಯನ್ನು ವರ್ಗಾಯಿಸಬೇಕು ಎನ್ನುವ ಆಗ್ರಹ ಕೇಳಿಬಂದಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಗೆ ಪೋಷಕರು ಬೆಂಬಲಿಸಿದರು.