ಕುಳಿತು ಏಳುವಷ್ಟರಲ್ಲಿ 250 ಇಡ್ಲಿ, 9 ಪ್ಲೇಟ್ ವೈಟ್ ರೈಸ್, 2.5 ಕೆಜಿ ಚಿಕನ್ ಬಿರಿಯಾನಿ- ಈ ಅಜ್ಜನ ಜೀರ್ಣ ಶಕ್ತಿಯೇ ಒಂದು ಅಚ್ಚರಿ !

ಈ ವಿಶ್ವ ಅನ್ನುವುದೇ ಒಂದು ವಿಸ್ಮಯ. ಅದರೊಳಗೆ ಇಂಟರ್ನೆಟ್ ಇನ್ನೊಂದು ಅಚ್ಚರಿ. ಮುಖ್ಯವಾಗಿ ಯೂಟ್ಯೂಬ್ನಲ್ಲಿ ಅಮ್ಯೂಸಿಂಗ್ ಮತ್ತು ಅಮೇಜಿಂಗ್ ವ್ಯಕ್ತಿತ್ವಗಳು ಕಂಡುಬರುತ್ತನೇ ಇರುತ್ತವೆ. ಅವರಲ್ಲಿ ಈತ ಕೂಡ ಒಬ್ಬ. ಹೌದು ಆತ ಸಪಾಟ್ ರಾಮನ್. ಊಟ ಅನ್ನುವುದು ಹಸಿವೆ ನೀಗಿಸಲು ಮತ್ತು ಹಲವು ಖಾದ್ಯಗಳ ರುಚಿ ಸವಿಯಲು ನಾವು ಮಾಡುತ್ತಿದ್ದೆವು. ನಂತರ ಊಟದ ಇವೆರಡೂ ಉಪಯೋಗದ ಜತೆಗೆ ಸ್ಟೈಲ್ ಸಹಾ ಸೇರಿಕೊಂಡಿತು. ಈಗೀಗ, ಏಳೆಂಟು ವರ್ಷಗಳಲ್ಲಿ ಊಟ ಬರೆ ಅಹಾರ ಸೇವನೆಯಲ್ಲ. ಅದೊಂದು ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಅಂಥ ಸ್ಪರ್ಧೆಯಲ್ಲಿ ಈ ಸಾಪಾಟ್ ರಾಮನ್ ಕೂಡಾ ಓರ್ವ ಸ್ಪರ್ಧಾಳು !

ಈತ ಊಟಕ್ಕೆ ಕುಳಿತರೆ ಒಂದೆರಡು ತುತ್ತಿನಲ್ಲಿ ಎದ್ದು ಕೂರುವ ಮನುಷ್ಯನಲ್ಲ. ಆತನ ಊಟದ ಶೈಲಿಯೇ ಅಷ್ಟು ವಿಚಿತ್ರ. ಅಡ್ಡಕ್ಕೆ ಬಾಚಿದ ತಲೆ ಕೂದಲನ್ನು ಎಡಗೈಯಿಂದ ಒಂದು ಸಲ ನೀವಿ, ಬಲಗೈಯಿಂದ ಬಾಳೆ ಎಲೆಗೆ ನೀರು ಚಿಮುಕಿಸಿ ಸವರಿದರೆ, ಕೆಲವೇ ನಿಮಿಷಗಳಲ್ಲಿ ಎಲೆ ಮುದುರಿ ಹೋಗುತ್ತದೆ. ಅಂಗೈ ತುಂಬಾ ಬಾಚಿ, ಒಂದೇ ಏಟಿಗೆ ಕುಳಿತು ಏಳುವಷ್ಟರಲ್ಲಿ 250 ಇಡ್ಲಿಯ ಜೊತೆಗೆ ಮಟನ್ ನಳ್ಳಿ ಮೂಳೆ ಮುರಿದು ಹಾಕಬಲ್ಲನೀತ. ಹಿಂದೆ ಒಂದು ಸಲ 4 ಪ್ಲೇಟ್ ಫುಲ್ ಮೀಲ್ಸ್ ಊಟ ಮಾಡಿದ್ದ ಇವ್ರು, ಆನಂತರ ತನ್ನದೇ ದಾಖಲೆಯನ್ನು ಮುರಿದು, 9 ಪ್ಲೇಟ್ ವೈಟ್ ರೈಸ್ ಜೊತೆಗೆ ಸಾಂಬಾರು ಮೊಸರು ಕಲಸಿ ಊಟ ಮಾಡಿ ಭರ್ಜರಿ ದಾಖಲೆ ಸೃಷ್ಟಿಸಿದ್ದಾರೆ ಸಾಪಾಟು ರಾಮನ್. ಅಲ್ಲದೆ, ಮನೆಯಲ್ಲಿ ಮಾಡಿದ ಎರಡೂವರೆ ಕೆಜಿ ಚಿಕನ್ ನೂಡಲ್ ಅನ್ನು ನಿರಾಯಸವಾಗಿ ಹೊಟ್ಟೆಗೆನಿಸಿಕೊಂಡಿದ್ದ ಮಹಾನ್ ಹೊಟ್ಟೆ ಬಾಕ ಈ ಸಾಪಾಟ್ ರಾಮನ್.

ಆತ 50 ನಾಟಿ ಕೋಳಿ ಮೊಟ್ಟೆಯ ಆಮ್ಲೆಟ್ ಅನ್ನು ಒಂದೊಂದಾಗಿ ಬಾಯಲ್ಲಿ ಹಾಕಿಕೊಂಡು18 ನಿಮಿಷಗಳಲ್ಲಿ ಕತ್ತರಿಸಿ ಹೊಟ್ಟೆಯೊಳಗೆ ಬಿಸಾಕಿದ್ದ. ಅಲ್ಲಿಂದ ಆತ ಮತ್ತಷ್ಟು ಫೇಮಸ್ ಆದರು. ಕೇವಲ ಮೂರು ದಿನಗಳ ಹಿಂದೆ ಒಂದು ಕೆಜಿ ಬಿರಿಯಾನಿಯನ್ನು ಕೇವಲ ಒಂದು ನಿಮಿಷದಲ್ಲಿ ಗುಳುಂ ಮಾಡಿದ್ದ ಸಪಾಟು ರಾಮನ್.

ಆತನ ಊಟ ಮಾಡುವ ಕೆಪ್ಯಾಸಿಟಿಯ ಬಗ್ಗೆ ಹೇಳಿಕೊಳ್ಳುವ ಮೊದಲು ಆತನ ವಯಸ್ಸನ್ನು ಗಮನಿಸಿ. ಭಾರತದಲ್ಲಿ ದೊಡ್ಡ ದೊಡ್ಡ ಊಟ ಹೊಡೆಯುವ ವ್ಯಕ್ತಿಗಳಿದ್ದಾರೆ. ಎಲ್ಲರೂ ಹುಡುಗರು ಅಥವಾ 40 ರ ಒಳಗಿನವರು. ಎಲ್ಲರಲ್ಲೂ ವಯೋ ಸಹಜವಾದ ಹಸಿವು ಮತ್ತು ಕಲ್ಲನ್ನು ಕರಗಿಸಿ ಹಾಕುವಂತಹ ಜೀರ್ಣ ಶಕ್ತಿ ಇರುತ್ತದೆ. ಆದರೆ ಈತನ ವಯಸ್ಸು 59 ವರ್ಷ !
ಇಂತಹಾ ಇಳಿ ಪ್ರಾಯದಲ್ಲಿ ಮಾಮೂಲಿ ಊಟ ಜೀರ್ಣ ಆಗೋದೇ ಕಷ್ಟ. ಅಂತದ್ದರಲ್ಲಿ, ಇಂಟರ್ನೆಟ್ ನಲ್ಲಿ ಸ್ಪರ್ಧಾತ್ಮಕ ಊಟ ಮಾಡಿ, ಕೊನೆಗೆ ಇದೊಂದು ಮಾಮೂಲಿ ಊಟ, ಇದೆಲ್ಲ ಮಾಮೂಲು ಎನ್ನುವಂತೆ ಇರುವ ಈತನ ಕೆಪಾಸಿಟಿ ಬಗ್ಗೆ ಈಗ ಮಾತು ಚಾಲ್ತಿಯಲ್ಲಿದೆ. ಈತ ಇವತ್ತಿನ ಇಂಟರ್ನೆಟ್ ಸೆನ್ಸೇಶನ್. ತಮಿಳುನಾಡಿನ ಈ ವ್ಯಕ್ತಿ ತನ್ನದೇ ಯುಟ್ಯೂಬ್ ತೆರೆದು ಲಕ್ಷಾಂತರ ಸಬ್ಸ್ಕ್ರೈಬರ್ ಗಳನ್ನು ಪಡೆದಿದ್ದಾರೆ. ಆತನ ಮಹಾನ್ ಊಟದ ಯು ಟ್ಯೂಬ್ ಲಿಂಕ್ ಇದೆ, ಕೊನೆಯಲ್ಲಿ ನೋಡಿ.

ನಿಮಗೆ ಗೊತ್ತಿದೆ ಆಹಾರಕ್ಕೆ ಸಂಬಂಧಿಸಿದ ಮತ್ತು ಭರ್ಜರಿ ಊಟಕ್ಕೆ ಸಂಬಂಧಿಸಿದ ಹಲವಾರು ಯುಟ್ಯೂಬ್ ಚಾನಲ್ ಗಳಿವೆ. ಸಾಮಾನ್ಯವಾಗಿ ದೊಡ್ಡ ಬಕಾಸುರ ಊಟ ಮಾಡುವವರು ಕೂಡಾ ನೋಡಲು ಭರ್ಜರಿಯಾಗಿಯೇ ಇರುತ್ತಾರೆ. ಆದರೆ ಈತ ನರಪೇತಲ ಅಸಾಮಿ. ಹೆಚ್ಚಿನ ಬಿಗ್ ಈಟರ್ ಗಳು ಸಣ್ಣ ಪ್ರಾಯದವರು. ಅಥವಾ ಮೂವತ್ತು ನಲ್ವತ್ತರ ಮಧ್ಯ ವಯಸ್ಕರು. ಅಲ್ಲೇ ಇರುವುದು ಈ ವ್ಯಕ್ತಿಯ ಸ್ಪೆಷಾಲಿಟಿ. ಕೈಯಲ್ಲಿ 59 ವರ್ಷವನ್ನು ಅದುಮಿ ಇಟ್ಟುಕೊಂಡು, ಊಟಕ್ಕೆ ಕೂರುವ ಈತನಿಗೆ ಈತನೇ ಸಾಟಿ.

ಪ್ರತಿ ಬಾರಿ ಕೂಡಾ ಆತ ಊಟಾದ ಸ್ಪರ್ಧೆಗೆ ಇಳಿಯುವ ಮುನ್ನ ಖುದ್ದು ಆತನ ಹೆಂಡತಿಯೇ ಆತನಿಗಾಗಿ ಮನೆ ಊಟ ಮಾಡಿ ಕೊಡುತ್ತಾಳೆ. ವಿಶೇಷ ಎಂದರೆ, ಇವರದ್ದೇ ಒಂದು ಆಯುರ್ವೇದಿಕ್ ಪ್ರಾಡಕ್ಟ್ ಕೂಡಾ ಇದೆ. ಜೀರ್ಣಶಕ್ತಿ ಹೆಚ್ಚಿಸುವ ಆ ಡೈಜೆಸ್ಟೀವ್ ಡ್ರಿಂಕ್ ಕೂಡಾ ತನ್ನ ಜೀರ್ಣಶಕ್ತಿಗೆ ಸಹಾಯ ಮಾಡ್ತಿದೆ ಅಂತಿದ್ದಾರೆ ಬ್ಯಾಟಿಂಗ್ ಮಲ್ಲ ಸಾಪಾಟ್ ರಾಮನ್.

Leave A Reply

Your email address will not be published.